Top

ರಾಮಮಂದಿರಕ್ಕೆ 'ಅಮೂಲ್ಯ' ದೇಣಿಗೆ ನೀಡಿದ ಸಿನಿ ಸ್ಟಾರ್ಸ್

1.50 ಲಕ್ಷ ದೇಣಿಗೆ ನೀಡಿದ ಅಮೂಲ್ಯ ದಂಪತಿ..!

ರಾಮಮಂದಿರಕ್ಕೆ ಅಮೂಲ್ಯ ದೇಣಿಗೆ ನೀಡಿದ ಸಿನಿ ಸ್ಟಾರ್ಸ್
X

ಇಡೀ ಭರತಭೂಮಿಯೇ ಕಾಯುತ್ತಿದ್ದ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಭವ್ಯ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕಾರ್ಯ ಭರದಿಂದ ಸಾಗುತ್ತಿದೆ. ಈ ಮಹತ್​ ಕಾರ್ಯಕ್ಕೆ ಸಿನಿಮಾ ಇಂಡಸ್ಟ್ರಿ ಸಹ ಕೈ ಜೋಡಿಸಿದ್ದು, ಯಾರೆಲ್ಲಾ ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ.

ಶತಮಾನಗಳ ಹೋರಾಟದ ಬಳಿಕ ಮಾರ್ಯಾದೆ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ತಲೆ ಎತ್ತಲು ವೇದಿಕೆ ಸಿದ್ಧವಾಗಿದೆ. ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಹೀಗಾಗಿ ಜನವರಿ 15ರಿಂದ ದೇಶಾದ್ಯಂತ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ.

ಅನೇಕ ರಾಜಕೀಯ ನಾಯಕರು, ರಾಮ ಭಕ್ತರು, ಉದ್ಯಮಿಗಳು, ನಟ-ನಟಿಯರು ಕೂಡ ಈಗ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ಸಮರ್ಪಣಾ ಅಭಿಯಾನದ ಹೆಸರಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಣೆ ನಡೆಯುತ್ತಿದೆ ಇದಕ್ಕೆ ಕನ್ನಡ ಚಿತ್ರರಂಗ ಕೂಡ ಕೈ ಜೋಡಿಸಿದೆ.

ರಾಮಮಂದಿರ ನಿರ್ಮಾಣಕ್ಕೆ ಸಿನಿ ಸ್ಟಾರ್ಸ್ ಕೂಡ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ಕನ್ನಡದ ನಟಿ ಅಮೂಲ್ಯಾ ಹಾಗೂ ಪತಿ ಜಗದೀಶ್ ಸಹ ರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತದ ಹಣವನ್ನೇ ದೇಣಿಗೆ ನೀಡಿದ್ದಾರೆ. ಅಮೂಲ್ಯ ಪತಿ ಜಗದೀಶ್ ಅವರು ಬರೋಬ್ಬರಿ 1.50 ಲಕ್ಷ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ. ದೇಣಿಗೆ ನೀಡಿದ ರಸೀದಿಯ ಚಿತ್ರವನ್ನು ಅಮೂಲ್ಯ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ದಂಪತಿ, 'ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ದೇಶಾದ್ಯಂತ ನಡೆಯುತ್ತಿದ್ದು, ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿ ವರ್ಷವೂ ಜನ್ಮದಿನಾಚರಣೆಗಾಗಿ ವ್ಯಯಿಸುತ್ತಿದ್ದ ಮೊತ್ತಕ್ಕೆ ನಮ್ಮಿಂದಾದ ಮೊತ್ತವನ್ನು ಸೇರಿಸಿ ಪ್ರಭು ಶ್ರೀರಾಮ ಮಂದಿರಕ್ಕಾಗಿ ಅರ್ಪಿಸಿದೆವು. ಈ ಕ್ಷಣ ನಮಗೆ ಅತ್ಯಂತ ಸಾರ್ಥಕತೆಯ ಕ್ಷಣವೆನಿಸಿತು ಅಂತ ಹೇಳಿದ್ದಾರೆ.

ಅಮೂಲ್ಯ ಮಾವ ರಾಜಕಾರಣಿ ಜಿ.ಎಚ್.ರಾಮಚಂದ್ರ ಅವರೂ ಸಹ ದೇಣಿಗೆ ನೀಡಿದ್ದು. ರಾಮಚಂದ್ರ ಅವರು ಬರೋಬ್ಬರಿ 1 ಲಕ್ಷ ಮೊತ್ತವನ್ನು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

ಕನ್ನಡದ ನಟಿ, ಬಹುಭಾಷಾ ತಾರೆ ಪ್ರಣಿತಾ ಸುಭಾಷ್ ಸಹ ರಾಮ ಮಂದಿರ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಈಗ ನಟಿ ಪ್ರಣೀತಾ ಸುಭಾಷ್​ ಶ್ರೀರಾಮಮಂದಿರಕ್ಕಾಗಿ ನಿಧಿ ಸರ್ಮಪಣೆ ಮಾಡಿರುವುದಲ್ಲದೆ, ಇತರರೂ ನಿಧಿ ಸಮರ್ಪಿಸುವಂತೆ ಮನವಿ ಮಾಡಿಕೊಂಡಿದ್ರು. ಶ್ರೀರಾಮ ಮಂದಿರ ನಿರ್ಮಾಣದಂಥ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೂ ನಿಧಿ ಸಮರ್ಪಿಸುವ ಮೂಲಕ ಕೈಜೋಡಿಸಬೇಕು ಎಂದು ಪ್ರಣೀತಾ ಕೋರಿಕೊಂಡಿದ್ದಾರೆ.

ಇನ್ನು ರಾಮಮಂದಿರಕ್ಕೆ ತಮ್ಮಿಂದ ಅಳಿಲು ಸೇವೆ ಮಾಡಿ ಅಂತ ನವರಸ ನಾಯಕ ಜಗ್ಗೇಶ್ ಕೂಡ ಕೇಳಿಕೊಂಡಿದ್ರು. 500 ವರ್ಷದ ಹೋರಾಟ ಫಲವಾಗಿ ದೇವಾಲಯ ಕಟ್ಟುವಂತಾಯಿತು. ತಾವು ರಾಮನ ಆಲಯಕ್ಕೆ ದೇಣಿಗೆ ನೀಡಿ ಆ ಕಟ್ಟಡದ ನಿರ್ಮಾಣ ಸೇವೆಗೆ ಕೈಜೋಡಿಸಿ ಅಳಿಲು ಸೇವೆ ಮಾಡಿ ಕೃತಾರ್ಥರಾಗಿ ಅಂತ ಸೋಶಿಯಲ್​ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ರು.

ಇನ್ನು ಟಾಲಿವುಡ್ ಪವರ್​ಸ್ಟಾರ್ ಪವನ್ ಕಲ್ಯಾಣ್​ ಕೂಡ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಜನಸೇನಾ ಪಕ್ಷದ ಅಧ್ಯಕ್ಷರು ಕೂಡ ಆಗಿರೋ ಪವನ್ ಕಲ್ಯಾಣ್​​ ರಾಮಮಂದಿರ ನಿರ್ಮಾಣಕ್ಕೆ 30 ಲಕ್ಷ ದೇಣಿಗೆ ನೀಡಿದ್ದಾರೆ. ರಾಮ ಮಾಡಿದ ತ್ಯಾಗ ಹಾಗೂ ತೋರಿದ ಧೈರ್ಯ ನಮಗೆಲ್ಲರಿಗೂ ಸ್ಫೂರ್ತಿ. ಅಯೋಧ್ಯೆಯಲ್ಲಿ ದೇವಾಲಯ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ ಅಂತ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಬಾಲಿವುಡ್ ಸ್ಟಾರ್ ಅಕ್ಷಯ್​ ಕುಮಾರ್ ಕೂಡ ದೊಡ್ಡ ಮೊತ್ತದ ದೇಣಿಗೆಯನ್ನೇ ನೀಡಿದ್ದಾರೆ. ಜೊತೆಗೆ ನಮ್ಮಲ್ಲಿ ಕೆಲವರು ವಾನರರಾಗೋಣ, ಕೆಲವರು ಅಳಿಲುಗಳಾಗೋಣ ಎಂದು ಹೇಳುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸುವಂತೆ ಫ್ಯಾನ್ಸ್ ಗಳಿಗೆ ಮನವಿ ಮಾಡಿದ್ದರೆ.

Next Story

RELATED STORIES