Top

ತೂಗುದೀಪ ಫಾರ್ಮ್​ನಲ್ಲಿ ದಚ್ಚು ಸಂಕ್ರಾಂತಿ ಸಡಗರ

ಸ್ನೇಹಿತರ ಜೊತೆಗೂಡಿ ಕಿಚ್ಚು ಹಾಯಿಸಿದ ಸಂಭ್ರಮಿಸಿದ ದಚ್ಚು

ತೂಗುದೀಪ ಫಾರ್ಮ್​ನಲ್ಲಿ ದಚ್ಚು ಸಂಕ್ರಾಂತಿ ಸಡಗರ
X

ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಕೊರೊನಾ ನಡುವೆಯೂ ಜನ ಹಬ್ಬ ಆಚರಿಸಿ,ಹೊಸ ವರ್ಷವನ್ನ ಬರಮಾಡಿಕೊಂಡಿದ್ದಾರೆ. ಹಾಗೇ ನಮ್ಮ ಚಾಲೆಂಜಿಂಗ್​ ಸ್ಟಾರ್ ಕೂಡ ಅಷ್ಟೇ ಸಂಭ್ರಮದಿಂದ ಕಿಚ್ಚು ಹಾಯಿಸಿ ಮೈಸೂರಿನ ತಮ್ ಫಾರ್ಮ್​ ಹೌಸ್​ನಲ್ಲಿ ಅದ್ದೂರಿಯಾಗಿ ಸಂಕ್ರಾಂತಿ ಸೆಲೆಬ್ರೇಟ್ ಮಾಡಿದ್ದಾರೆ.

ಕೊರೊನಾ ಆತಂಕದಿಂದ ಕೊಂಚ ದೂರವಾಗಿರೋ ನಮ್ಮ ಜನ ಸಂತಸದಿಂದ ವರ್ಷದ ಮೊದಲ ಹಬ್ಬವನ್ನ ಆಚರಿಸಿದ್ದಾರೆ. ಸಂಕ್ರಾಂತಿ ಹಬ್ಬದ ಮೂಲಕ 2021 ಇಸವಿಯನ್ನು ಬರಮಾಡಿಕೊಂಡಿದ್ದಾರೆ. ಹಾಗೇ ಸ್ಯಾಂಡಲ್​ವುಡ್​​ ಡಿ ಬಾಸ್ ದರ್ಶನ್​ ಕೂಡ ಪ್ರತಿವರ್ಷದಂತೆ ಈ ವರ್ಷ ಕೂಡ ಅದ್ದೂರಿಯಾಗಿ ಸಂಕ್ರಾಂತಿ ಆಚರಿಸಿದ್ದಾರೆ.


ಮೊನ್ನೆ ಮೊನ್ನೆಯಷ್ಟೇ ವೈಲ್ಡ್​ ಲೈಫ್​ ಫೋಟೋಗ್ರಫಿಗೆ ಮುಗಿಸಿ, ಮೈಸೂರಿನ ತಮ್ಮ ತೂಗುದೀಪ ಫಾರ್ಮ್​ನಲ್ಲೇ ಬೀಡುಬಿಟ್ಟಿದ್ದ ದಚ್ಚು, ಸ್ನೇಹಿತರ ಜೊತೆ ಸಂಕ್ರಾಂತಿ ಆಚರಿಸಿದ್ದಾರೆ. ಫಾರ್ಮ್​ ಹೌಸ್​ನಲ್ಲಿರುವ ಹಸು, ಕುದುರೆ. ಕುರಿಗಳಿಗೆ ವಿಶೇಷವಾಗಿ ಸಿಂಗರಿಸಿ, ಪೂಜೆ ಮಾಡಿದ್ದಾರೆ. ಎಲ್ಲಾ ಪ್ರಾಣಿಗಳಿಗೂ ಸ್ವತಃ ದರ್ಶನ್ ಅವುಗಳ ಆಹಾರ ರೆಡಿಮಾಡಿ ಬಾಯಿಗೆ ತುತ್ತಿಟ್ಟಿರೋದು ವಿಶೇಷವಾಗಿದೆ.

ಎಲ್ಲಾ ಪ್ರಾಣಿಗಳಿಗೆ ಆರತಿ ಮಾಡಿ, ದಚ್ಚು ಮತ್ತು ಸ್ನೇಹಿತರು ಸಂಕ್ರಾಂತಿ ಹಬ್ಬದ ವಿಶೇಷ ಕಿಚ್ಚು ಹಾಯಿಸಿ ಸಂಭ್ರಮಿಸಿದ್ದಾರೆ. ಅದರಲ್ಲೂ ದರ್ಶನ್ ತಮ್ಮ ನೆಚ್ಚಿನ ಬಿಳಿ ಕುದುರೆಯನ್ನು ಕಿಚ್ಚು ಹಾಯಿಸಿ ಖುಷಿ ಪಟ್ಟಿದ್ದಾರೆ. ಹಾಗೂ ಬಣ್ಣ ಬಣ್ಣದ ರಂಗೋಲಿ ಕೂಡ ಗಮನ ಸೆಳೆಯುತ್ತಿದೆ.


ಸಂಕ್ರಾಂತಿ ಹಬ್ಬ ಅಂದ್ರೆ ಹಳ್ಳಿಗಳ ಕಡೆ ಕಿಚ್ಚು ಹಾಯಿಸೋ ಪದ್ಧತಿಯೇ ಬಹು ಮುಖ್ಯವಾಗಿರುತ್ತೆ. ಆದರೆ, ಈ ಬಾರಿ ದಚ್ಚು ಫ್ಯಾನ್ಸ್​​ ವಿಶೇಷವಾಗಿ ಸಂಕ್ರಾಂತಿ ಆಚರಿಸಿದ್ದಾರೆ. ಹಸು ಮತ್ತು ಎತ್ತುಗಳಿಗೆ ವಿಶೇಷವಾಗಿ ಸಿಂಗಾರ ಮಾಡಿ, ಅವುಗಳ ಮೇಲೆ ಡಿ ಬಾಸ್, ರಾಬರ್ಟ್ ಎಂದು ಬರೆದು ಕಿಚ್ಚು ಹಾಯಿಸಿದ್ದಾರೆ.

ದರ್ಶನ್ ತೋಟದ ಮನೆಯ ಸಂಕ್ರಾಂತಿ ಸಂಭ್ರಮದ ವಿಡಿಯೋವನ್ನು ದಚ್ಚು ಅಭಿಮಾನಿ ಬಳಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಸದ್ಯ ಫೋಟೋಸ್​ ಮತ್ತು ವಿಡಿಯೋಸ್​ ವೈರಲ್​ ಆಗಿದೆ.


Next Story

RELATED STORIES