Top

ಬ್ಲಾಕ್​ ಕೋಬ್ರಾ ದುನಿಯಾ ವಿಜಯ್​ ಬರ್ತ್​ಡೇಗೆ ಬ್ರೇಕ್

ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಟೈಟಲ್​ ಟ್ರ್ಯಾಕ್​ ಗಿಫ್ಟ್

ಬ್ಲಾಕ್​ ಕೋಬ್ರಾ ದುನಿಯಾ ವಿಜಯ್​ ಬರ್ತ್​ಡೇಗೆ ಬ್ರೇಕ್
X

ಕೊರೊನಾ ಹಾವಳಿಯಿಂದ ಈ ಬಾರಿ ಎಲ್ಲಾ ಸೆಲೆಬ್ರೆಟಿಗಳ ಬರ್ತ್​ಡೇಗೂ ಬ್ರೇಕ್​ ಬಿದ್ದಿದೆ. ಅದೇ ರೀತಿ ಇದೇ ಜನವರಿ 20 ರಂದು ದುನಿಯಾ ವಿಜಿ ಕೂಡ ತಮ್ಮ ಹುಟ್ಟುಹಬ್ಬಕ್ಕೆ ಬ್ರೇಕ್​ ಹಾಕಿದ್ದು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಬರ್ತ್​ಡೇ ಸೆಲೆಬ್ರೇಷನ್​ ಬದಲು, ಪುಣ್ಯದ ಕೆಲಸಕ್ಕೆ ನಾವೆಲ್ಲಾ ಕೈ ಜೋಡಿಸೋಣ ಅಂತ ಹೇಳಿದ್ದಾರೆ. ಅದರ ಜೊತೆಗೆ ಒಂದು ಗಿಫ್ಟ್ ಕೂಡ ಕೊಡುತ್ತಿದ್ದಾರೆ.

ಕೊರೊನಾ ರಣಕೇಕೆಯಿಂದ ಈ ಬಾರಿ ಸ್ಯಾಂಡಲ್​ವುಡ್​ನ ಯಾವ ಸ್ಟಾರ್​ಗಳು ಕೂಡ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಇದೇ ಹಾದಿಯಲ್ಲಿ ಜನವರಿ 20 ರಂದು ಇದ್ದ ದುನಿಯಾ ವಿಜಿ ಬರ್ತ್​ಡೇ ಸೆಲೆಬ್ರೇಷನ್​ಗೂ ಕೂಡ ಬ್ರೇಕ್​ ಬಿದ್ದಿದೆ. ಸಂಕ್ರಾಂತಿ ಹಬ್ಬದ ದಿನ ಫೇಸ್​ಬುಕ್​ ಲೈವ್​ ಬಂದಿದ್ದ ನಟ ದುನಿಯಾ ವಿಜಯ್​ ಸ್ವತಃ ಅಭಿಮಾನಿಗಳ ಜೊತೆ ಈ ವಿಚಾರವನ್ನ ಶೇರ್​ ಮಾಡಿಕೊಂಡಿದ್ದಾರೆ.

ಅಭಿಮಾನಿಗಳ ಜೊತೆ ಲೈವ್​ನಲ್ಲಿ ಮಾತನಾಡಿದ ದುನಿಯಾ ವಿಜಯ್, ಈ ಭಾರಿ ಬರ್ತ್​ಡೇ ಸೆಲೆಬ್ರೇಷನ್​ ಬೇಡ. ನಾನು ಊರಿನಲ್ಲಿ ಇರೋದಿಲ್ಲ. ಕೊರೊನಾದಿಂದ ಯಾರಿಗೂ ತೊಂದರೆಯಾಗಬಾರದು. ಹಾಗಾಗಿ ನೀವು ಇದ್ದ ಕಡೆಯಿಂದಲೇ ನನಗೆ ಹರಸಿ, ಹಾರೈಸಿ ಅಂತ ಮನವಿ ಮಾಡಿದ್ದಾರೆ.

ಇನ್ನು ಬರ್ತ್​ಡೇ ಸೆಲೆಬ್ರೇಷನ್​ ಇಲ್ಲದ ಕಾರಣ, ಅಭಿಮಾನಿಗಳ ಬೇಸರ ತಣಿಸೋಕ್ಕೆ ದುನಿಯಾ ವಿಜಯ್​ ಉಡುಗೊರೆಯೊಂದನ್ನ ಕೊಡುತ್ತಿದ್ದಾರೆ. ಜನವರಿ 20 ಅಂದ್ರೆ ದುನಿಯಾ ವಿಜಯ್​ ಹುಟ್ಟುಹಬ್ಬದ ದಿನ ಸಲಗ ಚಿತ್ರದ ಟೈಟಲ್​ ಟ್ರ್ಯಾಕ್​ ಬಿಡುಗಡೆ ಮಾಡುತ್ತಿದ್ದಾರೆ.

ಅಂದ್ಹಾಗೇ ಬತ್​ರ್ಡೇ ಸೆಲೆಬ್ರೇಷನ್​ ಬದಲಾಗಿ, ಒಂದೊಳ್ಳೆ ಕೆಲಸಕ್ಕೆ ನಾವೆಲ್ಲಾ ಕೈ ಜೋಡಿಸೋಣ ಅಂತ ದುನಿಯಾ ವಿಜಯ್​ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಹೊಸಪೇಟೆಯಲ್ಲಿ ಅನ್ನಪೂರ್ಣೇಶ್ವರಿ ವಿದ್ಯಾಪೀಠ ಪ್ರೌಢ ಶಾಲೆ ಇದೆ. ಆರ್ಥಿಕವಾಗಿ ಹಿಂದಿರುವ ಕುಟುಂಬದ ಮಕ್ಕಳನ್ನು ವಿಶೇಷವಾಗಿ 8, 9, 10ನೇ ತರಗತಿ ಮಕ್ಕಳನ್ನು ಈ ಶಾಲೆಗೆ ಕರೆದುಕೊಂಡು ಸೇರಿಸಿ, ಆ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಈ ಸಂಸ್ಥೆಯದ್ದು..ಈ ಸಂಸ್ಥೆಯ ಜೊತೆ ನಾನು ಇದ್ದೇನೆ ಎಂದು ಮನವಿ ಮಾಡಿದ್ದಾರೆ.

ಅಂದ್ಹಾಗೇ ಈ ಸಂದರ್ಭದಲ್ಲಿ ಮಾತನಾಡಿದ ದುನಿಯಾ ವಿಜಯ್​ ಯಾವುದೇ ಕಾರಣಕ್ಕೂ ಸಲಗ ಸಿನಿಮಾ ಓಟಿಟಿ ರಿಲೀಸ್​ ಆಗೋದಿಲ್ಲ. ಥಿಯೇಟರ್​ನಲ್ಲಿಯೇ ತೆರೆಕಾಣಲಿದೆ. ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಸಲಗ ರಿಲೀಸ್​ ಡೇಟ್​ ಅನೌನ್ಸ್​ ಮಾಡೊದಾಗಿ ಹೇಳಿದ್ದಾರೆ.

Next Story

RELATED STORIES