Top

ಶುಕ್ರವಾರ ಬೆಳಂಬೆಳಗ್ಗೆ ಚಾರ್ಲಿ ಕಡೆಯಿಂದ ಬಿಗ್ ಸರ್ಪ್ರೈಸ್

ಸೋಶಿಯಲ್​ ಮೀಡಿಯಾದಲ್ಲಿ ಅನೌನ್ಸ್​ ಮಾಡಿದ ಸಿಂಪಲ್ ಸ್ಟಾರ್

ಶುಕ್ರವಾರ ಬೆಳಂಬೆಳಗ್ಗೆ ಚಾರ್ಲಿ ಕಡೆಯಿಂದ ಬಿಗ್ ಸರ್ಪ್ರೈಸ್
X

ಲಾಕ್​ಡೌನ್​ ನಂತ್ರ ಮತ್ತೆ ಶೂಟಿಂಗ್​ ಶುರುಮಾಡಿದ ಚಾರ್ಲಿ 777 ಟೀಂ, ಬ್ಯಾಕ್​ ಟು ಬ್ಯಾಕ್​ ಶೆಡ್ಯೂಲ್​ನಲ್ಲಿ 90 ಪರ್ಸೆಂಟ್ ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾದ ಮೋಶನ್ ಪೋಸ್ಟರ್, ಟ್ರೇಲರ್, ಮೇಕಿಂಗ್​ ಈಗಾಗ್ಲೇ ನೋಡಿದ್ದೀವಿ. ಆದರೆ, ಇದಕ್ಕೂ ಮೀರಿದ ಸರ್​ಪ್ರೈಸ್​ ಒಂದನ್ನ ಕೊಡೊಕ್ಕೆ ರೆಡಿಯಾಗಿದೆ ಚಾರ್ಲಿ ಟೀಂ. ಈ ಸರ್​ಪ್ರೈಸ್ ವಿಚಾರವನ್ನ ಸ್ವತಃ ರಕ್ಷಿತ್​ ಶೆಟ್ಟಿ ಶೇರ್ ಮಾಡಿಕೊಂಡಿದ್ದಾರೆ.

ಚಾರ್ಲಿ 777. ಬ್ಯಾಕ್​ ಟು ಬ್ಯಾಕ್​ ಶೆಡ್ಯೂಲ್​ನಲ್ಲಿ ಬೆಂಗಳೂರು, ಕೊಡೈಕೆನಾಲ್​ ಅಂತ ಸುತ್ತಾಡಿ 90 ಪರ್ಸೇಂಟ್ ಶೂಟಿಂಗ್​ ಮುಗಿಸಿ ವಾಪಸ್ಸಾಗಿದ್ದಾರೆ. ಈಗಾಗಲೇ ಸಿನಿಮಾ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಇದ್ದು, ಚಿತ್ರದ ಪ್ರತಿ ಅಪ್​​ಡೇಟ್​ಗಾಗಿ ಕಾಯ್ತಾನೇ ಇದ್ದಾರೆ ರಕ್ಷಿತ್ ಫ್ಯಾನ್ಸ್.

ಇದೀಗ ಸ್ವತಃ ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ, ಒಂದೊಳ್ಳೆ ಸರ್ಪ್ರೈಸ್​ ಕೊಡೋ ವಿಚಾರವನ್ನ ತಮ್ಮ ಸೋಶಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಬರೆದುಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ 7.30ಕ್ಕೆ ನಿಮಗೆಲ್ಲಾ ಸರ್ಪ್ರೈಸ್ ಕಾದಿದೆ ಜೊತೆಗೆ ಬಿಗ್ ಅನೌನ್ಸ್ ಮೆಂಟ್ ಎಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಇನ್ನು ಇದೇ ಪೋಸ್ಟರ್​ನ್ನ ನಿರ್ದೇಶಕ ಕಿರಣ್​ ರಾಜ್​ ಕೂಡ ಶೇರ್​ ಮಾಡಿದ್ದು, ಏನಿದು ಸರ್ಪ್ರೈಸ್ ಅನ್ನೋ ಕುತೂಹಲ ಶುರುವಾಗಿದೆ. ಈಗಾಗಲೇ ಪೋಸ್ಟರ್, ಮೇಕಿಂಗ್, ಟ್ರೈಲರ್​ ಬಿಡುಗಡೆಯಾಗಿರೋದ್ರಿಂದ ಚಾರ್ಲಿ 777 ಸಾಂಗ್​ ರಿಲೀಸ್​ ಮಾಡೋದರ ಮೂಲಕ ಸರ್​ಪ್ರೈಸ್ ಕೊಡಬಹುದು ಅಥವಾ ಸಿನಿಮಾ ರಿಲೀಸ್​ ಡೇಟ್ ಅನೌನ್ಸ್​ ಮಾಡಬಹುದು ಅನ್ನೋದು ಸಿನಿಪ್ರಿಯರ ಊಹೆ.

777 ಚಾರ್ಲಿ ಪರಮ್ವಾ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲ್ಮ್ ಬ್ಯಾನರ್ ನಲ್ಲಿ ರೆಡಿಯಾಗುತ್ತಿದೆ. ಅದೇನೆ ಇರ್ಲಿ ಚಾರ್ಲಿ 777 ಸಿನಿಮಾ ಶುರುವಾದಾಗಿನಿಂದ ಇಲ್ಲಿಯವರೆಗೂ ಒಂದಲ್ಲ ಒಂದು ರೀತಿ ಸುದ್ದಿ ಮಾಡ್ತಾನೇ ಇದೆ. ಆದರೆ, ಶುಕ್ರವಾರ ಆಗಲಿರೋ ಆ ಬಿಗ್​ ಅನೌನ್ಸ್​ಮೆಂಟ್ ಏನು ಅನ್ನೋದ್ರ ಮೇಲೆ ಸದ್ಯ ಎಲ್ಲರ ದೃಷ್ಟಿ ನಾಟಿದೆ.

Next Story

RELATED STORIES