Top

ಫ್ಯಾಂಟಂಗೂ ಮೊದಲೇ ಹೊಸ ಚಿತ್ರಕ್ಕೆ ಕಿಚ್ಚ ಗ್ರೀನ್​ಸಿಗ್ನಲ್

  • ಅಶ್ವತ್ಥಾಮನನ್ನ ತೆರೆಮೇಲೆ ತರಲಿದ್ದಾರೆ ಕಿಚ್ಚ ಸುದೀಪ್​.
  • ಸ್ಯಾಂಡಲ್​ವುಡ್​ಗೆ ಕಿಚ್ಚ ಸುದೀಪ್ ಕುಟುಂಬದ ಕುಡಿ.
  • ಅಶ್ವತ್ಥಾಮನಾಗಿ ಎಂಟ್ರಿ ಕೊಡಲಿದ್ದಾರಾ ಸಂಚಿತ್.

ಫ್ಯಾಂಟಂಗೂ ಮೊದಲೇ ಹೊಸ ಚಿತ್ರಕ್ಕೆ ಕಿಚ್ಚ ಗ್ರೀನ್​ಸಿಗ್ನಲ್
X

ಸ್ಯಾಂಡಲ್​​ವುಡ್​ ಬಾದ್ಶಾ ಕಿಚ್ಚ ಸುದೀಪ್​ ಸದ್ಯ ಫ್ಯಾಂಟಂ ಶೂಟಿಂಗ್​ನಲ್ಲಿ ಬ್ಯುಸಿ. ಮತ್ತೊಂದುಕಡೆ ಕೋಟಿಗೊಬ್ಬ 3 ರಿಲೀಸ್​ಗೆ ರೆಡಿಯಾಗಿದೆ. ಅಷ್ಟೇಅಲ್ಲ, ಜೋಗಿ ಪ್ರೇಮ್​ ಕೂಡ ಕಿಚ್ಚನ ಬತ್​ರ್ಡೇಗೆ ಹೊಸ ಸಿನಿಮಾ ಅನೌನ್ಸ್​ ಮಾಡಿದ್ದಾರೆ. ಇದೇ ಗ್ಯಾಪ್​ನಲ್ಲಿಗ ಕಿಚ್ಚ ಮತ್ತೊಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್​ ಕೊಟ್ಟಿದ್ದಾರೆ. ಈ ಸುದ್ದಿ ಕೇಳಿ ಕಿಚ್ಚನ ಫ್ಯಾನ್ಸ್​ ಸಖತ್​ ಥ್ರಿಲ್ ಆಗಿದ್ದಾರೆ. ಹಾಗಂತ ಈ ಚಿತ್ರದಲ್ಲಿ ಕಿಚ್ಚ ಹೀರೋ ಅಲ್ಲ ಅನ್ನೋದೇ ಇಂಟ್ರೆಸ್ಟಿಂಗ್.

ಸ್ಯಾಂಡಲ್​ವುಡ್​ನ ಬಾದ್ಶಾ ಕಿಚ್ಚ ಸುದೀಪ್​ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಫ್ಯಾಟಂ ಸಿನಿಮಾ ಸಖತ್​ ಕ್ರೇಜ್​ ಕ್ರಿಯೇಟ್ ಮಾಡಿದ್ದು, ಇದೀಗ ಇದೇ ಜೋಡಿ ಮತ್ತೊಂದು ಸಿನಿಮಾ ಮಾಡೋಕ್ಕೆ ಸಜ್ಜಾಗಿದ್ದಾರೆ. ಫ್ಯಾಂಟಂ ಸಿನಿಮಾ ಶೂಟಿಂಗ್​ ಶುರುವಾಗುತ್ತಿದ್ದ ಹಾಗೇ, ಅನೂಪ್​ ಭಂಡಾರಿ ವರ್ಕಿಂಗ್​ ಸ್ಟೈಲ್​ ಇಷ್ಟವಾಗಿದ್ದು, ಮತ್ತೊಮ್ಮೆ ಅನೂಪ್​ಗೆ ಆ್ಯಕ್ಷನ್ ಕಟ್ ಹೇಳೋ ಚಾನ್ಸ್​ ಕೊಟ್ಟಿದ್ದಾರೆ ಕಿಚ್ಚ.

ಅನೂಪ್​ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಮತ್ತೊಂದು ಹೊಸ ಚಿತ್ರವನ್ನ ಒಪ್ಪಿಕೊಂಡಿದ್ದು, ಸಿನಿಮಾಗೇ ಅಶ್ವತ್ಥಾಮ ಅಂತ ಟೈಟಲ್​ ಕೂಡ ಫಿಕ್ಸ್​ ಅಗಿದೆ. ಹಾಗಂತ ಅನೂಪ್​ ನಿರ್ದೇಶನದಲ್ಲಿ ಕಿಚ್ಚ ನಾಯಕನಾಗಿ ಕಾಣಿಸಿಕೊಳ್ಳದೇ, ಚಿತ್ರಕ್ಕೆ ಬಂಡವಾಳ ಹಾಕೋಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಕಿಚ್ಚ ಕ್ರಿಯೇಷನ್ಸ್​​ ಅಡಿಯಲ್ಲಿ ಅಶ್ವತ್ಥಾಮ ಸಿನಿಮಾ ನಿರ್ಮಾಣವಾಗಲಿದ್ದು, ಸದ್ಯ ಅಫೀಶೀಯಲ್​ ಆಗಿ ಚಿತ್ರದ ಟೈಟಲ್​ ಪೋಸ್ಟರ್​ನ್ನ ರಿಲೀಸ್ ಮಾಡಲಾಗಿದೆ.


ಅಂದ್ಹಾಗೇ ಕಿಚ್ಚ ನಿರ್ಮಾಣದ ಈ ಸಿನಿಮಾದಲ್ಲಿ ನಾಯಕ ಯಾರಾಗ್ತಾರೆ ಅನ್ನೋ ಕುತೂಹಲವಂತೂ ಇದ್ದೇ ಇದೆ. ಟೈಟಲ್​ ಪೋಸ್ಟರ್ ನೋಡುತ್ತಿದ್ರೆ, ಈ ಪೋಸ್ಟರ್​ನಲ್ಲಿ ಬಿಲ್ಲು ಹಿಡಿದ ಅಶ್ವತ್ಥಾಮನೂ ಇದ್ದಾನೆ, ಗನ್​ ಹಿಡಿದಿರುವ ಅಶ್ವತ್ಥಾಮನೂ ಇದ್ದಾನೆ. ಇನ್ನು ಇಂಟ್ರೆಸ್ಟಿಂಗ್​ ಅನ್ನಿಸುವಂತೆ ಈ ಪೋಸ್ಟರ್​ನಲ್ಲಿ ಅಶ್ವತ್ಥಾಮನ ಹೆಸರು, ತಂದೆ ಹೆಸರು, ವಯಸ್ಸು,ಲೋಕೇಷನ್ ಹೀಗೆ ಒಂದಷ್ಟು ಬಯೋಡೇಟಾ ಕೂಡ ಇದೆ.

ಪ್ರಪಂಚದ ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾದ ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮ. 'ದ್ರೋಣಾಚಾರ್ಯರ ಪುತ್ರ, ಮಹಾಭಾರತದಲ್ಲಿ ಕಂಡು ಬಂದ ದೊಡ್ಡ ಬಿಲ್ವಿದ್ಯಾ ಪರಿಣತ, ತನ್ನ ತಂದೆಯನ್ನು ಮೋಸದಿಂದ ಕೊಂದ ಪಾಂಡವರನ್ನು ಕೊಲ್ಲಲು ಹೊರಟ ಧೀರ ಈ ಅಶ್ವತ್ಥಾಮ. ಈ ಎಲ್ಲ ಅಂಶಗಳನ್ನು ಮಾಡರ್ನೈಸ್‌ ಮಾಡಲಿದ್ದಾರೆ ಅನೂಪ್​ ಭಂಡಾರಿ.ಈಗಾಗಲೇ ಸಿನಿಮಾದ ಒನ್‌ಲೈನ್‌ ಮತ್ತು ಮೊದಲರ್ಧವನ್ನು ಬರೆದಿಟ್ಟಿದ್ದು, ಇದೊಂದು ಆ್ಯಕ್ಷನ್‌ ಥ್ರಿಲ್ಲರ್‌ ಸಬ್ಜೆಕ್ಟ್ ಆಗಲಿದ್ಯಂತೆ.

ಒಟ್ನಲ್ಲಿ ಈ ಚಿತ್ರದ ಪೋಸ್ಟರ್​ ನೋಡ್ತಿದ್ರೆ ಕಿಚ್ಚನ ಅಭಿಮಾನಿಗಳು ಕಿಚ್ಚನೇ ನಾಯಕನಾಗಲಿದ್ದಾರೆ ಅಂದುಕೊಂಡಿದ್ರೆ , ಮತ್ತೊಂದ್ಕಡೆ ಚಿತ್ರರಂಗಕ್ಕೆ ಎಂಟ್ರಿ ಕೊಡ್ಬೇಕು ಅಂತಿರೋ ಕಿಚ್ಚ ಫ್ಯಾಮಿಲಿಯ ಕುಡಿ ಸಂಚಿತ್ ಹೀರೋ ಆಗಲಿದ್ದಾರೆ ಅನ್ನೋ ಮಾತು ಕೇಳಿಬರ್ತಿದೆ. ಸದ್ಯದಲ್ಲೇ ಎಲ್ಲಾ ಪ್ರಶ್ನೆಗಗಳಿಗೂ ಉತ್ತರ ಕೊಡಲಿದೆ ಚಿತ್ರತಂಡ.

Next Story

RELATED STORIES