Top

ಪ್ರೇಮಿಗಳ​ ದಿನಾಚರಣೆಯಂದೇ ಆದಿ-ನಿಧಿಮಾ ಮದುವೆ ಫಿಕ್ಸ್

ಸಿನಿಮಾ ಸಕ್ಸಸ್​ ಮೀಟ್​ನಲ್ಲಿ ಪ್ರೀತಿ ವಿಚಾರ ಬಿಚ್ಚಿಟ್ಟಿದ್ದ ಡಾರ್ಲಿಂಗ್ಸ್

ಪ್ರೇಮಿಗಳ​ ದಿನಾಚರಣೆಯಂದೇ ಆದಿ-ನಿಧಿಮಾ ಮದುವೆ ಫಿಕ್ಸ್
X

ಸ್ಯಾಂಡಲ್​ವುಡ್ನ ಮುದ್ದಾದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಈಗಾಗಲೇ ಆದಿ ನಿಧಿಮಾ ಆಗಿ ಕನ್ನಡಿಗರ ಮನ ಗೆದ್ದಿದ್ದಾರೆ. ಈ ರೀಲ್​ ಜೋಡಿ ರಿಯಲ್​ ಲೈಫ್​ನಲ್ಲೂ ಲವ್​ ಬರ್ಡ್ಸ್ ಅನ್ನೋದು ಗೊತ್ತಿರೋ ವಿಚಾರ. ಆದ್ರೀಗ ಇವರಿಬ್ಬರ ಪ್ರೀತಿಗೆ ಮದುವೆ ಅನ್ನೋ ಅಧೀಕೃತ ಮುದ್ರೆ ಬೀಳೋ ಸಮಯ ಬಂದಾಗಿದೆ.

ಸ್ಯಾಂಡಲ್​ವುಡ್​ ತಾರಾ ಜೋಡಿಯ ಲಿಸ್ಟ್​ಗೆ ಮತ್ತೊಂದು ಜೋಡಿ ಆ್ಯಡ್​ ಆಗ್ತಾ ಇದೆ. ಲವ್​ ಮಾಕ್ಟೇಲ್​ ಸಿನಿಮಾ ಮೂಲಕ ಮನೆಮಾತಾದ ಮದರಂಗಿ ಕೃಷ್ಣ ಮತ್ತು ಮಿಲನಾ ನಾಗರಾಜ್​ ಹಸೆಮಣೆ ಏರ್ತಿದ್ದಾರೆ. ಏಳು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ, ರೀಸೆಂಟಾಗಷ್ಟೇ ತಮ್ಮ ಪ್ರೀತಿಯ ವಿಚಾರವನ್ನ ಬಹಿರಂಗ ಪಡಿಸಿದರು. ಕೃಷ್ಣ ಮತ್ತು ಮಿಲನ ಹೆಸ್ರಿಗಿಂತ ಆದಿ ನಿಧೀಮಾ ಅಂತ್ಲೇ ಇದೀಗ ಸಖತ್​ ಫೇಮಸ್ ಈ ಜೋಡಿ.

ಲವ್​ ಮಾಕ್ಟೇಲ್​ ಸಿನಿಮಾದಲ್ಲಿ ಕೃಷ್ಣ-ಮಿಲನಾ ಜೋಡಿ ನೋಡಿದ ಸಿನಿಪ್ರಿಯರು ಇವರಿಬ್ಬರ ಅಭಿನಯಕ್ಕೆ ಫಿದಾ ಆಗಿದರು. ಚಿತ್ರದ ಲವ್ ಯೂ ಕಂದ ಸಾಂಗ್​ ಅಂತೂ ಸೂಪರ್​ ಹಿಟ್ ಆಗಿತ್ತು. ಈ ಜೋಡಿಯ ರಿಯಲ್ ಬಾಂಡಿಂಗ್​ ತೆರೆಮೇಲೆ ಎದ್ದು ಕಾಣ್ತಾ ಇತ್ತು. ಅದಾಗಲೇ ಇವರಿಬ್ಬರು ರಿಯಲ್​ ಲವ್ವರ್ಸ್​ ಅಂತ ಕೆಲವರು ಗೆಸ್ ಮಾಡಿದರು. ಹೀಗಿರುವಾಗಲೇ ಚಿತ್ರದ ಸಕ್ಸಸ್​ ಮೀಟ್​ನಲ್ಲಿ ತಮ್ಮ ಪ್ರೀತಿಯ ವಿಚಾರವನ್ನ ಎಲ್ಲರ ಜೊತೆ ಶೇರ್​ ಮಾಡಿಕೊಂಡರು ಈ ಜೋಡಿ.

ಲವ್​ ಮಾಕ್ಟೆಲ್​ ಸಿನಿಮಾ ಸಕ್ಸಸ್​ ಬೆನ್ನಲ್ಲೇ ಲವ್​ ಮಾಕ್ಟೆಲ್​ 2 ಚಿತ್ರವನ್ನ ತೆರೆಗೆ ತರುವಲ್ಲಿ ಬ್ಯುಸಿಯಾಗಿದೆ ಈ ಜೋಡಿ. ಇದರ ನಡುವೆಯೇ ಮದುವೆ ಡೇಟ್ ಫಿಕ್ಸ್​ ಆಗಿರೋ ಸ್ವೀಟ್​ ನ್ಯೂಸ್​ನ್ನ ಶೇರ್ ಮಾಡಿಕೊಂಡಿದ್ದಾರೆ. 2021ರ ಫೆಬ್ರವರಿ 14 ಅಂದ್ರೆ ಪ್ರೇಮಿಗಳ ದಿನಾಚರಣೆಯಂದು ಹಸೆಮಣೆ ಏರ್ತಿದ್ದಾರೆ ಕೃಷ್ಣ ಮತ್ತು ಮಿಲನಾ. ಈ ವಿಚಾರವನ್ನ ಸ್ವತಃ ಈ ಜೋಡಿ ಸೋಶೀಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಂದ್ಹಾಗೇ 2020ರಲ್ಲಿ ಸಾಕಷ್ಟು ಜೋಡಿಗಳು ಮದುವೆಯಾದ್ರೂ ಕೂಡ ಕೊರೊನಾ ಸಮಸ್ಯೆಯಿಂದ ಸರಳ ವಿವಾಹ ಮಾಡಿಕೊಳ್ಳಬೇಕಾಯ್ತು. 2020 ಇಡೀ ಸ್ಯಾಂಡಲ್​ವುಡ್​ಗೆ ಸಾಕಷ್ಟು ಸಮಸ್ಯೆಗಳನ್ನ ತಂದೊಡ್ಡಿತ್ತು. ಆದರೆ, 2021ರ ಬಗ್ಗೆ ಎಲ್ರೂ ಸಾಕಷ್ಟು ನಿರೀಕ್ಷೆಗಳನ್ನ ಇಟ್ಕೊಂಡಿದ್ದಾರೆ. 2021ರಲ್ಲಿ ಸ್ಯಾಂಡಲ್​ವುಡ್​ನಲ್ಲಿ ನಡೆಯಲಿರೊ ಮೊದಲ ಶುಭಾಕಾರ್ಯವಾಗಲಿದೆ ಇವರ ಮದುವೆ ಸಮಾರಂಭ.

ಇನ್ನು ಪ್ರೇಮಿಗಳ ದಿನಾಚರಣೆ ದಿನ ಮದುವೆ ಡೇಟ್ ಫಿಕ್ಸ್​​ ಆಗಿದ್ದು, ಬೆಂಗಳೂರಿನಲ್ಲಿಯೇ ವಿವಾಹ ಮಹೋತ್ಸವ ನೆರವೇರಲಿದೆ. ಓಪನ್​ ಪ್ಲೇಸ್​ನಲ್ಲಿ ಮಂಟಪ ಹಾಕಿ, ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗೋ ಪ್ಲಾನ್​ ಇದೆ ಇದನ್ನ ಹೊರತುಪಡಿಸಿ ಇನ್ನೊಂದಷ್ಟು ವಿಚಾರಗಳ ಬಗ್ಗೆ ಇನ್ನಷ್ಟೇ ಪ್ಲಾನ್​ ಮಾಡಬೇಕಿದೆ ಅಂತಾರೆ ಮಿಲನಾ ನಾಗರಾಜ್.

ಅಂದ್ಗಾಹೇ ಮಿಲನಾ ಮತ್ತು ಕೃಷ್ಣ ಜೋಡಿ 2013 ರಲ್ಲಿ ನಮ್​ ದುನಿಯಾ ನಮ್​ ಸ್ಟೈಲ್​ ಸಿನಿಮಾ ಮೂಲಕ ಪರಿಚಯವಾಗ್ತಾರೆ. ಆ ಚಿತ್ರದಲ್ಲಿ ಇಬ್ಬರೂ ಜೋಡಿಯಾಗಿ ಅಭಿನಯಿಸಿಲ್ಲವಾದ್ರೂ, ಚಾರ್ಲಿ ಮತ್ತು ಚಂದ್ರಲೇಖಾ ರಿಟರ್ನ್​ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ತಾರೆ. ಅಲ್ಲಿಂದ ಸ್ನೇಹ ಪ್ರೀತಿಗೆ ತಿರುಗಿ ಸದ್ಯ ಮದುವೆ ಹಂತ ತಲುಪಿದೆ.

ಇನ್ನು ಈ ಜೋಡಿಯ ಮದುವೆ ಡೇಟ್ ಫಿಕ್ಸ್​ ಆಗುತ್ತಿದ್ದ ಹಾಗೇ ಸೋಶೀಯಲ್​ ಮಿಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಒಟ್ನಲ್ಲಿ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಲವ್ ಮಾಕ್ಟೇಲ್ ಸಿನಿಮಾ ಮೂಲಕ ಸಿನಿಪ್ರಿಯರ ಮನೆ ಮಾತಾಗಿದ್ದಾರೆ. ಚಿತ್ರರಂಗದಲ್ಲಿ ನಿರ್ದೇಶಕ ನಿರ್ಮಾಪಕರಾಗಿ ಹೊಸ ಹೆಜ್ಜೆ ಇಟ್ಟ ಈ ಜೋಡಿ,ಇದೀಗ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.

Next Story

RELATED STORIES