ಗೆಳೆಯರ ಜೊತೆ ಜಾಲಿ ಬೈಕ್ ರೈಡ್ ಮಾಡಿದ 'ಸಾರಥಿ'
ಇದೀಗ ಇಂಡಸ್ಟ್ರಿ ಫ್ರೆಂಡ್ಸ್ ಹಾಗೂ ಪರ್ಸನಲ್ ಫ್ರೆಂಡ್ಸ್ ಜೊತೆ ಮತ್ತೊಮ್ಮೆ ರೋಡ್ ಟ್ರಿಪ್ ಹೊರ್ಟಿದ್ದಾರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್, ರೀಸೆಂಟಾಗಿ ಮಡಿಕೇರಿಗೆ ಬೈಕ್ ರೈಡ್ ಹೋಗಿದ್ದು ಗೊತ್ತೇಯಿದೆ. ಆದ್ರೀಗ ಮತ್ತೊಮ್ಮೆ ಬೈಕ್ ಏರಿ ರೋಡ್ ಟ್ರಿಪ್ ಹೊರ್ಟಿದ್ದಾರೆ. ಈ ಬಾರಿ ಕೇರಳದ ಕಡೆ ಪಯಣ ಬೆಳೆಸಿದ್ದಾರೆ.
ಮೊದಲಿನಿಂದಲೂ ಚಾಲೆಂಜಿಂಗ್ ಸ್ಟಾರ್ಗೆ ಕುದುರೆ ಸವಾರಿ, ಬೈಕ್ ರೈಡಿಂಗ್, ಕಾರ್ ಡ್ರೈವಿಂಗ್ ಅಂದ್ರೆ ಕ್ರೇಜ್. ಈ ಹಿಂದೆ ಸಾಕಷ್ಟು ಸಲ ಬೈಕ್ ರೈಡಿಂಗ್ ಹೋಗಿರೋದು ಇದೆ. ಅದೇ ರೀತಿ ಇದೀಗ ಇಂಡಸ್ಟ್ರಿ ಫ್ರೆಂಡ್ಸ್ ಹಾಗೂ ಪರ್ಸನಲ್ ಫ್ರೆಂಡ್ಸ್ ಜೊತೆ ಮತ್ತೊಮ್ಮೆ ರೋಡ್ ಟ್ರಿಪ್ ಹೊರ್ಟಿದ್ದಾರೆ.
ಸದ್ಯ ದಚ್ಚು ಅಂಡ್ ಗ್ಯಾಂಗ್ ವೈಯ್ನಾಡಿನಲ್ಲಿ ಬೀಡು ಬಿಟ್ಟಿದ್ದು, 3 ದಿನಗಳ ಕಾಲ ಕೇರಳ ಟ್ರಿಪ್ ಮಾಡೋ ಪ್ಲಾನ್ನಲ್ಲಿದ್ದಾರೆ. ನಿನ್ನೆ ಬೆಳಿಗ್ಗೆ ತಮ್ಮ ಆರ್.ಆರ್ ನಗರದ ನಿವಾಸದಿಂದ ಸುಮಾರು 10ಕ್ಕೂ ಹೆಚ್ಚು ಬೈಕ್ಗಳು ಪ್ರಯಾಣ ಶುರುಮಾಡಿ, ಮೈಸೂರಿನ ತಮ್ಮ ಫಾರ್ಮ್ಗೆ ಭೇಟಿ ನೀಡಿ, ನಂತರ ಕೇರಳ ಕಡೆ ಹೊರ್ಟಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ಗೆ ಪ್ರಜ್ವಲ್ ದೇವರಾಜ್, ಚಿಕ್ಕಣ್ಣ, ಯಶಸ್ ಸೂರ್ಯ, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಇನ್ನು ಕೆಲ ಸ್ನೇಹಿತರು ಜೊತೆಯಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ರೋಡ್ ಟ್ರಿಪ್ ಇದೇ ಮೊದಲೇನಲ್ಲ..ಇದೇ ಸೇಮ್ ಗ್ಯಾಂಗ್ ಜೊತೆ ರೀಸೆಂಟಾಗಿ ಮಡಿಕೇರಿಗೂ ಹೋಗಿದರು. ಈ ಟ್ರಿಪ್ ಕೂಡ 3 ದಿನಗಳದ್ದೇ ಆಗಿತ್ತು. ಆಗಲೂ ಹೀಗೆ ಆನ್ ದ ವೇ ಮೈಸೂರಿನ ಫಾರ್ಮ್ಹೌಸ್ಗೆ ಭೇಟಿ ನೀಡಿ,ಅಲ್ಲಿಂದ ಮಡಿಕೇರಿ ರೀಚ್ ಆಗಿದರು.
ಮಡಿಕೇರಿಯಲ್ಲಿನ ರೆಸಾರ್ಟ್ವೊಂದರಲ್ಲಿ ದಚ್ಚು ಅಂಡ್ ಗ್ಯಾಂಗ್ ಬೀಡು ಬಿಟ್ಟಿದರು. ರೆಸಾರ್ಟ್ನಲ್ಲಿ ಕ್ರಿಕೆಟ್ ಆಡುವ ಮೂಲಕ ಟ್ರಿಪ್ನ್ನ ಸಖತ್ ಎಂಜಾಯ್ ಮಾಡಿದರು. ದಚ್ಚು ಗ್ಯಾಂಗ್ ಕ್ರಿಕೆಟ್ ಆಡ್ತಿರೋ ವಿಡಿಯೋ ಕೂಡ ವೈರಲ್ ಆಗಿತ್ತು.
ಇದೀಗ ಮತ್ತೊಮ್ಮೆ ಇಂಡಸ್ಟ್ರಿ ಫ್ರೆಂಡ್ಸ್ ಹಾಗೂ ಪರ್ಸನಲ್ ಫ್ರೆಂಡ್ಸ್ ಜೊತೆ ಬೈಕ್ ಸವಾರಿ ಹೊರ್ಟಿದ್ದಾರೆ. ಸ್ನೇಹಿತರ ಜೊತೆ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ.