Top

ಎಸ್.ಪಿ ಬಾಲಸುಬ್ರಹ್ಮಣ್ಯಂ ನೆನೆದು ಭಾವುಕರಾದ ಸಂಗೀತ ನಿರ್ದೇಶಕ ಹಂಸಲೇಖ

ಎಸ್​ಪಿಬಿಗೆ ಮಹಮ್ಮದ್ ರಫಿ ಅಂದರೆ ಪ್ರಾಣ. ನಂಗೆ ಇನ್ನೊಬ್ಬ ಮಗ ಹುಟ್ಟಿದ್ರೆ ರಫಿ ಎಂದು ಹೆಸರಿಡ್ತೀನಿ ಅಂತಿದ್ದರು.

ಎಸ್.ಪಿ ಬಾಲಸುಬ್ರಹ್ಮಣ್ಯಂ ನೆನೆದು ಭಾವುಕರಾದ ಸಂಗೀತ ನಿರ್ದೇಶಕ ಹಂಸಲೇಖ
X

ಬೆಂಗಳೂರು: ಸಿನಿಮಾ ಅಂದರೆ ಇಮೋಷನ್​ ಇದರ ಮುಖ್ಯಭಾಗ ಎಸ್.ಪಿ ಬಾಲಸುಬ್ರಹ್ಮಣ್ಯಂ ಎಂದು ನಾದಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖ ಅವರು ಶುಕ್ರವಾರ ಹೇಳಿದರು.

ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ನಿಧನರಾದ ಹಿನ್ನೆಲೆ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಚೆನ್ನೈಗೆ ಹೊರಟ್ಟಿದ್ದೆ. ಮಾಧ್ಯಮಗಳು ಮಾತನಾಡಬೇಕು ಅನ್ನೋ ಹಿನ್ನೆಲೆ ಬಂದಿದ್ದೇನೆ. ಜಗತ್ತಿಗೆ ಒಬ್ಬರೇ ಗಾಯಕ ಎಸ್​ಪಿಬಿ ಎಂದರು.

ಇನ್ನು ಪ್ರತಿಭೆ, ಅಂದ ಎಲ್ಲವನ್ನೂ ಇಟ್ಟುಕೊಂಡವರು ಅವರು. ನಾನು ಗೆದ್ದಿರೋದು ಲೌಕಿಕ ಜ್ಞಾನದಿಂದ ಎನ್ನುತ್ತಿದ್ದರು ಎಂದು ಹೇಳುತ್ತಿದ್ದಂತೆಯೇ ಹಂಸಲೇಖ ಮತ್ತು ಅವರ ಪತ್ನಿ ಭಾವುಕರಾದರು.

ಸ್ಪರ್ಧೆಗೆ ಇಳಿದು ಎಚ್ಚರ ತಪ್ಪಬೇಡಿ, ಎಲ್ಲರಿಗೂ ಎಚ್ಚರ ತಪ್ಪದಂತೆ ಮಾತು ಹೇಳುತ್ತಿದ್ದರು. ಸಿನಿಮಾ ಸಂಗಾತಿ ಅಂದ್ರೆ ನಂಗೆ ರವಿಚಂದ್ರನ್. ಸಂಗೀತದ ಸಂಗಾತಿ ಅಂದ್ರೆ ಎಸ್​.ಪಿ ಎಸ್.ಪಿ ಬಾಲಸುಬ್ರಹ್ಮಣ್ಯಂ ಒಬ್ಬರೇ ಎಂದು ಅವರು ನುಡಿದರು.

ನಾನು ಸಿನಿಮಾಕ್ಕೆ ಬಂದಾಗ ಒಂದು ಸಿಸ್ಟಮ್ ಇತ್ತು. ಆ ಸಿಸ್ಟಮ್ ಜೊತೆ ನಂಗೆ ಎಸ್​ಪಿಬಿ ಸಿಕ್ಕರು. ನಾನು ಅಷ್ಟೋ ಇಷ್ಟೋ ಮಾಡಿರೋದಕ್ಕೆ ಎಸ್​ಪಿಬಿ ಅವರೇ ಕಾರಣ. ಎಸ್​ಪಿಬಿ ಮೊದಲು ಗುರುತಿಸಿದ್ದು ಜಾನಕಮ್ಮ ಎಂದು ಎಸ್​​ಪಿಬಿ ಅವರ ಜೊತೆಗೆ ಹಳೆ ನೆನಪುಗಳನ್ನು ಮೇಲುಕು ಹಾಕಿದರು.

ಎಸ್​ಪಿಬಿಗೆ ಮಹಮ್ಮದ್ ರಫಿ ಅಂದರೆ ಪ್ರಾಣ. ನಂಗೆ ಇನ್ನೊಬ್ಬ ಮಗ ಹುಟ್ಟಿದ್ರೆ ರಫಿ ಎಂದು ಹೆಸರಿಡ್ತೀನಿ ಅಂತಿದ್ದರು. ಕ್ಲಾಸಿಕಲ್ ಮ್ಯೂಸಿಕ್​ಗೆ ನಾಲ್ಕಾರು ಶಬ್ಧ ಸಾಕು. ಆದರೆ, ಸಿನಿಮಾ ಸಂಗೀತಕ್ಕೆ ಪ್ರಾದೇಶಿಕ ಭಾಷೆ ಬೇಕು. ಸಿನಿಮಾ ಸಂಗೀತದ ಆತ್ಮ ಪ್ರಾದೇಶಿಕ ಭಾಷೆ ಅಂದಿದ್ದರು. ಹಾಳು ಕೊರೊನಾ ಮೂರನೇ ಮಹಾಯುದ್ಧಕ್ಕಿಂತ ಮಾರಿ. ಎಸ್​ಪಿಬಿ ಮರಣ ನೋಡಬಾರದು ಅಂದುಕೊಂಡಿದ್ದೆ, ಇದಕ್ಕಿಂತ ದೊಡ್ಡ ಆಘಾತ ಮತ್ತೊಂದಿಲ್ಲ ಎಂದು ದೇಶಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಎಸ್​​ಪಿಬಿ ಅವರನ್ನು ನೆನೆದು ಭಾವುಕರಾದರು.

Next Story

RELATED STORIES