ಪವರ್ಫುಲ್ ಫ್ಲಿಪ್ಗೆ ಪವರ್ಸ್ಟಾರ್ ಫ್ಯಾನ್ಸ್ ಫಿದಾ
ಗೋಕರ್ಣ ಬೀಚ್ನಲ್ಲಿ ಪುನೀತ್ ಫಿಟ್ನೆಸ್ ಮಂತ್ರ

ಪವರ್ಸ್ಟಾರ್ ಅಂದ್ರೆ ಫಿಟ್ನೆಸ್.ಫಿಟ್ನೆಸ್ ಅಂದ್ರೆ ಪವರ್ಸ್ಟಾರ್. ಲಾಕ್ಡೌನ್ ಟೈಮ್ನಲ್ಲಂತೂ ಮನೆಯಲ್ಲಿಯೇ ಕಾಲ ಕಳಿತಿದ್ದ ಅಪ್ಪು, ಸ್ವಲ್ಪ ಹೆಚ್ಚೇ ಫಿಟ್ನೆಸ್ ಫ್ರೀಕ್ ಆಗಿದರು. ಡಿಫ್ರೆಂಟ್ ಡಿಫ್ರೆಂಟ್ ವರಕ್ಔಟ್ ವಿಡಿಯೋಗಳನ್ನ ಸ್ವತಃ ಪವರ್ಸ್ಟಾರ್ ಶೇರ್ ಮಾಡಿದರು. ಇದೀಗ ಪುನೀತ್ ಗೊಕರ್ಣ ಬೀಚ್ನಲ್ಲಿ ಮಾಡಿರೋ ಫ್ಲಿಪ್ಸ್ ವಿಡಿಯೋ ಸಖತ್ ವೈರಲ್ ಆಗಿದೆ.

ವಯಸ್ಸು 45 ಆದ್ರೂ, ಪವರ್ಸ್ಟಾರ್ ಸಖತ್ ಫಿಟ್ ಅಂಡ್ ಫೈನ್. ಯಂಗ್ ಅಂಡ್ ಎನರ್ಜಿಟಿಕ್. ಲಾಕ್ಡೌನ್ ಇದ್ದಾಗ ಎಲ್ರೂ ಮನೆಯಲ್ಲಿ ಆರಾಮಾಗಿ ಕಾಲ ಕಳೆದ್ರೆ, ಅಪ್ಪು ರೆಸ್ಟ್ ಮಾಡದೇ ಮಿಸ್ ಇಲ್ಲದೇ ಪ್ರತಿದಿನ ವರ್ಕೌಟ್ ಮಾಡ್ತಾ ಇದ್ದರು.
ಇದೀಗ ಅಪ್ಪು ಫಿಟ್ನೆಸ್ ವಿಡಿಯೋವೊಂದು ವೈರಲ್ ಆಗಿದೆ. ರೀಸೆಂಟಾಗಿ ಆಪ್ತರ ಮದುವೆಗೆಂದು ಕುಮಟಗೆ ಭೇಟಿ ನೀಡಿದ್ದ, ಪವರ್ಸ್ಟಾರ್ ಅಲ್ಲಿಂದ ಹಾಗೇ ಗೋಕರ್ಣ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಗೋಕರ್ಣ ಬೀಚ್ನಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ. ಗೋಕರ್ಣ ಬೀಚ್ನಲ್ಲಿ ಕೂತು ಕಾಫೀ ಕುಡಿತಿರೋ ಫೋಟೋವೊಂದು ರೀಸೆಂಟಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಇದೀಗ ಗೋಕರ್ಣ ಬೀಚ್ನಲ್ಲಿ ಬೆಳ್ಳಂಬೆಳಗ್ಗೆ ಅಪ್ಪು ಬ್ಯಾಕ್ ಫ್ಲಿಪ್ ಮಾಡಿರೋ ವಿಡಿಯೋವೊಂದು ವೈರಲ್ ಆಗಿದೆ. ಸತಃ ಪವರ್ಸ್ಟಾರ್ ಈ ವಿಡಿಯೋವನ್ನ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.