Top

ಹತ್ತರಿಂದ ಹದಿನೈದು ಮಂದಿ ಹೆಸರು ಕೊಟ್ಟಿದ್ದೇನೆ - ಇಂದ್ರಜಿತ್​ ಲಂಕೇಶ್​

ಎವಿಡೆನ್ಸ್, ಹೆಸರು, ಮಾಹಿತಿ ಕೊಟ್ಟಿದ್ದೇನೆ. ಹತ್ತರಿಂದ ಹದಿನೈದು ಹೆಸರು ಕೊಟ್ಟಿದ್ದೇನೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದಲ್ಲ.

ಹತ್ತರಿಂದ ಹದಿನೈದು ಮಂದಿ ಹೆಸರು ಕೊಟ್ಟಿದ್ದೇನೆ - ಇಂದ್ರಜಿತ್​ ಲಂಕೇಶ್​
X

ಬೆಂಗಳೂರು: ನನ್ನ ಹೇಳಿಕೆ ನೀಡಿದ್ದೇನೆ, ನನಗೆ ಸಾಮಾಜಿಕ ಸ್ವಾಸ್ಥ್ಯ ದ ಬಗ್ಗೆ ಕಾಳಜಿ ಇದೆ, ಇನ್ವೆಸ್ಡಿಗೇಷನ್​ಗೆ ಬೇಕಾಗಿರುವ ಮಾಹಿತಿ ನೀಡಿದ್ದೇನೆ ಎಂದು ನಿರ್ದೇಶಕ ಇಂದ್ರಜಿತ್​ ಲಂಕೇಶ್ ಅವರು ಸೋಮವಾರ ಹೇಳಿದ್ದಾರೆ.

ನಗರದಲ್ಲಿಂದು ಸಿಸಿಬಿ ವಿಚಾರಣೆ ಮುಗಿಸಿ ಹೊರಬಂದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಾಮಾಜದಲ್ಲಿ ಅರಿವು ಮೂಡಿಸಲು ಮತ್ತು ಹೊಸಬರಿಗೆ ಭಯನು ಇರಬೇಕು. ಯಾವ ಹೆಸರೇಳಿ ಯಾರಿಗೂ ತೇಜೋವಧೆ ಮಾಡವುದು ಉದ್ದೇಶವಲ್ಲ ಎಂದು ತಿಳಿಸಿದರು.

ಇನ್ನು ಎವಿಡೆನ್ಸ್, ಹೆಸರು, ಮಾಹಿತಿ ಕೊಟ್ಟಿದ್ದೇನೆ. ಹತ್ತರಿಂದ ಹದಿನೈದು, ಹೆಸರು ಕೊಟ್ಟಿದ್ದೇನೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದಲ್ಲ, ಚಂಪಾ ಪಾಟೀಲರ ಲಂಕೇಶ್ ಲೇವಡಿ ಬಗ್ಗೆ ನಗು ಬರುತ್ತೆ ಎಂದು ಅವರು ಸ್ಪಷ್ಟನೆ ನೀಡಿದರು.

ಖ್ಯಾತ ಚಿತ್ರನಟಿಯೊಬ್ಬರು ನಶೆ ವೇಳೆ ಅಶ್ಲೀಲವಾಗಿ ವರ್ತಿಸಿದ್ದ ವೀಡಿಯೋ ಸೇರಿದಂತೆ ಅನೇಕ ಎವಿಡೆನ್ಸ್ ಕೊಟ್ಟಿದ್ದೇನೆ. ರಾಜಕಾರಣಿಗಳು, ನಿರ್ಮಾಪಕರಿಗೆ, ಜನತೆಗೆ ಧನ್ಯವಾದ ತಿಳಿಸುತ್ತೇನೆ. ಪೋಷಕರು, ಕೆಲವು ನಟರು, ನಿರ್ಮಾಪಕರು ಅನೇಕ ಜನ ಬೆಮಬಲ ಕೊಟ್ಟಿದ್ದಾರೆ. ಅರ್ಜುನ್ ಸರ್ಜಾ ಕುಟುಂಬದ ಬಗ್ಗೆ ನಾನು ಸ್ಪಷ್ಟನೆ ನೀಡಿದ್ದೇನೆ. ಯಾರು ತಪ್ಪು ಮಾಡಿದ್ದಾರೊ ಅವರಿಗೆ ಸಿಕ್ಷೆಯಾಗಬೇಕು ಎಂದು ಇಂದ್ರಜಿತ್ ಲಂಕೇಶ್ ಅವರು ಮಾತನಾಡಿದ್ದಾರೆ.

Next Story

RELATED STORIES