Top

ಜೋರಾಗಿದೆ ಸೆಲೆಬ್ರೆಟಿಗಳ ಗ್ರೀನ್ ಇಂಡಿಯಾ ಚಾಲೆಂಜ್

ರಕ್ಷಿತ್ ಶೆಟ್ಟಿಯನ್ನ ನಾಮಿನೇಟ್​ ಮಾಡಿರೋದು ಬಹುಭಾಷಾ ನಟ ಪ್ರಕಾಶ್​ ರೈ

ಜೋರಾಗಿದೆ ಸೆಲೆಬ್ರೆಟಿಗಳ ಗ್ರೀನ್ ಇಂಡಿಯಾ ಚಾಲೆಂಜ್
X

ಸೊಶೀಯಲ್​ ಮೀಡಿಯಾದಲ್ಲಿ ಆ ಚಾಲೆಂಜ್ ಈ ಚಾಲೆಂಜ್​ ಅಂತ ದಿನಕ್ಕೊಂದು ಚಾಲೆಂಜ್​ಗಳು ನಡೀತಾನೆ ಇರುತ್ತೆ. ಆದರೆ, ನಿಜಕ್ಕೂ ಯೂಸ್​ಫುಲ್​ ಆಗ್ತಿರೋ ಚಾಲೆಂಜ್​ ಅಂದ್ರೆ ಅದು ಗ್ರೀನ್​ ಇಂಡಿಯಾ ಚಾಲೆಂಜ್. ಸಿನಿರಂಗದಲ್ಲಿ ಸಾಕಷ್ಟು ಸೆಲೆಬ್ರೆಟಿಗಳು ಈ ಚಾಲೆಂಜ್​ನ್ನ ಸೀಕ್ವರಿಸಿ, ಗಿಡ ನಡೆಯುತ್ತಿದ್ದಾರೆ. ಸದ್ಯ ಸಿಂಪಲ್​ ಸ್ಟಾರ್ ಕೂಡ ತಮ್ಮ ಸವಾಲನ್ನ ಪೂರೈಸಿ, ಮತ್ತೊಂದಷ್ಟು ಸೆಲೆಬ್ರೆಟಿಗಳನ್ನ ನಾಮಿನೇಟ್ ಮಾಡಿದ್ದಾರೆ.

ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಜೆ ಶುರುಮಾಡಿದ ಗ್ರೀನ್​ ಇಂಡಿಯಾ ಚಾಲೆಂಜ್​ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಬಾಲಿವುಡ್​ನಿಂದ ಸ್ಯಾಂಡಲ್​ವುಡ್​ವರೆಗೂ ಎಲ್ಲಾ ಸೆಲೆಬ್ರೆಟಿಗಳು ಈ ಸವಾಲನ್ನ ಸ್ವೀಕರಿಸಿ ಹಸಿರು ಕ್ರಾಂತಿ ಶುರುಮಾಡಿದ್ದಾರೆ.ಈಗಾಗ್ಲೇ ಸೋನು ಸೂದ್, ಇಳೆಯದಳಪತಿ ವಿಜಯ್, ತ್ರಿಶಾ, ಸಮಂತಾ, ಮಹೇಶ್​ ಬಾಬು,ರಶ್ಮಿಕಾ ಮಂದಣ್ಣ ಹೀಗೆ ಸಾಲು ಸಾಲು ಸೆಲೆಬ್ರೆಟಿಗಳು ಗಿಡ ನೆಡೋದ್ರ ಮೂಲಕ ಗ್ರೀನ್​ ಇಂಡಿಯಾ ಚಾಲೆಂಜ್​ ಕಂಪ್ಲೀಟ್ ಮಾಡಿದ್ದಾರೆ.

ಸದ್ಯ ಈ ಚಾಲೆಂಜ್​ ಸ್ಯಾಂಡಲ್​ವುಡ್​ಗೂ ಕಾಲಿಟ್ಟಿದ್ದು, ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ಈ ಚಾಲೆಂಜ್​ ಅಕ್ಸೆಪ್ಟ್ ಮಾಡಿದ್ದಾರೆ. ಅಂದ್ಹಾಗೇ ರಕ್ಷಿತ್ ಶೆಟ್ಟಿಯನ್ನ ನಾಮಿನೇಟ್​ ಮಾಡಿರೋದು ಬಹುಭಾಷಾ ನಟ ಪ್ರಕಾಶ್​ ರೈ. ತಾವು ಕೂಡ ಗಿಡ ನೆಟ್ಟು ಈ ಸವಾಲನ್ನ ರಕ್ಷಿತ್​ಗೆ ಪಾಸ್​ ಮಾಡಿದ್ದಾರೆ. ಚಾಲೆಂಜ್ ಸೀಕ್ವರಿಸಿದ ರಕ್ಷಿತ್ ಶೆಟ್ಟಿ ತಮ್ಮ ತೋಟದಲ್ಲಿ ಒಂದು ಗಿಡ ನೆಟ್ಟಿದ್ದಾರೆ. ಹಾಗೂ ಈ ಸವಾಲನ್ನ ಮುಂದುವರೆಸಿರೋ ರಕ್ಷಿತ್, ರಿಷಬ್ ಶೆಟ್ಟಿ, ನಿರ್ಮಾಪಕ ಕಾರ್ತಿಕ್ ಗೌಡ, ಪುಷ್ಕರ್ ಮಲ್ಲಿಕಾರ್ಜುನ, ಮಲೆಯಾಳಂ ನಟ ವಿನೀನ್ ಪೌಲೆ ಹಾಗು ಬಾಬಿ ಸಿಂಹ ಅವರನ್ನು ನಾಮಿನೇಟ್ ಮಾಡಿದ್ದಾರೆ.

Next Story

RELATED STORIES