ಇಬ್ಬರೂ ಸೌತ್ ಸೂಪರ್ ಸ್ಟಾರ್ಸ್ ನೋಡಿ ಫ್ಯಾನ್ಸ್ ಥ್ರಿಲ್
ಒಂದೇ ಫ್ರೇಮ್ನಲ್ಲಿ ಡಾರ್ಲಿಂಗ್ &ರಾಕಿಂಗ್ ಸ್ಟಾರ್

ಸಲಾರ್, ಸದ್ಯ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಹುಟ್ಟು ಹಾಕಿರೋ ಸಿನಿಮಾ. ಸಿನಿಮಾ ಅನೌನ್ಸ್ ಆದಾಗಿನಿಂದಲೇ ನಿರೀಕ್ಷೆ ಮಟ್ಟ ಎವರೆಸ್ಟ್ ಎತ್ತರಕ್ಕೆ ಏರಿದೆ. ಇದೀಗ ಸಲಾರ್ ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ಒಂದೇ ಫ್ರೇಮ್ನಲ್ಲಿ ಡಾರ್ಲಿಂಗ್ ಪ್ರಭಾಸ್ ಮತ್ತು ರಾಕಿಭಾಯ್ನ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಒಂದು ಕಡೆ ಬಾಹುಬಲಿ ಮೂಲಕ ತೆಲುಗು ಚಿತ್ರರಂಗದ ಮಾರುಕಟ್ಟೆಯನ್ನ ಜಾಗತಿಕ ಮಟ್ಟಕ್ಕೆ ಏರಿಸಿದ ನಟ, ಇನ್ನೊಂದು ಕಡೆ ಕರ್ನಾಟಕಕಷ್ಟೇ ಸಿಮೀತ ಅನಿಸಿಕೊಂಡಿದ್ದ ಚಿತ್ರರಂಗವನ್ನು ನ್ಯಾಷನಲ್ ಲೆವಲ್ಗೆ ಕೊಂಡೊಯ್ದ ನಿರ್ದೇಶಕ. ಇವರಿಬ್ಬರು ಈಗ ಒಟ್ಟಾಗಿದ್ದಾರೆ ಅಂದ್ರೆ ಭೂಮಿ ಆಕಾಶ ಒಂದಾದಂತಾಗಿದೆ. ಕೆಜಿಎಫ್ ಸೃಷ್ಟಿಕರ್ತನ ಬತ್ತಳಿಕೆಯಲ್ಲಿರುವ ಸಲಾರ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಸದ್ಯ ಹೈದ್ರಾಬಾದ್ನಲ್ಲಿ ಸಲಾರ್ ಚಿತ್ರಕ್ಕೆ ಅದ್ದೂರಿ ಮುಹೂರ್ತ ನೆರವೇರಿದೆ.

ಹೈದ್ರಾಬಾದ್ನ ರಾಮನಾಯ್ಡು ಸ್ಟುಡಿಯೋದಲ್ಲಿ ಸಲಾರ್ ಚಿತ್ರಕ್ಕೆ ಅದ್ದೂರಿ ಮುಹೂರ್ತ ನೆರವೇರಿದೆ. ಕೆಲವೇ ಕೆಲವು ಗಣ್ಯರ ಸಮ್ಮುಖದಲ್ಲಿ ಮುಹೂರ್ತ ನೆರವೇರಿಸಲಾಗಿದೆ. ಅಂದ್ಹಾಗೇ ಮುಹೂರ್ತ ಕಾರ್ಯಕ್ರಮದಲ್ಲಿ ಪ್ರಭಾಸ್ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿದ್ದಾರೆ. ಒಂದೇ ಫ್ರೇಮ್ನಲ್ಲಿ ಇಬ್ಬರೂ ಸೌತ್ ಸ್ಟಾರ್ಗಳನ್ನ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಕರ್ನಾಟಕ ಡಿಸಿಎಂ ಅಶ್ವಥ್ನಾರಾಯಣ್ ಕೂಡ ವಿಶೇಷವಾಗಿ ಈ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇನ್ನು ಈಗಷ್ಟೇ ಮುಹೂರ್ತ ಮಾಡಿರುವ ಸಿನಿಮಾತಂಡ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ. ಸದ್ಯ ಪ್ರಶಾಂತ್ ನೀಲ್ ಕೆಜಿಎಫ್-2 ಸಿನಿಮಾದ ಕೊನೆಯ ಹಂತದ ಕೆಲಸದಲ್ಲಿ ಬ್ಯುಸಿಯಾಗಿದ್ರೆ, ಪ್ರಭಾಸ್ ಸಹ ರಾಧೆ ಶ್ಯಾಮ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯಕ್ಕೆ ಸಲಾರ್ ಸಿನಿಮಾಗೆ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ಛಾಯಾಗ್ರಾಹಕ ಭುವನ್ ಗೌಡ ಅನ್ನೋದು ಕನ್ಫರ್ಮ್ ಆಗಿದೆ. ಇನ್ನು ಚಿತ್ರದಲ್ಲಿ ಜಾನ್ ಅಬ್ರಹಾಂ ವಿಲನ್ ಆಗಿಯೂ, ದಿಶಾ ಪಟಾಣಿ ನಾಯಕಿಯಾಗಿರೋ ಮಿಂಚಲಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ ಹಾಗೂ ಮಲೆಯಾಳಂ ನಟ ಮೋಹನ್ ಲಾಲ್ ಕೂಡ ಇರ್ತಾರೆ ಅನ್ನೋ ಸುದ್ದಿಯೂ ಇದೆ.