‘ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವ 6 ದಿನಗಳ ಕಾಲ ಲಾಕ್​ಡೌನ್​ ಮಾಡಬೇಕು’- ಮಾಜಿ ಶಿಕ್ಷಣ ಸಚಿವ

ಶಿವಮೊಗ್ಗ: ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡುವ ಶುಲ್ಕವನ್ನು ಅರ್ಧಕ್ಕಿಳಿಸಬೇಕು ಇದನ್ನು ವಿರೋಧಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ಮಾಕರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಶಿವಮೊಗ್ಗನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ತ್ಯಾಗ... Read more »

ಬೃಹತ್‌ ಪ್ರತಿಭಟನೆ- ಬಿಸಿಯೂಟ ತಯಾರಕರ ಬೇಡಿಕೆಗಳೇನು ಗೊತ್ತಾ..?

ಬೆಂಗಳೂರು:  ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಸಿಯೂಟ ತಯಾರಕರು ಎರಡು ದಿನದ ಬೃಹತ್ ಪ್ರತಿಭಟನೆ ನಡೆಸಲು ಬೀದಿಗಿಳಿದಿದ್ದಾರೆ. ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಹಾಗೂ ಸಿಐಟಿಯುಸಿ ಸಂಘಟನೆಯಿಂದ ಪ್ರತಿಭಟನೆಗೆ ಸಿದ್ಧತೆಯಾಗಿದ್ದು, ರಾಜ್ಯದ ಮೂಲೆಮೂಲೆಯಿಂದ ಬಂದ ಬಿಸಿಯೂಟ ಕಾರ್ಯಕರ್ತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ... Read more »

ಇದು ಬೀದಿಯಲ್ಲಿ ಚರ್ಚೆ ಮಾಡುವ ವಿಷಯವಲ್ಲ – ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ:  ಉಪಮುಖ್ಯಮಂತ್ರಿ ಹುದ್ದೆ ಕೊನೆಗೊಳಿಸಲು ಸಹಿ ಸಂಗ್ರಹ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ರೇ಼ಣುಕಾಚಾರ್ಯ ಅವರೇ ಸಹಿ ಸಂಗ್ರಹ ಮಾಡಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದು ಬೀದಿಯಲ್ಲಿ ಚರ್ಚೆ ಮಾಡುವ ವಿಷಯವಲ್ಲ. ಪಕ್ಷದ ಕಚೇರಿ,... Read more »

ಕೊನೆಗೂ ಜೈಲು ಆವರಣದಿಂದ ಹೊರಬಂದು ಅಭಿಮಾನಿಗಳಿಗೆ ದರ್ಶನ ಕೊಟ್ಟ ನಟ ವಿಜಯ್..!?

ಶಿವಮೊಗ್ಗ: ನಗರದ ಹಳೆ ಜೈಲು ಆವರಣದಲ್ಲಿ ತಮಿಳು ನಟ ವಿಜಯ್ ಅಭಿನಯದ ದಳಪತಿ 64 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ವಿಜಯ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಚಿತ್ರೀಕರಣ ನಡೆಯುತ್ತಿದ್ದು, ವಿಜಯ್ ಅಭಿಮಾನಿಗಳು ಅವರನ್ನು ನೋಡಬೇಕು ಎಂದು ಜೈಲು ಆವರಣ ಹಾಗೂ ಹೋಟೆಲ್... Read more »

ಮಲೆನಾಡಲ್ಲಿ ಮಳೆ ಅಬ್ಬರ: ರೈತರಿಗೆ  ಮತ್ತೆ ಆತಂಕ

ಚಿಕ್ಕಮಗಳೂರು:  5 ದಿನಗಳ ಕಾಲ ಬಿಡುವು ನೀಡಿದ್ದ ವರುಣ, ಚಿಕ್ಕಮಗಳೂರಿನಲ್ಲಿ ಮತ್ತೆ ಅಬ್ಬರಿಸಿದ್ದಾನೆ. ಭಾರೀ ಮಳೆಗೆ ಕಾಫಿ ಬೆಳೆ ನಾಶವಾಗಿದ್ದು, ಮತ್ತೊಂದೆಡೆ ಉತ್ತರ ಕರ್ನಾಟಕದಲ್ಲೂ ಆರ್ಭಟ ಶುರುವಾಗಿದೆ. ಎಲ್ಲಿ ನೋಡಿದ್ರೂ ಬರೀ ನೀರು. ಬೆಂಬಿಡದೆ ಆರ್ಭಟಿಸುತ್ತಿರೋ ವರುಣ, ಅನ್ನದಾತನಿಗೆ ಗಾಯದ ಮೇಲೆ ಬರೆ ಎಳೆಯುತ್ತಿದ್ದಾನೆ.... Read more »

ಇಲಾಖೆ ಅಧಿಕಾರಿಗಳ ಯಡವಟ್ಟಿಗೆ ಶಿಕ್ಷಕರಿಗೆ ಶಿಕ್ಷೆ..!

ಬೆಂಗಳೂರು:  ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಶಿಕ್ಷಕರ ವರ್ಗಾವಣೆಯಲ್ಲಿ ಮತ್ತೆ ಗೊಂದಲ ಮುಂದುವರೆದಿದೆ. ಸರ್ಕಾರ ಕಡ್ಡಾಯ ವರ್ಗಾವಣೆಗೆ ರೂಪಿಸಿರುವ ನಿಯಮಗಳ ವ್ಯಾಪ್ತಿಗೆ ಬರದಿದ್ದರೂ ಕೆಲವು ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ಪಟ್ಟಿಗೆ ಶಿಕ್ಷಣ ಇಲಾಖೆ ಸೇರಿಸಿದೆ. ಅಧಿಕಾರಿಗಳು ಮಾಡಿರೋ ಯಡವಟ್ಟಿನಿಂದ ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದ ನಿಯಮದಂತೆ... Read more »

ಚಿಕ್ಕಮಗಳೂರಲ್ಲಿ ಮತ್ತೆ ಮಳೆ- ಭೂಕುಸಿತ ಭೀತಿ..!

ಬೆಂಗಳೂರು:  ಉತ್ತರ ಕರ್ನಾಟಕ ಮಾತ್ರವಲ್ಲ. ಮಲೆನಾಡು ಮತ್ತು ಕರಾವಳಿಯಲ್ಲೂ ಪುಬ್ಬ ಮಳೆಯ ಅಬ್ಬರ ಬಿರುಸಾಗಿದೆ. ಕಣ್ಮುಚ್ಚಿ ಮಳೆರಾಯ ಧೋ ಅಂತ ಸುರೀತಿರೋ ಕಾರಣಕ್ಕೆ ಕಳೆದ ರಾತ್ರಿ ಎಲ್ಲೆಡೆ ಜಾಗರಣೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾತ್ರಿಯಿಡೀ ಎಡಬಿಡದೇ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆಗೆ... Read more »

ಬಿಜೆಪಿ ಕುದುರೆ ವ್ಯಾಪಾರದ ವಿರುದ್ಧ ಕಾಂಗ್ರೆಸ್ – ಜೆಡಿಎಸ್ ಪ್ರತಿತಂತ್ರ

ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದು, ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಆಮಿಷವೊಡ್ಡಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಜಿ.ಡಿ.ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು  ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು. ಶಿವಮೊಗ್ಗದ ಗಾಂಧೀ ಪಾರ್ಕ್ ನಲ್ಲಿರುವ ಗಾಂಧಿ ಪ್ರತಿಮೆಯ... Read more »

ಅವರೊಬ್ಬ ಅವಕಾಶವಾದಿ ರಾಜಕಾರಣಿ, ಅವರನ್ನ ಮಂತ್ರಿ ಮಾಡಿದರೆ ಎಲ್ಲವೂ ಸರಿ ಇರುತ್ತಿತ್ತು

ಶಿವಮೊಗ್ಗ: ಅವರೊಬ್ಬ ಅವಕಾಶವಾದಿ ರಾಜಕಾರಣಿ. ಅವರನ್ನು ಮಂತ್ರಿ ಮಾಡಿದರೆ ಎಲ್ಲವೂ ಸರಿ ಇರುತ್ತಿತ್ತು ಎಂದು  ರೋಷನ್ ಬೇಗ್ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಆಕ್ರೋಶ ಹೊರಹಾಕಿದರು. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂತ್ರಿ ಮಾಡದೇ ಇರುವುದರಿಂದ, ರೋಷನ್ ಬೇಗ್ ಈ ರೀತಿ ಹೇಳಿಕೆ... Read more »

ಇಂದು ಮೂರನೇ ಹಂತದ ಚುನಾವಣೆ – ಕಣದಲ್ಲಿರುವ ಪ್ರಮುಖರ ಪಟ್ಟಿ, ಎಲ್ಲೆಲ್ಲಿ ಮತದಾನ…? ಮತಗಟ್ಟೆಗಳು ಎಷ್ಟು..? ಸಂಪೂರ್ಣ ಮಾಹಿತಿ

ಕಳೆದೊಂದು ತಿಂಗಳಿಂದ ಕಾದ ಕಾವಲಿಯಂತಾಗಿದ್ದ ರಾಜ್ಯ ಲೋಕಸಭಾ ಚುನಾವಣಾ ಅಖಾಡ ತಣ್ಣಗಾಗೋ ಹಂತಕ್ಕೆ ಬಂದಿದೆ. ಇಷ್ಟು ದಿನ ಅಬ್ಬರಿಸಿ ಬೊಬ್ಬಿರಿದಿದ್ದ ನಾಯಕರೆಲ್ಲಾ ಫುಲ್​ ಸೈಲೆಂಟ್​ ಆಗಿದ್ದು, ಇನ್ನೇನು  ಎರಡನೇ ಹಂತದ ಮತದಾನ ಆರಂಭವಾಗಿದೆ.  ಮತದಾರ ಪ್ರಭುಗಳು ಮತಗಟ್ಟೆಗಳಿಗೆ ತೆರಳಿ ದೇಶದ ಭವಿಷ್ಯ ನಿರ್ಧರಿಸುವುದೊಂದೇ ಬಾಕಿ.... Read more »

ಕುಮಾರ್ ಬಂಗಾರಪ್ಪ ವಿರುದ್ಧ ಗೀತಾ ಶಿವರಾಜ್‌ಕುಮಾರ್ ವಾಗ್ದಾಳಿ

ಶಿವಮೊಗ್ಗ ಲೋಕಸಭಾ ಅಖಾಡದಲ್ಲಿ ಮತ್ತೆ ದಾಯಾದಿ ಕಲಹ ಶುರುವಾಗಿದೆ. ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಿದ ಗೀತಾ ಶಿವರಾಜ್‌ಕುಮಾರ್, ಕುಮಾರ್ ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ‘ಅಧಿಕಾರದಲ್ಲಿದ್ದಾಗ ಸ್ಮಾರಕ ಮಾಡಲು ಅಗಲಿಲ್ಲ. ಅದಕ್ಕೆ ನಾನೇ ಬರಬೇಕಾಯಿತು’ ಎಂಬ ಕುಮಾರ್ ಬಂಗಾರಪ್ಪ ಹೇಳಿಕೆಗೆ... Read more »

ಸೂಕ್ತ ಕ್ರಮಕೈಗೊಳ್ಳುವಂತೆ ಆತನ ವಿರುದ್ಧ ಈಶ್ವರಪ್ಪ ದೂರು ದಾಖಲು

ಬಿಜೆಪಿಯಿಂದ ಮುಸಲ್ಮಾನರಿಗೆ ಟಿಕೆಟ್ ನೀಡದಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪರಿಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿರುವ ಹಿನ್ನೆಲೆ ಜಿಲ್ಲಾ ರಕ್ಷಣಾಧಿಕಾರಿಗೆ ಬಿಜೆಪಿ ಶಾಸಕ ಕೆ. ಎಸ್. ಈಶ್ವರಪ್ಪ ದೂರು ಸಲ್ಲಿಸಿದ್ದಾರೆ. ಕರೆ ಮಾಡಿದ್ದ ವ್ಯಕ್ತಿಯು ಉರ್ದು ಮಿಶ್ರಿತ ಕನ್ನಡ ಭಾಷೆಯಲ್ಲಿ ನನಗೆ ಬೆದರಿಕೆ ಒಡ್ಡಿದ್ದಾನೆ. ಜೀವ... Read more »

ದರ್ಶನ್, ಯಶ್ 2 ದಿನದಿಂದ ಮಂಡ್ಯದಲ್ಲಿ ಪ್ರಚಾರ ನಡೆಸುತ್ತಿರುವುದಕ್ಕೆ ಡಿ ಕೆ ಶಿವಕುಮರ್ ಹೇಳಿದ್ದೇನು..?

ದರ್ಶನ್ ಹಾಗೂ ಯಶ್ ಎರಡು ದಿನದಿಂದ ಮಂಡ್ಯದಲ್ಲಿ ಪ್ರಚಾರ ನಡೆಸುತ್ತಿರುವ ಬಗ್ಗೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದ್ದು, ಅವರ ಕೆಲಸವನ್ನು ಅವರು ಮಾಡುತ್ತಾರೆ. ಮಂಡ್ಯದ ಜನ ಪ್ರಜ್ಞಾವಂತರಿದ್ದಾರೆ. ಬ್ಯಾಲೆಟ್ ಪೇಪರ್ ಉತ್ತರ ಕೊಡುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ದೇಶವನ್ನು... Read more »

ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ನಗರಗಳ ಪಟ್ಟಿ ಇಲ್ಲಿವೆ

ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 1499 ಕೋಟಿ ರೂ. ಕಾಮಗಾರಿ ಆಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಮಾತನಾಡಿದ ಖಾದರ್, ಯೋಜನೆಯಲ್ಲಿ 1499 ಕೋಟಿ ರೂ. ಕಾಮಗಾರಿ ಆಗಿದೆ. 407 ಕೋಟಿ ರೂ. ಕಾಮಗಾರಿ... Read more »

ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ: ಮಹಾಮಾರಿಗೆ ಸರಣಿ ಸಾವು

ಶಿವಮೊಗ್ಗದ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತಿ ಇದೀಗ ಸಾವಿನ ಮನೆಯಾಗುತ್ತಿದೆ.  ಮಂಗನಕಾಯಿಲೆಗೆ ಅರಳಗೋಡು ಗ್ರಾಮದಲ್ಲಿ ಸಾವಿನ ಸರಣಿ ಮುಂದುವರಿದ್ದು, ಇದೀಗ ಯುವತಿ ಶ್ವೇತಾ ಸಾವಿನ ಮೂಲಕ ಸಾವಿನ ಸಂಖ್ಯೆ 6 ಏರಿಕೆಯಾಗಿದೆ. ಶ್ವೇತಾ ಮಂಗನ ಕಾಯಿಲೆಗೆ ಬಲಿ ಮಂಗನ ಖಾಯಿಲೆಗೆ ಇದೀಗ ಶಿವಮೊಗ್ಗ... Read more »

ಸವಾಲು ಗೆದ್ದ ನಾಗಪಾತ್ರಿ… ಹೇಳಿದ ಜಾಗದಲ್ಲೇ ನಾಗಬಿಂಬ, ತ್ರಿಶೂಲ ಪತ್ತೆ!

ತೀರ್ಥಹಳ್ಳಿ ತಾಲೂಕಿನ ಮರಗಳಲೆಯಲ್ಲಿ ನಾಗಪಾತ್ರಿಯದ ನಾಗರಾಜ್ ಅವರಿಂದ ದೈವ ಶಕ್ತಿ ಪ್ರದರ್ಶನ ಕಾರ್ಯ ಶುರುವಾಗಿದೆ. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ತೀರ್ಥಹಳ್ಳಿ ತಾಲೂಕಿನ ಆರಗ ಅಗ್ರಹಾರ ನಾಗಪಾತ್ರಿಯಾಗಿರುವ ನಾಗರಾಜ್, ಮರಗಳಲೆ ಗ್ರಾಮದ ನಾಗಪ್ಪ ಪೂಜಾರಿಯವರ ಮನೆಯ ಹಿಂಭಾಗದ ನಾಗರ ಬನದಲ್ಲಿ ನಾಗಬಿಂಬ ಹೊರತೆಗೆದಿದ್ದಾರೆ. ಶನಿವಾರ... Read more »