80 ಕೋಟಿ ಜನರಿಗೆ ನವೆಂಬರ್​​ ತಿಂಗಳವರೆಗೆ ಉಚಿತ ಅಕ್ಕಿ-ಬೇಳೆ ವಿತರಣೆ – ಪ್ರಧಾನಿ ನರೇಂದ್ರ ಮೋದಿ ಘೋಷಣೆ

ನವದೆಹಲಿ: 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಜೊತೆಗೆ ಒಂದು ಕೆಜಿ ಕಡಲೆಕಾಳನ್ನೂ ನವೆಂಬರ್‌ವರೆಗೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಪಿಡುಗಿನ ಸಂದರ್ಭದಲ್ಲೇ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ... Read more »

‘ಕೊರೊನಾ ಬಿಕ್ಕಟ್ಟು ಸ್ವಾವಲಂಬಿಯಾಗಿರಬೇಕೆಂಬ ಪಾಠವನ್ನು ಕಲಿಸಿದೆ’- ಪಿಎಂ ಮೋದಿ

ನವದೆಹಲಿ: ವಿದೇಶಿ ವಸ್ತುಗಳ ಆಮದು ನಿಲ್ಲಿಸಿ ಸ್ವಾವಲಂಬಿ ಆಗುವ ಮೂಲಕ ಕೋವಿಡ್​-19 ವೈರಸ್ ಬಿಕ್ಕಟನ್ನು ಭಾರತ ಅವಕಾಶವನ್ನಾಗಿ ಪರಿವರ್ತಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ. ಭಾರತದ 41 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಉದ್ಘಾಟಿಸಿದ ಬಳಿಕ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು,... Read more »

ಶತ್ರು ದೇಶದ ವಿರುದ್ಧ ಹೋರಾಡುವುದು ಸರ್ಕಾರ ಅಲ್ಲ, ದೇಶ – ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ದೇಶಕ್ಕಾಗಿ ಬೆವರು-ರಕ್ತ ಹರಿಸಿದ ನಾಯಕರ ಪಕ್ಷವಾದ ಕಾಂಗ್ರೆಸ್ ಪಕ್ಷ ಭಾರತದ ಏಕತೆ, ಅಖಂಡತೆ ಮತ್ತು ಸಾರ್ವಭೌಮತೆಗೆ ಸದಾ ಬದ್ಧವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಟ್ವಿಟ್​ ಮಾಡುವ ಮೂಲಕ ತಿಳಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು,... Read more »

‘ಮೋದಿ ಸರ್ಕಾರ, ತನ್ನ ಸಾಮರ್ಥ್ಯ, ಸಾಧನೆಗಳಿಂದ ಎಲ್ಲರ ವಿಶ್ವಾಸಗಳಿಸುತ್ತಾ ನಡೆ’

ಬೆಂಗಳೂರು: 2ನೇಯ ಅವಧಿಯ ಮೋದಿ ಸರ್ಕಾರ 1ವರ್ಷ ಯಶಸ್ವಿಯಾಗಿ ಪೂರೈಸಿದ ಈ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಂಪುಟ ಸಹೋದ್ಯೋಗಿಗಳಿಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಶನಿವಾರ ತಿಳಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್​ ಖಾತೆ ಅವರು ಹೀಗೆ ಬರೆದುಕೊಂಡಿದ್ದು,... Read more »

‘ನಾಳೆ ಪ್ರಧಾನಿ ಮೋದಿ ಘೋಷಣೆ ಮಾಡಿದ ನಂತರ ನಾನು ಮಾತನಾಡುತ್ತೇನೆ’

ಬೆಂಗಳೂರು: ಮೇ 3 ರವರೆಗೆ ಲಾಕ್​ಡೌನ್ ವಿಸ್ತರಣೆ ಮಾಡಿದ್ದಾರೆ, ಪ್ರಧಾನಿಗಳಿಗೆ ಘೋಷಣೆಗೆ ನಮ್ಮ ಬೆಂಬಲವಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​.ಡಿ. ದೇವೇಗೌಡ ಅವರು ಪ್ರಧಾನಿ ಮೋದಿ ನಿರ್ಧಾರಕ್ಕೆ ಜೈ ಎಂದಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮೋದಿ ಹೇಳಿದ ಎಲ್ಲಾ... Read more »

57,633 ವಾಹನಗಳು ಸೀಜ್, 4,123 ಮಂದಿ ಅರೆಸ್ಟ್​​​ – ಸಿಎಂ ಬಿಎಸ್​ ಯಡಿಯೂರಪ್ಪ

ಬೆಂಗಳೂರು: ಇವತ್ತಿನ ವರೆಗೆ 57,633 ವಾಹನಗಳನ್ನು ಸೀಜ್ ಮಾಡಲಾಗಿದ್ದು, 4,123 ಜನರನ್ನು ಅರೆಸ್ಟ್ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಮಂಗಳವಾರ ತಿಳಿಸಿದ್ದಾರೆ. ನಗರದಲ್ಲಿರುವ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಮತ್ತಷ್ಟು ಬಿಗಿ ಕ್ರಮತೆಗೆದುಕೊಳ್ಳುತ್ತೇವೆ. ಇದಕ್ಕೆ ಜನರು ಸಹಕರಿಸಬೇಕು... Read more »

ಮೇ 3 ರವರಗೆ ಲಾಕ್​ಡೌನ್​ ವಿಸ್ತರಣೆ ಬಗ್ಗೆ ಸಿಎಂ ಬಿಎಸ್​ವೈ ಸ್ಪಷ್ಟನೆ

ಬೆಂಗಳೂರು: ಪ್ರಧಾನಿ ಲಾಕ್​ಡೌನ್ ನಾವು ಸಮರ್ಪಕವಾಗಿ ಅನುಸರಿಸುತ್ತೇವೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಮಂಗಳವಾರ ಹೇಳಿದ್ದಾರೆ. ನಗರದಲ್ಲಿರುವ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ ೨೦ ರ ವರೆಗೆ ಪರಿಸ್ಥಿತಿ ಅವಲೋಕಿಸುತ್ತೇವೆ. ನಾಳೆ ಕೇಂದ್ರದಿಂದ ಮಾರ್ಗಸೂಚಿ ಬರಲಿದೆ. ಅದರಂತೆ... Read more »

‘ಏಪ್ರಿಲ್​ 14 ರ ವರೆಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೆ ಮುಂದಿನ ನಿರ್ಧಾರ’

ಬೆಂಗಳೂರು: ಪ್ರಧಾನಿ ವಿವಿಧ ರಾಜ್ಯಗಳ ಸಿಎಂ ಜೊತೆ ಕಾನ್ಫರೆನ್ಸ್ ಮಾಡಿದರು, ಕೊರೊನಾ ಲಾಕ್​ಡೌನ್​ ಬಗ್ಗೆ ಮಾತನಾಡಿದರು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಾಕ್​ಡೌನ್​ ಉಲ್ಲಂಘಿಸಿದರೆ ಕಠಿಣ ಕ್ರಮಕ್ಕೆ ಸೂಚಿಸಿದರು. ವಲಸಿಗರನ್ನು ಪ್ರತ್ಯೇಕ ವಿವರಿಸಿ ಅಗತ್ಯ... Read more »

ಮಧ್ಯರಾತ್ರಿಯಿಂದಲೇ 21 ದಿನಗಳ ಕಾಲ ಇಡೀ ಭಾರತವೇ ಲಾಕ್​ಡೌನ್ ​- ಪಿಎಂ ಮೋದಿ

ನವದೆಹಲಿ: ಇಂದು ಮಧ್ಯರಾತ್ರಿಯಿಂದಲೇ ಇಡೀ ಭಾರತ ಲಾಕ್​ಡೌನ್​ ಆಗಿ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ. ದೇಶಾದ್ಯಂತ ಬಹಳ ವೇಗವಾಗಿ ಮಹಾಮಾರಿ ಕೊರೊನಾ ವೈರಸ್ ಸೋಂಕು​​ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,... Read more »

ಇವರು 1000 ವೋಲ್ಟ್‌ನ ಹ್ಯಾಲೋಜಿನ್‌ ಲೈಟ್‌ ಇದ್ದ ಹಾಗೆ: ನಳಿನ್‌ ಕುಮಾರ್‌ ಕಟೀಲ್‌

ಚಿತ್ರದುರ್ಗ:  ಮೋದಿ ಜೀರೋ ಕ್ಯಾಂಡಲ್ ಬಲ್ಬ್ ಎಂಬ ಖರ್ಗೆ ಹೇಳಿಕೆಗೆ ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿಯವರು 1000 ವೋಲ್ಟ್ ನ ಹಲೋಜಿನ್ ಲೈಟ್ ಇದ್ದ ಹಾಗೆ, ಅವರು ಇಡಿ ಜಗತ್ತಿಗೆ ಬೆಳಕು ಕೊಡುತ್ತಿದ್ದಾರೆ. ಅದರೆ ಖರ್ಗೆ ರಾಜಕೀಯವಾಗಿ... Read more »

ಯಾವುದೇ ಸಂಕೋಚ ಭಯವಿಲ್ಲದೇ ನಾವು ಮಾತನಾಡೋಣ – ನರೇಂದ್ರ ಮೋದಿ

ಬೆಂಗಳೂರು:  ಮತ್ತೊಮ್ಮೆ ನಿಮ್ಮ ಮುಂದೆ ನಿಮ್ಮ ಸ್ನೇಹಿತ ಬಂದಿದ್ದೇನೆ.  2020 ಈ ಸಾಲಿನ ವಿದ್ಯಾರ್ಥಿಗಳ ಪಾಲಿಗೆ ಮಹತ್ವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಪರೀಕ್ಷಾ ಪೇ ಚರ್ಚಾದಲ್ಲಿ ಮೋದಿ ಮಾತನಾಡಿದ್ದು, ಈ ದಶಕದಲ್ಲಿರೋ ನಿಮಗೆ ಶುಭಾಶಯಗಳು. ಪ್ರತಿಯೊಂದು ಘಟನೆ ಉತ್ತಮ ಅನುಭವವಾಗಿದೆ.... Read more »

ನಾನು ಸಿಎಂ ಆಗಿ ಮುಂದುವರೆದಿದ್ದರೆ ಮೋದಿ ಬಾಗಿಲಿಗೆ ಹೋಗುತ್ತಿರಲಿಲ್ಲ – ಹೆಚ್​ಡಿಕೆ

ಬೆಂಗಳೂರು: ಸಿಎಂ ಆಗಿ ಮುಂದುವರೆದಿದ್ದರೆ ನಾನು ಪ್ರಧಾನಿ ನರೇಂದ್ರ ಮೋದಿ ಬಾಗಿಲಿಗೆ ಹೋಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಶುಕ್ರವಾರ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರಾಜ್ಯ ಸಂಪದ್ಭರಿತ ರಾಜ್ಯ, ಲಕ್ಷ್ಮಿ ಇರುವ ರಾಜ್ಯ, ತೆರಿಗೆ ಹಣದಿಂದಲೇ ಬೊಕ್ಕಸ ತುಂಬಿಸುತ್ತಿದೆ.  ಅಭಿವೃದ್ಧಿಗೆ... Read more »

ವಿರೋಧ ಪಕ್ಷಗಳಿಗೆ ಮೋದಿ ಬಹಿರಂಗ ಸವಾಲು

ನವದೆಹಲಿ:  ಪೌರತ್ವ ತಿದ್ದುಪಡಿ ಕಾಯ್ದೆಯು ಆಡಳಿತರೂಢ ಮತ್ತು ವಿರೋಧ ಪಕ್ಷಗಳ ಆರೋಪ ಹಾಗೂ ಪ್ರತ್ಯಾರೋಪಕ್ಕೆ ವೇದಿಕೆ ಒದಗಿಸಿದೆ. ಎನ್‌ಡಿಎಯೇತರ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಈಗಾಗಲೇ ಬೀದಿಗಿಳಿದ್ದಾರೆ. ದೆಹಲಿಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ವಿರೋಧ ಪಕ್ಷಗಳ ನಾಯಕರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ... Read more »

56 ಇಂಚಿನ ಎದೆಯುಳ್ಳ ಮೋದಿ ಅವರಿಂದ ನಿಮ್ಮ ರಕ್ಷಣೆ, ಅಭಿವೃದ್ಧಿ ಸಾಧ್ಯ..?!

ಜಾರ್ಖಂಡ್: ಅಯೋಧ್ಯೆಯಲ್ಲಿ ನಾಲ್ಕು ತಿಂಗಳಲ್ಲಿ ರಾಮ ಮಂದಿರ ನಿರ್ಮಾಣ’ – ಅಮಿತ್​ ಶಾ  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಗಡುವು ನಿಗದಿಯಾಗಿದೆ. ಇನ್ನು 4 ತಿಂಗಳಲ್ಲೇ ರಾಮವ ಜನ್ಮಸ್ಥಳದಲ್ಲಿ ಗಗನಚುಂಬಿ ಭವ್ಯ ದೇಗಲು ತಲೆ ಎತ್ತಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ. ಈ... Read more »

ಆಧಾರ್‌ಕಾರ್ಡ್‌ ಅಡವಿರಿಸಿಕೊಂಡು ಈರುಳ್ಳಿ ಖರೀದಿಸಲು ಸಾಲ..!

ವಾರಣಾಸಿ: ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಒಂದು ಕೆಜಿ ಕೊಂಡುಕೊಳ್ಳಲು ಗ್ರಾಹಕರು ಯೋಚಿಸುವಂತಾಗಿದೆ. ಕೆಜಿ ಈರುಳ್ಳಿ ಬೆಲೆ 130ರೂ. ತಲುಪಿದ್ದು, ಕತ್ತಿರಿಸುವಾಗಷ್ಟೇ ಅಲ್ಲ. ಕೊಳ್ಳುವಾಗ್ಲೂ ಕಣ್ಮೀರಿಡುಂತಾಗಿದೆ. ವಿಪರ್ಯಾಸ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ತವರು ಕ್ಷೇತ್ರದಲ್ಲೇ ಈರುಳ್ಳಿ ಖರೀದಿಸಲು ಸಾಲ ನೀಡಲಾಗ್ತಿದೆ. ಉತ್ತರ ಪ್ರದೇಶದ... Read more »

ಮೋದಿಗೆ ಕಂಟಕ ಇದೆ ,ಯಡಿಯೂರಪ್ಪ ಅವಧಿ ಪೂರೈಸಲ್ಲ,ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ – ಬ್ರಹ್ಮಾಂಡ ಗುರೂಜಿ ಭವಿಷ್ಯ

ಹಾಸನ: ನವೆಂಬರ್ 4 ರಿಂದ ಸಂಕ್ರಾಂತಿ ವರೆಗೆ ಪ್ರಧಾನಿ ನರೇಂದ್ರ ಮೋದಿಗೆ ಕಂಟಕ ಇದೆ ಎಂದು ಹಾಸನಾಂಬೆ ದರ್ಶನ ಬಳಿಕ ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಹಾಸನದಲ್ಲಿ ಶುಕ್ರವಾರ ಮಾತನಾಡಿದ ಅವರು,  ಮೋದಿಯ ಅಧಿಕಾರ ಈ ಅವಧಿಗೆ ಕೊನೆಯಾಗಲಿದೆ, ನವೆಂಬರ್ 4 ರ ಬಳಿಕ ಮತ್ತೆ... Read more »