‘ಒಂದು ಲೋ ವರ್ಗ ಜನ ಆಮೀಷಕ್ಕೆ ಒಳಗಾಗಿ ಮಾತನಾಡುತ್ತಿದ್ದಾರೆ ಎನ್ನುವ ಅನುಮಾನ ಕಾಡುತ್ತೆ’

ಗದಗ: ಅಮೂಲ್ಯ ಲಿಯೋನ್​ ಪಾಕ್ತಿಸಾನ ಜಿಂದಾಬಾದ್​ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಸಿ.ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದು, ಪಾಕ್ತಿಸಾನ ಪರವಾಗಿ ಘೋಷಣೆ ಕೂಗಿರುವುದು ದುರದೃಷ್ಟಕರ, ಅದು ಕೂಡಾ ಫ್ರೀಡಂ ಪಾರ್ಕ್ ಅಂತಾ ಕರಿಸಿಕೊಳ್ಳುವ ಪವಿತ್ರ ಸ್ಥಳದಲ್ಲಿ, ಆಯೋಜಕರು ಹೇಳ್ತಾರೆ ಅಮೂಲ್ಯಗೆ ಕಾರ್ಯಕ್ರಮಕ್ಕೆ ಆಹ್ವಾನ... Read more »

‘ನನ್ನ ಇಲಾಖೆ ನನ್ನಲ್ಲಿ ಕೇಳದೆ ಒಪ್ಪಿಗೆ ಕೊಟ್ಟಿದ್ದಾರೆ’ – ಸಚಿವ ಹೆಚ್​.ನಾಗೇಶ್​

ಉಡುಪಿ: ಬೆಂಗಳೂರು ನಗರದಲ್ಲಿ ನೀರಾ ಶಾಪ್ ಓಪನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ಹೆಚ್​.ನಾಗೇಶ್ ಅವರು, ಈ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ, ಮಾಹಿತಿ ಸಂಗ್ರಹಿಸಿ ಬೆಂಗಳೂರಿನಲ್ಲಿ ತಿಳಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಉಡುಪಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ... Read more »

‘ನನ್ನ ಹಾಗೂ ಲಕ್ಷ್ಮಣ್ ಸವದಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ – ಮಹೇಶ್ ಕುಮಟಳ್ಳಿ

ಬೆಳಗಾವಿ: ಲಕ್ಷ್ಮಣ್ ಸವದಿ ರಾಜಕೀಯ ಭವಿಷ್ಯಕ್ಕಾಗಿ ಮಹೇಶ್ ಕುಮಟಳ್ಳಿ ಬಲಿ ಎಂಬ ಆರೋಪದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕುಮಟಳ್ಳಿ ಅವರು, ನನ್ನ ಹಾಗೂ ಲಕ್ಷ್ಮಣ್ ಸವದಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು... Read more »

‘ಕ್ಯಾಸಿನೋ ಸೆಂಟರ್ ಓಪನ್ ಮಾಡಬೇಕೆಂದು ನಾನು ನೇರವಾಗಿ ಹೇಳಿಲ್ಲ’ – ಸಿ.ಟಿ. ರವಿ

ಉಡುಪಿ: ನಮ್ಮಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ, ಅಮೇರಿಕಾದಲ್ಲಿ ಸಾಕಷ್ಟು ಕ್ಯಾಸಿನೋ ಸೆಂಟರ್​ಗಳಿವೆ, ಕರ್ನಾಟಕದಿಂದ ಸಾಕಷ್ಟು ಮಂದಿ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಹೇಳಿದ್ದಾರೆ. ಉಡುಪಿಯ ಕಾರ್ಕಳದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿಂಗಾಪುರ, ಶ್ರೀಲಂಕಾ ಕ್ಯಾಸಿನೋದಿಂದ ಪ್ರಸಿದ್ಧಿಯಾದ ದೇಶಗಳು,... Read more »

ಮಣ್ಣಲ್ಲಿ ಮಣ್ಣಾದ ಮಾಜಿ ಸಚಿವ ಚನ್ನಿಗಪ್ಪ: ಅಂತಿಮ ದರ್ಶನ ಪಡೆದ ಹಲವು ಗಣ್ಯರು.!

ನೆಲಮಂಗಲ: ಕಳೆದ ಒಂದು ವರ್ಷದಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಸಿ. ಚನ್ನಿಗಪ್ಪ ಮಣ್ಣಲ್ಲಿ ಮಣ್ಣಾಗಿದ್ದಾರೆ. ಬಹುದಿನಗಳಿಂದ ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದ ಚನ್ನಿಗಪ್ಪ ಅವರು ಸಿಂಗಾಪುರ್ ಸೇರಿ ಇತರೆಡೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚೆಗೆ ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.... Read more »

ರಮೇಶ್​ ಜಾರಿಕಿಹೊಳಿಯಿಂದ ಈ ಭಾಗ್ಯ ಪಡೆದಿದ್ದೇನೆ – ಕುಮಟಳ್ಳಿ

ಬೆಳಗಾವಿ: ಬೆಳಗಾವಿಯ ಡಿಸಿಸಿ ಬ್ಯಾಂಕ್​ಗೆ ಸರ್ಕಾರದಿಂದ ನಾಮ ನಿರ್ದೇಶನ ಮಾಡಿ ಎಂದು ನಾನು ಕೇಳಿಲ್ಲ ಎಂದು ಶಾಸಕ ಮಹೇಶ್​ ಕುಮಟಳ್ಳಿ ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ಯಾವುದೇ ಸೊಸೈಟಿಯ ಸದಸ್ಯನಲ್ಲ, ಅಧ್ಯಕ್ಷನೂ ಇಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆಗೆ ನನಗೆ ನಿಲ್ಲೋಕೆ ಬರಲ್ಲ. ಹೀಗಾಗಿ ಡಿಸಿಸಿ ಬ್ಯಾಂಕ್... Read more »

ಅಮೂಲ್ಯ ಲಿಯೋನ್​ಗೆ ಮಾತಾಡೋಕೆ ಅವಕಾಶ ಕೊಡ್ಬೇಕಿತು ಎಂಬ ಡಿಕೆಶಿ ಹೇಳಿಕೆಗೆ ಗೃಹಂಮಂತ್ರಿ ಪ್ರತಿಕ್ರಿಯೆ

ಹಾವೇರಿ: ಹುಬ್ಬಳ್ಳಿ ದೇಶದ್ರೋಹಿ ಪ್ರಕರಣ ಬೆಳಗಾವಿಗೆ ವರ್ಗಾಯಿಸಲಾಗಿದೆ, ಅಲ್ಲಿಯ ಐಜಿ ಎಲ್ಲವನ್ನು ನೋಡುತ್ತಿದ್ದಾರೆ ಎಂದು ಗೃಹಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಯಾವ ವಕೀಲರು ಅವರ ಪರವಾಗಿ ವಾದ ಮಂಡನೆಗೆ ಮುಂದಾಗೋದಿಲ್ಲ ಎಂದಿದ್ದಾರೆ. ಆದರೆ ಬೆಂಗಳೂರುನಲ್ಲಿ... Read more »

ಕೊರೋನಾ ವೈರಸ್​ : ಚೀನಾದಲ್ಲಿ ಸಾವಿನ ಸಂಖ್ಯೆ ಏರಿಕೆ

ಬೀಜಿಂಗ್: ಚೀನಾದಲ್ಲಿ ಕೊರೋನಾ ವೈರಸ್​​ ತಗುಲಿ ಇಲ್ಲಿಯ ವರೆಗೆ 2,345 ಜನರು ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತನ್ನ ವರದಿಯಲ್ಲಿ ಶನಿವಾರ ಹೇಳಿದೆ. ಚೀನಾದಲ್ಲಿರುವ 31 ಪ್ರಾಂತ್ಯಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 76,288 ರಷ್ಟಿದೆ. ಈ ಪೈಕಿ 53,284 ಜನರು ಇನ್ನೂ ಈ... Read more »

ಶಿಲ್ಪಾ ಶೆಟ್ಟಿ ಮನೆಗೆ ಹೊಸ ಅತಿಥಿ

ಮಂಗಳೂರು ಚೆಲುವೆ ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ.. ಫೆಬ್ರವರಿ 15ರಂದು ರಾಜ್​ ಕುಂದ್ರ ಮತ್ತು ಶಿಲ್ಪಾ ಶೆಟ್ಟಿ ದಂಪತಿಗೆ ಮುದ್ದಾದ ಹೆಣ್ಣು ಮಗುವನ್ನು ಬಾಡಿಗೆ ತಾಯಿತನದ ಮೂಲಕ ಪಡೆದಿದ್ದು, ಸಮೀಶಾ ಶೆಟ್ಟಿ ಕುಂದ್ರ ಎಂದು ಹೆಸರಿಟ್ಟಿದ್ದಾರೆ. ಶಿವರಾತ್ರಿ ಹಬ್ಬಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಕುಂದ್ರ... Read more »

ಅನ್ಯಾಯವಾಗಿದೆ ಎಂದು ಇವ್ರು ಹೇಳಿದ್ರೆ ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ – ರಮೇಶ್​ ಜಾರಕಿಹೊಳಿ

ಬೆಳಗಾವಿ: ಶಾಸಕ ಮಹೇಶ್ ಕುಮಟಳ್ಳಿಗೆ ಅನ್ಯಾಯ ಆಗಲು ಬಿಡಲ್ಲ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಹೇಳಿದ್ದಾರೆ. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ರಮೇಶ್​ ಜಾರಿಕಿಹೊಳಿ ಜಿಲ್ಲೆಗೆ ಆಗಮಿಸಿದ್ದರಿಂದ ಕನ್ನಡಪರ ಹೋರಾಟಗಾರರು ಸಚಿವರಿಗೆ ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ... Read more »

ಅಯ್ಯಪ್ಪ ಸ್ವಾಮಿ ಮೊರೆಹೋದ ಶಿವರಾಜ್​ ಕುಮಾರ್

ಬೆಂಗಳೂರು:  ಹ್ಯಾಟ್ರಿಕ್​​ ಹೀರೋ ನಟ ಶಿವರಾಜ್​ ಕುಮಾರ್​ ಅಯ್ಯಪ್ಪನ ಮಾಲೆ ಧರಿಸಿದ್ದಾರೆ. ಎರಡು ವರ್ಷ ಗ್ಯಾಪ್​ನ ನಂತರ ಮತ್ತೇ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಶಿವಣ್ಣ ಹೊರಟಿದ್ದು, ಇಂದು ಬಿಇಎಲ್​ ರೋಡ್​ನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾಲೆ ಧರಿಸಿ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ಹಲವು... Read more »

ವೀರಶೈವ ಧರ್ಮದವನಾಗಿ ಸಿಎಎ-ಎನ್​ಆರ್​ಸಿ ವಿರೋಧಿಸುತ್ತೇನೆ- ವಿಜಯಾನಂದ ಕಾಶಪ್ಪನವರ

ಬಾಗಲಕೋಟೆ: ಪೌರತ್ವ ತಿದ್ದುಪಡಿ ಕಾನೂನು (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಕಾಯ್ದೆ ವಿರೋಧಿಸಿ ಮುಸ್ಲಿಂ ಧರ್ಮಿಯರು ಮಾತ್ರ ಹೋರಾಟ ಮಾಡುತ್ತಿಲ್ಲ. ದೇಶಾದ್ಯಂತ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿದೆ ಎಂದು ಹುನಗುಂದ ಮಾಜಿ ಕಾಂಗ್ರೆಸ್​ ಶಾಸಕ ವಿಜಯಾನಂದ ಕಾಶಪ್ಪನವರ್​ ಅವರು ಹೇಳಿದರು. ಸಿಎಎ, ಎನ್​ಆರ್​ಸಿ, ಎನ್​​ಪಿಆರ್... Read more »

ರಾತ್ರಿ ಜಾಗರಣೆ ಮಾಡಿದ ಮಾಜಿ ಪ್ರಧಾನಿ ದೇವೇಗೌಡ

ಹಾಸನ:  ಶಿವರಾತ್ರಿ ಹಬ್ಬದ ಪ್ರಯುಕ್ತ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರು ತಮ್ಮ ಸ್ವಗ್ರಾಮ ಹರದನಹಳ್ಳಿಯ ಮನೆದೇವರಾದ ಈಶ್ವರನ ದೇವಸ್ಥಾನದಲ್ಲಿ ರಾತ್ರಿ ಸುಮಾರು ಒಂದು ಗಂಟೆವರೆಗೂ ಜಾಗರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಿನ್ನೆ ಸಂಜೆ ಹಾಸನ ನಗರದಲ್ಲಿರುವ ನಿವಾಸಕ್ಕೆ ಪತ್ನಿ ಚನ್ನಮ್ಮ ಅವರೊಂದಿಗೆ ಆಗಮಿಸಿದ... Read more »

ಇಂತಹ ವ್ಯಕ್ತಿಗಳನ್ನು ಬೇರು ಸಮೇತ ಕಿತ್ತಾಕಬೇಕು – ಬಸವರಾಜ ಬೊಮ್ಮಾಯಿ

ದಾವಣಗೆರೆ: ರಾಜ್ಯದಲ್ಲಿ ಹೊಸ ಬೆಳವಣಿಗೆ ನಡೆಯುತ್ತಿದೆ, ದೇಶದಲ್ಲೂ ನಡೆಯುತ್ತಿದೆ ಎಂದು ಶನಿವಾರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ವಿದ್ಯಾರ್ಥಿಗಳನ್ನು ಬಳಕೆ ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ,ಧರ್ಮಗಳ ನಡುವೆ ವೈಷ್ಯಮ್ಯ ಬೆಳೆಸುವ ಕೆಲಸ ಮಾಡುತ್ತಿರುವ ಇಂತಹ ಶಕ್ತಿಗಳನ್ನು... Read more »

ಎಸ್​​ಎಸ್​ಎಲ್​ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಚಿವ ಎಸ್​.ಸುರೇಶ್ ಕುಮಾರ್ ಪ್ರತಿಕ್ರಿಯೆ

ಬೆಂಗಳೂರು: ಎಸ್​​ಎಸ್​ಎಲ್​​ಸಿ (ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್) ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಎಸ್​.ಸುರೇಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಪೂರ್ವ ಸಿದ್ದತಾ ಪರೀಕ್ಷೆ ನಡೆಸುವುದು ಮಕ್ಕಳಲ್ಲಿ... Read more »

ಆಂದೋಲ ಶ್ರೀಗಳ ಪ್ರಚೋದನಕಾರಿ ಭಾಷಣ ಎಲ್ಲೆಡೆ ವೈರಲ್..!

ರಾಯಚೂರು: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರ ವಿರುದ್ದ ಮಾತನಾಡುವವರಿಗೆ ಗೌರಿ ಲಂಕೇಶ್​ಗೆ ಆದ ಗತಿಯಾಗುತ್ತದೆ ಎಂದು ಆಂದೋಲ ಶ್ರೀಗಳು ಹೇಳಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಫೆ.2 ರಂದು ಭಾರತ ಯುವ ವಿವೇಕ ಸಂಘದಿಂದ ಶಕ್ತಿನಗರದಲ್ಲಿ ಧರ್ಮಸಮ್ಮೇಳನದಲ್ಲಿ ಆಯೋಜಿಸಿದ್ದರು. ಆಗ ಪ್ರಚೋದನಾಕಾರಿ... Read more »