‘ಅವರಿಗೆ ಕಾಂಗ್ರೆಸ್, ಬಿಜೆಪಿ ಮೋಸ ಮಾಡಿದೆ, ನಮ್ಮ ಪಕ್ಷಕ್ಕೆ ಬಂದ್ರೆ ಹೃತ್ಪೂರ್ವಕ ಸ್ವಾಗತ’

ಹಾಸನ: ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಅನರ್ಹ ಶಾಸಕ ರೋಷನ್ ಬೇಗ್ ಪರ ಫುಲ್ ಬ್ಯಾಟಿಂಗ್ ಮಾಡಿದ್ದು, ಜೆಡಿಎಸ್ ಜೊತೆ ಸೇರಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ರೇವಣ್ಣ, ನಮ್ಮ ಪಕ್ಷಕ್ಕೆ ಬಂದರೆ ಅವರನ್ನು ಸ್ವಾಗತಿಸಿ ಕರೆದುಕೊಳ್ಳುತ್ತೇವೆ. ಕಾಂಗ್ರೆಸ್, ಬಿಜೆಪಿ... Read more »

‘ಅನರ್ಹರ ಪರ ನಾವು ಕ್ಯಾಂಪೇನ್ ಮಾಡಲ್ಲ’

ಬೆಂಗಳೂರು: ನಾವು ಅನರ್ಹರ ಪರ ಕ್ಯಾಂಪೇನ್ ಮಾಡಲ್ಲವೆಂದು ಬಿಜೆಪಿ ಸ್ಟಾರ್ ಪ್ರಚಾರಕಿಯರು ನಿರ್ಧರಿಸಿದ್ದಾರೆನ್ನಲಾಗಿದೆ. ನಟಿ ತಾರಾ, ಮಾಳವಿಕಾ, ಶೃತಿ ಸೇರಿದಂತೆ ಬಿಜೆಪಿಯ ಸ್ಟಾರ್ ಪ್ರಚಾರಕಿಯರು, ಅನರ್ಹ ಶಾಸಕರ ಪರ ಪ್ರಚಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅನರ್ಹರು ಕಾಂಗ್ರೆಸ್‌ನಲ್ಲಿದ್ದಾಗ ಅವರ ವಿರುದ್ಧ ಹಲವು ಪ್ರತಿಭಟನೆ ಮಾಡಿದ್ದೇವೆ.... Read more »

ಚುನಾವಣೆಗೆ ನಿಲ್ಲೋ ಬಗ್ಗೆ ಜಿಟಿಡಿ ಪುತ್ರ ಹರೀಶ್‌ಗೌಡ ಹೇಳಿದ್ದೇನು..?

ಮೈಸೂರು: ನಾನು ಈ ಬಾರಿ ಹುಣಸೂರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡೋಲ್ಲ. ನನಗೆ ಯಾವುದೇ ಪಕ್ಷದಿಂದ ಆಫರ್ ಬಂದಿಲ್ಲ ಎಂದು ಜಿ.ಟಿ.ದೇವೇಗೌಡ ಪುತ್ರ ಹರೀಶ್‌ಗೌಡ ಸ್ಪಷ್ಟನೆ ನೀಡಿದ್ದಾರೆ. ನಮಗೂ ಹುಣಸೂರಿಗೂ ಅವಿನಾಭಾವ ಸಂಬಂಧ ಇದೆ. ಆ ಸಂಬಂಧದ ಹಿತದೃಷ್ಟಿಯಿಂದ ಜನರು ನಮ್ಮನ್ನ ಚುನಾವಣೆಗೆ ನಿಲ್ಲಿ ಅಂತ... Read more »

‘ಲಖನ್ ಸ್ವಂತ ನಿರ್ಧಾರ ಕೈಗೊಂಡ್ರೆ ಅದು ಬೆನ್ನಿಗೆ ಚೂರಿ ಹಾಕಿದಂಗಾ?’

ಬೆಳಗಾವಿ: ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಇಂದು ಸಾಯಂಕಾಲ ಅಥವಾ ನಾಳೆ ಮುಂಜಾನೆ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗತ್ತೆ ಎಂದರು. ಗೋಕಾಕ್ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಲಖನ್ ಜಾರಕಿಹೊಳಿ ಒಂದೇ ಹೆಸರಿದೆ ಅದೇ ಫೈನಲ್. ಗೋಕಾಕ್‌ನಲ್ಲಿ... Read more »

‘ಲಖನ್ ಜಾರಕಿಹೊಳಿ ಇವತ್ತಿನಿಂದ ನನ್ನ ತಮ್ಮ ಅಲ್ಲ, ಲಖನ್ ನಡೆ ನೋವು ತರಿಸಿದೆ’

ಬೆಳಗಾವಿ: ಬೆಳಗಾವಿಯಲ್ಲಿ ಮಾತನಾಡಿದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ, ಸಹೋದರ ಲಖನ್ ಜಾರಕಿಹೊಳಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ 15 ತಿಂಗಳಿಂದ ಹಿಂದೇಯೆ ನಾನು ಬಿಜೆಪಿ ಅಭ್ಯರ್ಥಿ ಆಗಿದ್ದೆ. ಕಾನೂನು ತೊಡಗಿನಿಂದ ಬಾಯಿ ಬಿಟ್ಟಿರಲಿಲ್ಲ. ಮಾಧ್ಯಮಗಳ ಮೇಲೆ ಸಿಟ್ಟಿತ್ತು, ಆದ್ರೆ ಈಗ ನಾನು ಮಾಧ್ಯಮಗಳಿಗೆ... Read more »

ಮಹಾರಾಷ್ಟ್ರದಲ್ಲಿ ಸರ್ಕಾರ ಸ್ಥಾಪಿಸುವಲ್ಲಿ ಸಕ್ಸಸ್ ಆಗತ್ತಾ ಬಿಜೆಪಿಯೇತರ ಪಕ್ಷಗಳು..?

ಮಹಾರಾಷ್ಟ್ರದಲ್ಲಿ ಸದ್ಯ ರಾಷ್ಟ್ರಪತಿ ಆಳ್ವಿಕೆ ಇದೆ. ಆದ್ರೂ ಬಹುಮತ ಸಾಬೀತು ಮಾಡೋದಾದ್ರೆ ಯಾವುದೇ ಪಕ್ಷ ಸರ್ಕಾರ ರಚನೆ ಮಾಡಬಹುದು. ಹೀಗಾಗಿ ಕಾಂಗ್ರೆಸ್, ಶಿವಸೇನೆ, ಎನ್‌ಸಿಪಿ ಪಕ್ಷಗಳು ಸರ್ಕಾರ ರಚನೆಗೆ ಕಸರತ್ತು ಮಾಡ್ತಿವೆ. ಹಾಗಿದ್ರೆ ಮೂರು ಪಕ್ಷಗಳ ಮುಂದಿನ ಹಾದಿ ಏನು..? ಏನೆಲ್ಲಾ ಪ್ಲಾನ್ ಮಾಡ್ತಿವೆ..?... Read more »

‘ಇಂಥ ಅಯೋಗ್ಯರ ಮಾತಿಂದಾನೇ ಕಾಂಗ್ರೆಸ್ ನಾಶವಾಗುತ್ತಿದೆ’

ಕೊಪ್ಪಳ: ಕೊಪ್ಪಳದ ಗಂಗಾವತಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, 17 ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಟಿಕೇಟ್ ನೀಡುವಲ್ಲಿ ರಾಜೀನಾಮೆ ನೀಡಿದವರಿಗೆ ಸಿಎಂ ಆದ್ಯತೆ ನೀಡಿದ್ದಾರೆ. ಸಿಎಂ ರಾಜೀನಾಮೆ ಕೊಟ್ಟವರಿಗೆ ಟಿಕೇಟ್ ನೀಡುವ ಭರಸವೆ ಕೊಟ್ಟಿದ್ದರು. ಆ ಕಾರಣಕ್ಕೆ... Read more »

ಎಲ್ಲರಿಗೂ ಸಚಿವ ಸ್ಥಾನ ಎಂದ ಸಿಎಂ ಯಡಿಯೂರಪ್ಪ..!

ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿದ್ದ ಅನರ್ಹ ಶಾಸಕರು, ಕೈ-ದಳ ಬಿಟ್ಟು ಕಮಲ ಮುಡಿದಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬರ್ತಿದ್ದಂತೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ ಬರ್ತಿದ್ದಂತೆ ಸಚಿವ ಸ್ಥಾನದ ಭರವಸೆಯೂ ಸಿಕ್ಕಿದೆ. ಸುಪ್ರೀಂ ತೀರ್ಪಿನ ಆಧಾರದ ಮೇಲೆ ಅನರ್ಹ ಶಾಸಕರ ಭವಿಷ್ಯ... Read more »

‘ವಿಶ್ವನಾಥ್ ಈಗ ಮೂರು ಪಕ್ಷದ ಹಕ್ಕಿ, ಪಕ್ಷದಿಂದ ಪಕ್ಷ ಹಾರುವ ವಲಸೆ ಹಕ್ಕಿ’

ಮೈಸೂರು: ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಧೃವನಾರಾಯಣ್, ಅನರ್ಹ ಶಾಸಕ ಹೆಚ್. ವಿಶ್ವನಾಥ್ ಬಿಜೆಪಿ ಸೇರಿದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಎಂದರೆ ರೋಮಾಂಚನ ಅಂತ ವಿಶ್ವನಾಥ್ ಹೇಳ್ತಿದ್ರು. ಹಾಗೇ ಹೇಳುತ್ತಿದ್ದ ಆ ಮನುಷ್ಯನೆ ಕಾಂಗ್ರೆಸ್ ಬಿಟ್ಟೋದ್ರು. ಕಾಂಗ್ರೆಸ್ ಬಗ್ಗೆ ಅವರು ಹೇಳುತ್ತಿದ್ರೆ ರೋಮಾಂಚನವಾಗುತ್ತಿತ್ತು. ಅವರು... Read more »

‘ರಾಕ್ಷಸ ರಾಜಕಾರಣ ಕೊನೆಗಾಣಿಸಲು ರಾಜೀನಾಮೆ ನೀಡಿದ್ದೇವೆ, ಸಂತೋಷದಿಂದ ಬಿಜೆಪಿ ಸೇರಿದ್ದೇವೆ’

ಬೆಂಗಳೂರು: ಬಿಜೆಪಿ ಸೇರಿದ ಬಳಿಕ ಹೆಚ್.ವಿಶ್ವನಾಥ್ ಮಾತನಾಡಿದ್ದು, ನಾವು 17 ಜನ ಅತ್ಯಂತ ಸಂತೋಷದಿಂದ ಬಿಜೆಪಿ ಸೇರಿದ್ದೇವೆ. ನಾವೆಲ್ಲರೂ ಕೂಡ ರಾಜಕಾರಣ ಮಾಡಿದ್ದೇವೆ. ಯಾವ್ಯಾವ ಸಂದರ್ಭ ಏನಾಗುತ್ತದೆ ಎಂದು ಹೇಳಲು ಆಗಲ್ಲ. ಶಾಸ್ತ್ರದಲ್ಲೂ ಯಾವ ಕಾಲಕ್ಕೆ ಯೋಗಾನುಯೋಗ, ಫಲಾನುಫಲ ಬರುತ್ತೆ ಎಂದು ಹೇಳಲು ಆಗಲ್ಲ.... Read more »

ಕಣದಿಂದ ಹಿಂದೆ ಸರಿದ ಸಿ.ಪಿ ಯೋಗೇಶ್ವರ್: ಹುಣಸೂರಿನಿಂದ ವಿಶ್ವನಾಥ್ ಸ್ಪರ್ಧೆ ಖಚಿತ

ಮೈಸೂರು: ಹುಣಸೂರಿನಿಂದ ಹೆಚ್.ವಿಶ್ವನಾಥ್ ಬಿಜೆಪಿ ಸ್ಪರ್ಧೆ ಖಚಿತವಾಗಿದ್ದು, ಚುನಾವಣೆಗೆ ತಯಾರಿ ನಡೆಸಿದ್ದ ಸಿ.ಪಿ.ಯೋಗೇಶ್ವರ್ ಕಣದಿಂದ ಹಿಂದೆ ಸರಿದಿದ್ದಾರೆ. ಸದ್ಯಕ್ಕೆ ಅನರ್ಹರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಬಂದಿದ್ದು, ಅನರ್ಹರೂ ಕೂಡ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಹೀಗಾಗಿ ಅನರ್ಹರಿಗೆ ಬಿಜೆಪಿಯಿಂದ ಟಿಕೇಟ್ ಸಿಗೋದಂತೂ ಖಚಿತವಾಗಿದೆ. ಇಂದು ಹೈಕಮಾಂಡ್‌ಗೆ ಬಿಜೆಪಿ... Read more »

ಉಪಚುನಾವಣೆ: 15 ಕ್ಷೇತ್ರಗಳ ಬಿಜೆಪಿ ಉಸ್ತುವಾರಿ ಪಟ್ಟಿ.!

ಬೆಂಗಳೂರು:  ಅನರ್ಹ ಶಾಸಕರೆಲ್ಲರೂ ಕೇಂದ್ರದ ನಮ್ಮ ನಾಯಕರನ್ನು ಭೇಟಿ ಯಾಗಿದ್ದಾರೆ. ನಾಳೆ 10 ಗಂಟೆಗೆ ಮಲ್ಲೇಶ್ವರಂನ ಕಚೇರಿಯಲ್ಲಿ ಬಿಜೆಪಿ ಸೇರುತ್ತಾರೆ ಎಂದು ಬಿಜೆಪಿ ನಾಯಕ ಅರವಿಂದ್​ ನಿಂಬಾವಳಿ ಅವರು ಹೇಳಿದರು. ಇಂದು ಬಿಜೆಪಿ ಕೋರ್ ಕಮೀಟಿ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,... Read more »

ಅನರ್ಹರ ಪ್ರಕರಣ: ಸುಪ್ರೀಂ ತೀರ್ಪು ಬಂದ ನಂತರ ಸಿಎಂ ಯಡಿಯೂರಪ್ಪಗೆ ಹೊಸ ಟೆನ್ಷನ್..!

ಬೆಂಗಳೂರು: ಅನರ್ಹರ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಸಿಎಂ ಯಡಿಯೂರಪ್ಪಗೆ ಹೊಸ ಟೆನ್ಷನ್ ಶುರುವಾಗಿದೆ. ಅನರ್ಹ ಶಾಸಕರಿಗೆಲ್ಲ ಬಿಜೆಪಿ ಟಿಕೆಟ್ ನೀಡಬೇಕು. ಆದ್ರೆ ಅನರ್ಹ ಕ್ಷೇತ್ರದಲ್ಲಿ ಬಂಡಾಯದ ಏಳುವ ಬಗ್ಗೆ ಸಿಎಂಗೆ ಟೆನ್ಷನ್ ಶುರುವಾಗಿದೆ. ಹೊಸಕೋಟೆ ಕ್ಷೇತ್ರದಲ್ಲಿ ಶರತ್ ಬಚ್ಚೇಗೌಡ ಮತ್ತು... Read more »

17 ಕರ್ನಾಟಕ ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ

ನವದೆಹಲಿ/ಬೆಂಗಳೂರು: ಜೆಡಿಎಸ್​-ಕಾಂಗ್ರೆಸ್​ ಸರ್ಕಾರದ ಪತನಕ್ಕೆ ಕಾರಣರಾದ 17 ಶಾಸಕರನ್ನು ಅನರ್ಹ ವಿಧಾನಸಭಾ ಸ್ಪೀಕರ್​ ಅನರ್ಹ ಮಾಡಿರುವುದನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದೆ. ಕಾಂಗ್ರೆಸ್​ನ 14 ಮತ್ತು ಜೆಡಿಎಸ್​ನ 3 ಶಾಸಕರನ್ನು ಅನರ್ಹ ಮಾಡಲಾಗಿತ್ತು. ಪ್ರಸ್ತುತ ಕರ್ನಾಟಕ ವಿಧಾನಸಭೆಯ ಅವಧಿಯಲ್ಲಿ ಬಂಡುಕೋರರನ್ನು ಅನರ್ಹಗೊಳಿಸಲು ಮತ್ತು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು... Read more »

ಬಿಜೆಪಿ ನನ್ನ ಬೆನ್ನಿಗೆ ನಿಲ್ಲುತ್ತೆ, ನಿಲ್ಲಲೇಬೇಕು: ಎಂಟಿಬಿ ನಾಗರಾಜ್

ಬೆಂಗಳೂರು: ಇಂದು ಅನರ್ಹರ ಪ್ರಕರಣದ ಬಗ್ಗೆ ತೀರ್ಪು ಬರಲಿದ್ದು, ಎಲ್ಲರ ಚಿತ್ತ ಸುಪ್ರೀಂಕೋರ್ಟ್‌ನತ್ತ ನೆಟ್ಟಿದೆ. ಈ ಬಗ್ಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮಾತನಾಡಿದ್ದು, ಬಿಜೆಪಿ ನನ್ನ ಬೆನ್ನಿಗೆ ನಿಲ್ಲತ್ತೆ, ನಿಲ್ಲಲೇಬೇಕು ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಯಾವುದೇ ನಿರೀಕ್ಷೆಯಿಟ್ಟುಕೊಂಡಿಲ್ಲ. ನಮಗೆ ನ್ಯಾಯ... Read more »

ಉಪ ಚುನಾವಣೆಗೆ ಹುಣಸೂರಿನಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧೆ..?!

ಮೈಸೂರು: ಹುಣಸೂರು ಉಪ ಚುನಾವಣೆ ಹಿನ್ನೆಲೆ, ಹುಣಸೂರಿನಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಯೋಗಿಶ್ವರ್ ಈ ಬಗ್ಗೆ ಸಿದ್ಧತೆ ನಡೆಸಿದ್ದು, ಬಿಜೆಪಿಯಲ್ಲಿ ಟಿಕೆಟ್‌ ಪಡೆಯಲು ಪೈಪೋಟಿ ಶುರುವಾಗಿದೆ. ಹುಣಸೂರು ವಿವಿಧ ಹಳ್ಳಿಗಳಲ್ಲಿ ಯೋಗಿಶ್ವರ್ ಗೌಪ್ಯ ಸಭೆ ನಡೆಸಿದ್ದು, ಉಪಚುನಾವಣೆಯಲ್ಲಿ ರಾಜಕೀಯ ಅಸ್ತಿತ್ವ ಪಡೆಯಲು... Read more »