ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಯುವತಿ: ಆರೋಪಿ ಬಂಧನ
ಯುವತಿಯ ದಿಟ್ಟ ನಡೆಗೆ ಮಂಗಳೂರು ನಗರ ಪೊಲೀಸ್ ಕಮೀಷನ್ ಶಶಿಕುಮಾರ್ ಎನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ದಕ್ಷಿಣಕನ್ನಡ: ಯುವತಿಯೊಬ್ಬಳಿಗೆ ಬಸ್ನಲ್ಲಿ ಕಿರುಕುಳ ನೀಡಿದ್ದ ಆರೋಪಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (ಇನ್ಸ್ಟಾಗ್ರಾಮ್) ಪೋಸ್ಟ್ ಮಾಡಿದ ಹಿನ್ನೆಲೆ ಮಂಗಳೂರು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿ ಹುಸೇನ್ (41) ಎಂಬಾತ ಬಂಧಿತವಾಗಿರುವ ಆರೋಪಿಯಾಗಿದ್ದಾನೆ.
ಯುವತಿ ಜನವರಿ 14ರಂದು ಮಂಗಳೂರಿನ ದೇರಳಕಟ್ಟೆಯ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಈ ಘಟನೆ ನಡೆದಿದೆ. ಆಕೆ ಕುಳಿತಿದ್ದ ಸೀಟ್ನಲ್ಲಿಯೇ ಆರೋಪಿಯೂ ಕುಳಿತುಕೊಂಡು ದೈಹಿಕ ಕಿರುಕುಳ ನೀಡಿದ್ದಾನೆ.

ಈ ಸಂದರ್ಭದಲ್ಲಿ ಯುವತಿ ವಿರೋಧ ವ್ಯಕ್ತಪಡಿಸಿದ ಮೇಲೆ ಬಸ್ನಿಂದ ಇಳಿದಿದ್ದಾನೆ. ನಂತರ ಮತ್ತೊಂದು ಬಸ್ನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಮತ್ತೆ ಅದೇ ರೀತಿ ಕಿರುಕುಳ ನೀಡಿದ್ದಾನೆ. ಈ ಅನುಚಿತ ವರ್ತನೆಗೆ ಬೇಸತ್ತು ಆರೋಪಿ ಫೋಟೋ ತೆಗೆದು ವೈರಲ್ ಮಾಡೋದಾಗಿ ಎಚ್ಚರಿಸಿದ್ದಾರೆ. ಇಷ್ಟಾದ್ರೂ ಆತ ಪೋಟೋಗೆ ಪೋಸ್ ಕೊಟ್ಟಿದ್ದಾರೆ. ಇಷ್ಟೆಲ್ಲಾ ಘಟನೆ ಜನರ ಎದುರೇ ನಡೆದಿದೆ ಆದರೂ ಸಹ ಯಾರೊಬ್ಬರು ಪ್ರಶ್ನೆ ಮಾಡಿಲ್ಲ, ಬಸ್ ಡ್ರೈವರ್, ಕಂಡಕ್ಟರ್ ಬಳಿ ಈ ವಿಷಯವನ್ನು ಹೇಳಿದರೂ ಸಹ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ನೊಂದ ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿವರಣೆ ಸಮೇತ ಹಂಚಿಕೊಂಡಿದ್ದಾರೆ.
ಪೊಲೀಸರು ಆ ಯುವತಿ ಪ್ರಯಾಣಿಸುತ್ತಿದ್ದ ಬಸ್ ಡ್ರೈವರ್ ಮತ್ತು ಕಂಡಕ್ಟರ್ಗೂ ಸಮನ್ಸ್ ನೀಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ನಿನ್ನೆ ಮಂಗಳೂರು ಪೊಲೀಸರು ಯುವತಿ ಫೋಸ್ಟ್ ಮಾಡಿರುವ ಆಧಾರದ ಮೇಲೆ ಆರೋಪಿ ಹುಸೈನ್ನನ್ನು ಬಂಧಿಸಲಾಗಿದೆ.
ಯುವತಿಯ ದಿಟ್ಟ ನಡೆಗೆ ಮಂಗಳೂರು ನಗರ ಪೊಲೀಸ್ ಕಮೀಷನ್ ಶಶಿಕುಮಾರ್ ಎನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.