ಪಂಜಾಬ್, ಹರಿಯಾಣ ರೈತರು ಹೊರತುಪಡಿಸಿ ಉಳಿದವರು ಯಾರು ವಿರೋಧಿಸುತ್ತಿಲ್ಲ
ರಿಲಯನ್ಸ್ ಇಂತವರಿಗೆ ಮಾರುತ್ತಾರೆ ಅಂತಾ ಅನಿಸಿಕೆಯಿದೆ. ಆದರೆ, ರೈತರಿಂದ ಮಾರುಕಟ್ಟೆ ದರ ನೀಡಿ ಬೆಳೆ ಖರೀದಿಸಬೇಕಾಗುತ್ತದೆ.

ಬೆಳಗಾವಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷ ಆಗಿದೆ. ಕೃಷಿ ನೀತಿಯನ್ನ ಮೊದಲ ಬಾರಿಗೆ ಬದಲಾವಣೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಅವರು ಶನಿವಾರ ಹೇಳಿದ್ದಾರೆ.
ದೇಶಾದ್ಯಂತ ರೈತರ ಪ್ರತಿಭಟನೆ ಹಿನ್ನೆಲೆ ಬೆಳಗಾವಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಒಳ್ಳೆಯ ಹೆಜ್ಜೆಯನ್ನ ಇಟ್ಟು, ಒಳ್ಳೆಯ ಕಾನೂನು ರೂಪಿಸಿದ್ದಾರೆ. ಪಂಜಾಬ್, ಹರಿಯಾಣ ರೈತರು ಹೊರತುಪಡಿಸಿ ಉಳಿದವರು ಯಾರು ವಿರೋಧಿಸುತ್ತಿಲ್ಲ ಎಂದಿದ್ದಾರೆ.
ಇನ್ನು ಎಪಿಎಂಸಿ ಕಾಯ್ದೆ ರೈತರಿಗೆ ಅನುಕೂಲವಿದೆ. ಇದು ಹೊಸ ಪ್ರಯೋಗ ಕಾದುನೋಡಬೇಕು. ಅದರ ಪರಿಣಾಮಗಳನ್ನ ನೋಡಬೇಕು. ಎರಡ್ಮೂರು ವರ್ಷ ನೋಡೋಣ. ಈ ಕಾಯ್ದೆ ಸರಿ ಅನಿಸದಿದ್ದರೆ ತಿದ್ದುಪಡಿ ಮಾಡಲು ಬರುತ್ತೆ. ಕಾನೂನು ಬದಲಾವಣೆ ಆದ ತಕ್ಷಣವೇ ಪ್ರತಿಭಟನೆ, ವಿರೋಧ ಮಾಡುವುದು ಸರಿಯಲ್ಲ ಎಂದರು.
ಸದ್ಯ ಪ್ರತಿಭಟನೆಯನ್ನ ಪಂಜಾಬ್, ಹರಿಯಾಣ ರೈತರು. ಅವರು ಫೆಸ್ಟಿಸೈಜ್ ಬಳೆ ಬೆಳೆಯುತ್ತಾರೆ. ಗೋಧಿ, ಭತ್ತ ಜೋಳ ಬೆಳೆಯುತ್ತಾರೆ. ಫೆಸ್ಟಿಸೈಜ್ ಬೆಳೆ ತಿನ್ನಲು ಯೋಗ್ಯವಲ್ಲದ ಉತ್ಪಾದನೆ ಆಗುತ್ತದೆ. ಇದರಿಂದ ಜನರ ಮೇಲೆ ಪರಿಣಾಮ ಆಗುತ್ತದೆ. ಒಂದೆರಡು ವರ್ಷ ಕಾದು ನೋಡೋಣ. ತಪ್ಪು ಅರ್ಥ ಮಾಡಿಕೊಳ್ಳಲಾಗಿದೆ. ರಿಲಯನ್ಸ್ ಇಂತವರಿಗೆ ಮಾರುತ್ತಾರೆ ಅಂತಾ ಅನಿಸಿಕೆಯಿದೆ. ಆದರೆ, ರೈತರಿಂದ ಮಾರುಕಟ್ಟೆ ದರ ನೀಡಿ ಬೆಳೆ ಖರೀದಿಸಬೇಕಾಗುತ್ತದೆ ಎಂದು ಸಚಿವ ಉಮೇಶ್ ಕತ್ತಿ ಅವರು ಮಾತನಾಡಿದ್ದಾರೆ.