Top

ಎರಡೂವರೆ ಸಾವಿರಕ್ಕೆ ಸಣ್ಣ ಟಿವಿ ಸಿಗುತ್ತೆ ಎಷ್ಟು ಬೇಕು ಕೊಡಿಸುತ್ತೇನೆ ಬರಲಿ

ಈಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿದರು. ಗ್ಯಾಸ್ ಬೆಲೆ ಏರಿಸಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ

ಎರಡೂವರೆ ಸಾವಿರಕ್ಕೆ ಸಣ್ಣ ಟಿವಿ ಸಿಗುತ್ತೆ ಎಷ್ಟು ಬೇಕು ಕೊಡಿಸುತ್ತೇನೆ ಬರಲಿ
X

ಬೆಂಗಳೂರು: ನಾವು ಅನ್ನಭಾಗ್ಯ ಯೋಜನೆ ತಂದಿದ್ದೆವು ಅದರಿಂದ ಲಕ್ಷಾಂತರ ಬಡವರಿಗೆ ಅನುಕೂಲವಾಗಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಹೇಳಿದ್ದಾರೆ.

ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಟಿವಿ, ಪ್ರಿಡ್ಜ್ ಇರುವವರೆಲ್ಲ ಶ್ರೀಮಂತರೇ(?) ಎರಡೂವರೆ ಸಾವಿರಕ್ಕೆ ಸಣ್ಣ ಟಿವಿ ಸಿಗುತ್ತೆ. ಎಷ್ಟು ಟಿವಿ ಬೇಕು ಕೊಡಿಸುತ್ತೇನೆ ಬರಲಿ. ಟಿವಿ ಇದ್ದವರೆಲ್ಲ ಶ್ರೀಂಮತರೇ(?) ಸಾಮಾನ್ಯನ ಮನೆಯಲ್ಲೂ ಟಿವಿ ಇರುತ್ತೆ ಎಂದಿದ್ದಾರೆ.

ಇನ್ನು ಇವರು ಯೋಜನೆ ನಿಲ್ಲಿಸೋಕೆ ಈ ಹೇಳಿಕೆ ಕೊಡ್ತಾರೆ. ಉಮೇಶ್ ಕತ್ತಿ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವಾದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತೆ. ಜನರೇ ತಿರುಗಿಬೀಳ್ತಾರೆ ಎಂದು ಹೇಳಿದರು.

ಸದ್ಯ ಈಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿದರು. ಗ್ಯಾಸ್ ಬೆಲೆ ಏರಿಸಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಪಡಿತರ ರದ್ದು ಮಾಡಿ ಇನ್ನಷ್ಟು ತೊಂದರೆ ಮಾಡ್ತಾರೆ ಇದಕ್ಕೆ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಉಮೇಶ್ ಕತ್ತಿ ಹೇಳಿಕೆ ವಿರುದ್ಧ ಗರಂ ಆದರು.

Next Story

RELATED STORIES