Top

ಯಾರಿಂದಲೂ ನಾವು ಕಲಿಯುವಂತಹ ಅವಶ್ಯಕತೆ ಇಲ್ಲ - ಬಿ.ವೈ ವಿಜಯೇಂದ್ರ

ವೀರಶೈವ ಸಮುದಾಯ ಅಂದರೆ ಎಲ್ಲಾ ಸಮುದಾಯವನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಮುದಾಯ

ಯಾರಿಂದಲೂ ನಾವು ಕಲಿಯುವಂತಹ ಅವಶ್ಯಕತೆ ಇಲ್ಲ - ಬಿ.ವೈ ವಿಜಯೇಂದ್ರ
X

ಮೈಸೂರು: ಯಾವ ಕಾಶಪ್ಪನವರು(?) ಬಾರಲ್ಲೇನೋ ಕುಡ್ಕೊಂಡು ಗಲಾಟೆ ಮಾಡಿದರಲ್ಲಾ ಅವರ(?) ಅಥವಾ ಮಾಜಿ ಎಂಎಲ್ಎ ಅವರ(?) ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪರೋಕ್ಷವಾಗಿ ವಿಜಯಾನಂದ ಕಾಶಪ್ಪನವರಿಗೆ ತಿರುಗೇಟು ನೀಡಿದ್ದಾರೆ.

ಈ ವಿಷಯದ ಕುರಿತು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ಮಠ ಮಾನ್ಯ ಹಾಗೂ ಸ್ವಾಮಿಗಳಿಗೆ, ಗೌರವ ನೀಡುವ ಏಕೈಕ ವ್ಯಕ್ತಿ ಅಂದರೆ, ಅದು ಯಡಿಯೂರಪ್ಪನವರು ಎಂದಿದ್ದಾರೆ.

ಬಿಎಸ್​ವೈ ಅವರಿಗೆ ಸವಾಲು ಹಾಕುವ ಕೆಲಸ ಮಾಡಬಾರದು. ಅವರಿಗೆ ಸವಾಲು ಮಾಡುವ ಯೋಗ್ಯತೆ ಇರಬೇಕು. ಈ ರೀತಿ ಹಾದಿಬೀದಿಯಲ್ಲಿ ನಿಂತು ಏನೇನೋ ಹೇಳಿಕೆ ಕೊಡಬಾರದು. ಯಾರಿಂದಲೂ ನಾವು ಕಲಿಯುವಂತ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಸಿಎಂ ಅವರು ಎಲ್ಲ ರೀತಿಯ ಚರ್ಚೆಯನ್ನ ತಜ್ಞರ ಜೊತೆ ಮಾಡುತ್ತಾರೆ. ಯಡಿಯೂರಪ್ಪನವರು ಎಲ್ಲ ಸಮಾಜ ಒಪ್ಪುವ ನಾಯಕರು. ಹಿರಿಯ ಸ್ವಾಮೀಜಿಗಳ ಬಗ್ಗೆ ಮಾತಾಡಬಾರದು. ಅನಾವಶ್ಯಕವಾಗಿ ಏನೇನೋ ಕಾಶಪ್ಪನವರು ಮಾತಾಡಬಾರದು. ಇದರಿಂದ ತಿಳಿಯುತ್ತೆ ಕಾಶಪ್ಪನವರ ಸಂಸ್ಕೃತಿ ಏನು ಎಂಬುದು ತಿಳಿಯುತ್ತೆ ಎಂದರು.

ನಾನು ರಾಜ್ಯದ ಜನರಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ಸ್ವಾಮೀಜಿಯವರು ತಮ್ಮ ಹೇಳಿಕೆಯನ್ನ ಹೇಳಿದ್ದಾರೆ ಅದು ತಪ್ಪಲ್ಲ. ಅವರೆಲ್ಲರೂ ಹಿರಿಯರು, ಅವರ ಬಗ್ಗೆ ಅಪಾರವಾದ ಗೌರವ ಇದೆ. ಜಾತಿ ಒಡೆಯುವ ಕೆಲಸ ನಿಮಗೆ ಶೋಭೆ ತರಲ್ಲ. ವೀರಶೈವ ಸಮುದಾಯ ಅಂದರೆ ಎಲ್ಲಾ ಸಮುದಾಯವನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಮುದಾಯ. ಕೆಲವರಿಗೆ ಉಂಡ ಅನ್ನ ಕರಗೋದಿಲ್ಲ. ಅನವಶ್ಯಕವಾಗಿ ನನ್ನ ಹೆಸರು ತೆಗೆದುಕೊಳ್ಳುವ ಕೆಲಸ ಮಾಡ್ತಾರೆ. ನಾನು ಪಕ್ಷ ಸಂಘಟಿಸುವ ನನ್ನ ಚೌಕಟ್ಟಿನಲ್ಲಿ ಮಾಡುತ್ತೇನೆ. ಯಡಿಯೂರಪ್ಪನವರಿಗೆ ಸವಾಲು ಹೊಸದಲ್ಲ, ಇದನ್ನು ಯಶಸ್ವಿಯಾಗಿ ಹೆದರಿಸುತ್ತಾರೆ. ಸ್ವಾಮೀಜಿ ಹೋರಾಟ ಮಾಡುವ ಹಕ್ಕಿದೆ. ರಾಜಕೀಯ ಅಸ್ತಿತ್ವ ಕಳೆದುಕೊಂಡವರು ಇದರಲ್ಲಿ ಸೇರಿಕೊಂಡಿದ್ದಾರೆ. ಅವರು ಇದಕ್ಕೆ ಜಾತಿ ಬಣ್ಣ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಮೈಸೂರಿನಲ್ಲಿ ಬಿ.ವೈ ವಿಜಯೇಂದ್ರ ಅವರು ಮಾತನಾಡಿದ್ದಾರೆ.

Next Story

RELATED STORIES