Top

ಪರೀಕ್ಷೆ ಇಲ್ಲದೆ ಪಾಸ್ ಮಾಡೋದಕ್ಕೆ ಖಾಸಗಿ ಶಾಲೆಗಳು ಹಿಂದೇಟು

ಶಿಕ್ಷಣ ಸಚಿವರ ನಿರ್ಧಾರಕ್ಕೆ ಸಿಡಿದೆದ್ದ ಖಾಸಗಿ ಶಾಲೆಗಳ ಒಕ್ಕೂಟಗಳು

ಪರೀಕ್ಷೆ ಇಲ್ಲದೆ ಪಾಸ್ ಮಾಡೋದಕ್ಕೆ ಖಾಸಗಿ ಶಾಲೆಗಳು ಹಿಂದೇಟು
X

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆರ್ಭಟ ಮುಂದುವರೆದಿದೆ. ಬೆಂಗಳೂರಿನ ಗಲ್ಲಿಗಲ್ಲಿಗೂ ವಕ್ಕರಿಸುತ್ತದೆ. ಹೀಗಾಗಿ ಸರ್ಕಾರ, ಶಿಕ್ಷಣ ಇಲಾಖೆ ನಗರದಲ್ಲಿ 6 ರಿಂದ 9 ನೇ ತರಗತಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ. ಆದರೆ, ಶಿಕ್ಷಣ ಸಚಿವರ ಈ ಆದೇಶಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗ್ತಿವೆ. ಪ್ರತಿನಿತ್ಯ ನಾಲ್ಕು ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗ್ತಿದಾರೆ. ಇನ್ನೂ ಬೆಂಗಳೂರು ಒಂದರಲ್ಲಿಯೇ ಮೂರು ಸಾವಿರದ ಆಸುಪಾಸಿನಲ್ಲಿ ಸೋಂಕು ಪತ್ತೆಯಾಗ್ತಿದೆ ಜೊತೆಗೆ ಬೆಂಗಳೂರಿನ ಅನೇಕ ಶಾಲೆಗಳಿಗೂ ಸೋಂಕು ಹರಡಿದೆ. ಹೀಗಾಗಿ 6 ರಿಂದ 9 ನೇ ತರಗತಿವರೆಗಿನ ಶಾಲೆ ಬಂದ್ ಮಾಡಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಬೋರ್ಡ್ ಎಕ್ಸಾಂ ಇರೋ ಹಿನ್ನಲೆ ೧೦ ನೇ ತರಗತಿ ಶಾಲೆ ನಡೆಯಲಿದ್ದು, ಹಾಜರಾತಿ ಕಡ್ಡಾಯವಿಲ್ಲ ಎಂದಿದ್ದಾರೆ. ಇನ್ನೂ ಪರೀಕ್ಷೆ ಕುರಿತು ಮಕ್ಕಳಿಗೆ ಯಾವ ರೀತಿ ನಡೆಸಬೇಕು ಅನ್ನೋದನ್ನ ಮೂರು ನಾಲ್ಕು ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಇನ್ನೂ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಏಕಾಏಕಿ ನಿರ್ಧಾರಕ್ಕೆ ಖಾಸಗಿ ಶಾಲಾ ಒಕ್ಕೂಟಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಶಾಲೆಯಲ್ಲಿ ಮಕ್ಕಳು ಅತ್ಯಂತ ಸುರಕ್ಷಿತರಾಗಿದ್ದಾರೆ. ಶಾಲೆಗಳಿಂದ ಮಕ್ಕಳಿಗೆ ಎಲ್ಲೂ ಸೋಂಕು ಹರಡಿಲ್ಲ. ಶಾಲೆಗಳಲ್ಲಿ ಎಸ್​ಓಪಿ ಫಾಲೋ ಮಾಡಲಾಗ್ತಿದೆ. ಕೊರೊನಾದಿಂದ ಕಳೆದ ವರ್ಷವೂ ಪರೀಕ್ಷೆ ನಡೆದಿಲ್ಲ, ಈ ವರ್ಷವೂ ಇಲ್ಲಾ ಅಂದ್ರೆ ಹೇಗೆ(?) ಕೆಲವು ಶಾಲೆಗಳು ಪರೀಕ್ಷೆ ನಡೆಸಲು ತಯಾರಿ ಮಾಡಿಕೊಂಡಿದ್ರು. ಈ ಸಂದರ್ಭದಲ್ಲಿ ಸ್ಕೂಲ್ ಬಂದ್ ಮಾಡೋದು ಎಷ್ಟರ ಮಟ್ಟಿಗೆ ಸರಿ. ಕನಿಷ್ಠ ಪರೀಕ್ಷೆ ನಡೆಸಲು ಅವಕಾಶ ಮಾಡಿ ಅಂತ ರುಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹಾಗೂ ಕಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಪರೀಕ್ಷೆ ವಿಚಾರವಾಗಿ ಶಿಕ್ಷಣ ಸಚಿವರು ಮಾತನಾಡಿದ್ದಾರೆ. ಕಡ್ಡಾಯ ಶಿಕ್ಷಣ ಕಾಯಿದೆಯ ಅವಕಾಶಗಳಡಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. 6-9ನೇ ತರಗತಿಗಳಿಗೆ ಸಂಬಂಧಿಸಿದಂತೆ ಶಾಲೆಗಳು ನಡೆಸಬೇಕಾದ ಮೌಲ್ಯಾಂಕನ ಪರೀಕ್ಷೆಗಳ ಕುರಿತಂತೆ ಮುಂದಿನ ದಿನಗಳಲ್ಲಿ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದೆಂದು ಸ್ಪಷ್ಟ ಪಡಿಸಿದ್ದಾರೆ.

Next Story

RELATED STORIES