Top

ಅಬಕಾರಿ ಇಲಾಖೆಯಲ್ಲಿ ಒಂದು ವರ್ಷದೊಳಗೆ ಮಹತ್ತರ ಬದಲಾವಣೆ ತರುತ್ತೇನೆ - ಸಚಿವ ಕೆ.ಗೋಪಾಲಯ್ಯ

ಖಾತೆ ಬದಲಾವಣೆಯಿಂದ ವ್ಯತ್ಯಾಸವೇನಿಲ್ಲ, ಯಾವುದೇ ಸಮಸ್ಯೆ ಬಂದರು ಆಯಾ ಸಚಿವರ ಗಮನಕ್ಕೆ ತರುತ್ತೇನೆ.

ಅಬಕಾರಿ ಇಲಾಖೆಯಲ್ಲಿ ಒಂದು ವರ್ಷದೊಳಗೆ ಮಹತ್ತರ ಬದಲಾವಣೆ ತರುತ್ತೇನೆ - ಸಚಿವ ಕೆ.ಗೋಪಾಲಯ್ಯ
X

ಹಾಸನ: ಯಾವ ಖಾತೆ ಕೊಟ್ಟರು ಅದಕ್ಕೆ ಜೀವ ತುಂಬುವ ಶಕ್ತಿ ನನ್ನಲ್ಲಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಮಂಗಳವಾರ ಹೇಳಿದರು.

ಖಾತೆ ಅದಲು-ಬದಲು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೆಲವು ದಿನಗಳಲ್ಲಿ ಏನು ಬದಲಾವಣೆ ತರುತ್ತೇನೆ ನೋಡಿ, ಯುವ ಪೀಳಿಗೆ ಹಫೀಮು, ಗಾಂಜಾ, ಡ್ರಗ್ಸ್​ನಿಂದ ಹಾಳಾಗುತ್ತಿದ್ದಾರೆ. ಪೊಲೀಸರಿಂದ ತನಿಖೆ ಮಾಡಿಸಿ ಅವರನ್ನು ಬಲಿ ಹಾಕುವ ಕೆಲಸ ಮಾಡುತ್ತೇವೆ ಎಂದರು.

ಇನ್ನು ಬೆಂಗಳೂರಿನಲ್ಲಿ ಎಲ್ಲಾ ಅಧಿಕಾರಿಗಳ ಸಭೆ ಕರೆದಿದ್ದೇನೆ. ಏನು ಬದಲಾವಣೆ ತರಲು ಯೋಚನೆ ಮಾಡಿದ್ದೇನೆ. ನಾಳೆ ಸಭೆ ನಂತರ ಘೋಷಣೆ ಮಾಡುತ್ತೇನೆ. ಸರ್ಕಾರಕ್ಕೆ ಆದಾಯ ಹೇಗೆ ತರುವುದು ಜೊತೆಗೆ ಉತ್ತಮ ಮದ್ಯ ದೊರೆಯುವಂತೆ ಮಾಡುತ್ತೇನೆ ಎಂದಿದ್ದಾರೆ.

ಖಾತೆ ಬದಲಾವಣೆಯಿಂದ ವ್ಯತ್ಯಾಸವೇನಿಲ್ಲ, ಯಾವುದೇ ಸಮಸ್ಯೆ ಬಂದರು ಆಯಾ ಸಚಿವರ ಗಮನಕ್ಕೆ ತರುತ್ತೇನೆ. ಆಹಾರ ಖಾತೆಯನ್ನು ಕೋವಿಡ್ ಸಂದರ್ಭದಲ್ಲಿ ವಹಿಸಿದರು. ನಾನು ಹೆದರಲಿಲ್ಲ, ಎಲ್ಲಿ ಸಮಸ್ಯೆ ಇದೆ ಫೋನ್ ಬಂದ ಕೂಡಲೇ ಹೋಗಿ ಸ್ಪಂದಿಸಿದ್ದೇನೆ ಎಂದು ಹೇಳಿದರು.

ಸದ್ಯ ಖಾತೆ ಬದಲಾವಣೆ ಆದ ಮೇಲು ರೇಷನ್ ಕಾರ್ಡ್ ಸಮಸ್ಯೆ ಬಗ್ಗೆ ಇಪ್ಪತ್ತೈದ್ದಕ್ಕು ಹೆಚ್ಚು ಜನ ಫೋನ್ ಮಾಡಿದರು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನನಗೆ ತೃಪ್ತಿ ಇದೆ. ಯಾವುದೇ ಖಾತೆ ಕೊಟ್ಟರು ನಿಭಾಯಿಸುವ ಶಕ್ತಿಯಿದೆ. ಕೆಲವರಿಗೆ ಆಸೆ ಇರಬಹುದು. ಎಲ್ಲರಿಗೂ ಒಂದೇ ಖಾತೆ ಕೊಡಲು ಆಗುತ್ತಾ(?) ಕೊಟ್ಟ ಖಾತೆಗೆ ಜೀವ ತುಂಬಬೇಕು ಎಂದು ನುಡಿದರು.

ಇಡಿ ರಾಜ್ಯದಲ್ಲಿ ಇದು ಎರಡನೇ ದೊಡ್ಡ ಖಾತೆ. ಅತೀ ಹೆಚ್ಚು ಆದಾಯ ತರುವ ದೊಡ್ಡ ಖಾತೆ. ಆಹಾರ ಇಲಾಖೆಗೆ ಕೊಟ್ಟ ಮಹತ್ವವನ್ನು ಈ ಇಲಾಖೆಗೂ ಕೊಡುತ್ತೇನೆ. ಅಬಕಾರಿ ಇಲಾಖೆಯಲ್ಲಿ ಒಂದು ವರ್ಷದಲ್ಲಿ ಮಹತ್ತರ ಬದಲಾವಣೆ ತರುತ್ತೇನೆ. ಹೊಸ ರೂಪ ಕೊಡುವ ಕೆಲಸ ಮಾಡುತ್ತೇನೆ. ಕಾನೂನು ಮೀರಿ ಲೈಸನ್ಸ್ ಕೊಟ್ಟಿದ್ದರೆ ಅದನ್ನು ರದ್ದು ಮಾಡುತ್ತೇನೆ. ಅಧಿವೇಶನ ಕಳೆದ ಮೇಲೆ ಅಧಿಕಾರಿಗಳೊಂದಿಗೆ ಸಭೆ ಮಾಡುತ್ತೇನೆ ಎಂದಿದ್ದಾರೆ.

ಕೊರೊನಾ ಬಂದ ನಂತರ ಎಲ್ಲಾ ಕಡೆ ಕೆಲಸ ನಿಧಾನವಾಗಿದೆ. ಈಗ ಎಲ್ಲಾ ಸರಿ ಹೋಗುತ್ತಾ ಬಂದಿದೆ. ಮುಖ್ಯಮಂತ್ರಿಗಳು ದೇವೇಗೌಡರು ಮಾತುಕತೆ ನಂತರ ಎಲ್ಲಾ ಸರಿ ಹೋಗುತ್ತದೆ. ಮುಖ್ಯಮಂತ್ರಿ ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಸಚಿವ ಕೆ.ಗೋಪಾಲಯ್ಯ ಅವರು ಮಾತನಾಡಿದ್ದಾರೆ.

Next Story

RELATED STORIES