Top

ಡೆತ್​ ನೋಟ್​ನಲ್ಲಿ ನನಗೆ ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದಿದ್ದ- ಸಿದ್ದರಾಮಯ್ಯ

ಕೊಡಿದೊಡ್ಡಿ ರಾಮಕೃಷ್ಣನ ಸಿದ್ದರಾಮಯ್ಯ ಹಾಗೂ ರಾಕಿಂಗ್ ಸ್ಟಾರ್​ ಯಶ್ ಅವರ ಅಭಿಮಾನಿಯಾಗಿದ್ದರು.

ಡೆತ್​ ನೋಟ್​ನಲ್ಲಿ ನನಗೆ ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದಿದ್ದ- ಸಿದ್ದರಾಮಯ್ಯ
X

ಮಂಡ್ಯ: ಅವನ ಡೆತ್​ ನೋಟ್​ನಲ್ಲಿ ನನಗೆ ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದಿದ್ದಾನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.

ಮಂಡ್ಯದ ಕೋಡಿದೊಡ್ಡಿ ರಾಮಕೃಷ್ಣನ ಆತ್ಮಹತ್ಯೆ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿ ಆತನಿಗೆ ಅಂತಿಮ ನಮನ ಸಲ್ಲಿಸಿದರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನನಗೆ ಅಷ್ಟೊಂದು ಪರಿಚಯವಿಲ್ಲ, ಆದರೂ ನನ್ನ ಅಭಿಮಾನಿಯಾಗಿದ್ದಾನೆ. ಎಲ್ಲಕ್ಕಿಂತ ಮನುಷ್ಯತ್ವ ಮುಖ್ಯ. ನನಗೆ ಗೊತ್ತಿಲ್ಲದೆ ದೊಡ್ಡ ಅಭಿಮಾನಿಯಾಗಿದ್ದಾನೆ. ಯಾರೇ ಆಗಲಿ ಅಂತ್ಯಕ್ರಿಯೆಗೆ ಬಂದಿದ್ದೇನೆ ಎಂದರು.

ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ. ಅವರ ಮನೆಯವರಿಗೆ ಬಹಳ ನಷ್ಟವಾಗಿದೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ಕೊಡಲಿ. ಚಿಕ್ಕವಯಸ್ಸಿನಲ್ಲೇ ಆತ್ಮಹತ್ಯೆ ಸರಿಯಲ್ಲ. ಬಹಳ ದೀರ್ಘಕಾಲ ಬಾಳಿ ಬದುಕಬೇಕಾದ ವ್ಯಕ್ತಿ. ಆತ್ಮಹತ್ಯೆ ಯಾವುದೇ ಸಮಸ್ಯೆಗಳಿಗೆ ಪರಿಹಾರವಲ್ಲ, ಎಷ್ಟೇ ಸಮಸ್ಯೆ ಇದ್ರು ಎದುರಿಸಬೇಕು. ಯಾರು ಕೂಡ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯುವಕರಿಗೆ ಸಲಹೆ ನೀಡಿದ್ದಾರೆ.

ತನ್ನ ಅಭಿಮಾನಿಗೆ ಟ್ವಿಟ್​​ ಮೂಲಕ ಅಂತಿಮ ನಮನ ಸಲ್ಲಿಸಿದ ನಟ ಯಶ್​

'ಅಭಿಮಾನಿಗಳ ಅಭಿಮಾನವೇ ನಮ್ಮ ಬದುಕು.. ಜೀವನ.. ಹೆಮ್ಮೆ.. ಆದರೆ, ಮಂಡ್ಯದ ರಾಮಕೃಷ್ಣನ ಅಭಿಮಾನಕ್ಕೆ ಹೆಮ್ಮೆಪಡಲು ಸಾಧ್ಯವೇ...(?) ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ.. ಕೋಡಿದೊಡ್ಡಿ ರಾಮಕೃಷ್ಣನ ಆತ್ಮಕ್ಕೆ ಚಿರಶಾಂತಿ ಸಿಗಲಿ...ಓಂ ಶಾಂತಿ' ಎಂದು ಟ್ವಿಟ್​ ಮೂಲಕ ಅಂತಿಮ ನಮನಸಲ್ಲಿಸಿದ್ದಾರೆ.

ಕೊಡಿದೊಡ್ಡಿ ರಾಮಕೃಷ್ಣನ ಸಿದ್ದರಾಮಯ್ಯ ಹಾಗೂ ರಾಕಿಂಗ್ ಸ್ಟಾರ್​ ಯಶ್ ಅವರ ಅಭಿಮಾನಿಯಾಗಿದ್ದರು. ನನ್ನ ಸಾವಿನ ಬಳಿಕ ಈ ಇಬ್ಬರು ನನ್ನ ನೋಡಲು ಬರೆಬೇಕು ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

Next Story

RELATED STORIES