Top

ಮಧ್ಯದಲ್ಲಿ ಯಾರೋ ಬಂದು ಕಡ್ಡಿ ಅಳ್ಳಾಡಿಸೋದು ಬೇಡ - ಸಚಿವ ಲಕ್ಷ್ಮಣ ಸವದಿ

ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಡಿಸೆಂಬರ್, ಜನವರಿ ಎರಡೂ ತಿಂಗಳ ವೇತನ ಕೊಡುತ್ತೇವೆ

ಮಧ್ಯದಲ್ಲಿ ಯಾರೋ ಬಂದು ಕಡ್ಡಿ ಅಳ್ಳಾಡಿಸೋದು ಬೇಡ - ಸಚಿವ ಲಕ್ಷ್ಮಣ ಸವದಿ
X

ಬೆಂಗಳೂರು: ಸಾರಿಗೆ ನೌಕರರು ಹಿಂದೆ ಪ್ರತಿಭಟಿಸಿದರು. ಹತ್ತು ಬೇಡಿಕೆ ಪೈಕಿ ಒಂಭತ್ತಕ್ಕೆ ಸಹಮತ ಕೊಟ್ಡಿದ್ವಿ. ಮೂರು ತೀರ್ಮಾನ ಘೋಷಿಸಿದ್ವಿ. ತರಬೇತಿ ಅವಧಿ ಎರಡರಿಂದ ಒಂದು ವರ್ಷಕ್ಕೆ ಇಳಿಸಲು ಒಪ್ಪಿದ್ವಿ. ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ಒಪ್ಪಿದ್ವಿ. ಬಾಟಾ ಮುಂದುವರೆಸಲು ಒಪ್ಪಿದ್ವಿ. ಇನ್ನೂ ಹದಿನೈದು ದಿನಗಳಲ್ಲಿ ಈ ಮೂರೂ ಬೇಡಿಕೆ ಈಡೇರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ

ಈ ಸಂಬಂಧ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸಾರಿಗೆ ನೌಕರರನ್ನು ಯಾರ್ಯಾರೋ ಮಧ್ಯದಲ್ಲಿ ಹಸ್ತಕ್ಷೇಪ ಮಾಡೋದು ಬೇಡ. ಸಾರಿಗೆ ನೌಕರರನ್ನು ಅಮಾನತು ಮಾಡಿಲ್ಲ, ಯಾರು ಅಪರಾಧ ಎಸಗಿದ್ರೋ ಅವರನ್ನು ಅಮಾನತು ಮಾಡಿದ್ವಿ ಎಂದಿದ್ದಾರೆ.

ಇನ್ನು ಸಾರಿಗೆ ನೌಕರರ ವೇತನ ಕೊಡುತ್ತೇವೆ. ಅರ್ಧ ವೇತನ ಈಗಾಗಲೇ ಕೊಟ್ಟಿದ್ದೇವೆ. ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಡಿಸೆಂಬರ್, ಜನವರಿ ಎರಡೂ ತಿಂಗಳ ವೇತನ ಕೊಡುತ್ತೇವೆ ಎಂದಿದ್ದಾರೆ.

ನೌಕರ ವರ್ಗಕ್ಕೆ ಸರ್ಕಾರದ ಮೇಲೆ ಹಾಗೂ ಸರ್ಕಾರಕ್ಕೆ ನೌಕರ ವರ್ಗದ ಮೇಲೆ ಭರವಸೆ ಇದೆ. ಒಂದು ಕುಟುಂಬದಂತೆ ನಾವಿದ್ದೇವೆ. ಮಧ್ಯದಲ್ಲಿ ಯಾರೋ ಬಂದು ಕಡ್ಡಿ ಅಳ್ಳಾಡಿಸೋದು ಬೇಡ. ನೌಕರರ ಸಂಬಳ ಕಡಿತ ಮಾಡಿಲ್ಲ, ಡಿಸೆಂಬರ್ ತಿಂಗಳ ಅರ್ಧ ಸಂಬಳ ಕೊಟ್ಟಿದ್ದೇವೆ. ಉಳಿದ 15 ದಿನದ ಸಂಬಳ 2 ರಿಂದ 3 ದಿನಗಳಲ್ಲಿ ನೀಡಲಿದ್ದೇವೆ ಎಂದು ಸಚಿವ ಸವದಿ ಅವರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.

Next Story

RELATED STORIES