Top

ರಾಜ್ಯದಲ್ಲಿ ಏಪ್ರಿಲ್​ 1ರಿಂದ ಜೋಳ, ರಾಗಿ ವಿತರಣೆ - ಸಚಿವ ಉಮೇಶ್ ಕತ್ತಿ

ಜೂನ್ ತಿಂಗಳಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ

ರಾಜ್ಯದಲ್ಲಿ ಏಪ್ರಿಲ್​ 1ರಿಂದ ಜೋಳ, ರಾಗಿ ವಿತರಣೆ - ಸಚಿವ ಉಮೇಶ್ ಕತ್ತಿ
X

ಬೆಳಗಾವಿ: ಬಸನಗೌಡ ಪಾಟೀಲ್ ಯತ್ನಾಳ್​ ಅಷ್ಟೇ ಅಲ್ಲ ರಮೇಶ್​ ಜಾರಕಿಹೊಳಿ ಸಹ ನಮ್ಮ ಸ್ನೇಹಿತ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಜೊತೆ ಮಾತನಾಡಿದ ಅವರು, ಒಂದೇ ಪಕ್ಷದಲ್ಲಿ ಇದ್ದು ಎಲ್ಲರೂ ಸ್ನೇಹಿತರೇ. ಲವ್ ಲೇಟರ್ ಬರ್ತಾನೇ ಇರ್ತಾವೆ. ಪಕ್ಷ ವಿರೋಧಿ ಚಟುವಟಿಕೆಯನ್ನು ಯತ್ನಾಳ್ ಮಾಡುತ್ತಿಲ್ಲ ಎಂದಿದ್ದಾರೆ.

ಏಪ್ರಿಲ್ 1ರಿಂದ ಉತ್ತರ ಕರ್ನಾಟಕದಲ್ಲಿ ಜೋಳ ವಿತರಣೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ ವಿತರಣೆಗೆ ಸಿದ್ದತೆ ಮಾಡಲಾಗುತ್ತಿದೆ. ಮೂರು ಕೆ.ಜಿ ಅಕ್ಕಿ ಜತೆಗೆ ಎರಡು ಕೆಜಿ ರಾಗಿ, ಜೋಳ ವಿತರಣೆ. ರಾಜ್ಯದಲ್ಲಿ ಬೆಳೆಯುವ ಜೋಳ, ಭತ್ತ ಹಾಗೂ ರಾಗಿ ಖರೀದಿ ಮಾಡಲಾಗುತ್ತಿದ್ದು ಇದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಅನ್ಯಾಯ ವಾದ ಸಂದರ್ಭದಲ್ಲಿ ಪ್ರತಿಭಟನೆ ಮಾಡುತ್ತೇನೆ. ನೀವು ಹೇಳುತ್ತಿರಿ ಅಂತ ನಾವು ಪ್ರತಿಭಟನೆ ಮಾಡಲ್ಲ. ಸಚಿವನಾಗಿ ಏನ್ ಕೆಲಸ ಮಾಡಬೇಕು ಮಾಡುತ್ತೇನೆ. ಈ ಸಲದ ಬಜೆಟ್ ಅಧಿವೇಶ ಬೆಂಗಳೂರಿನಲ್ಲಿ ನಡೆಯಲಿದೆ. ಜೂನ್ ತಿಂಗಳಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ ಎಂದು ಸಚಿವ ಉಮೇಶ್ ಕತ್ತಿ ಅವರು ಮಾತನಾಡಿದ್ದಾರೆ.

Next Story

RELATED STORIES