Top

ಸ್ಪೋರ್ಟ್ಸ್ ವೀಸಾದಲ್ಲಿ ಬಂದು ಡ್ರಗ್ ಪೆಡ್ಲರ್ ಆದ ಫುಟ್ಬಾಲ್ ಆಟಗಾರ

ಫುಡ್ ಸಪ್ಲೈನಂತೆ ನಡೀತಿತ್ತು ಡ್ರಗ್ ಸಪ್ಲೈ. ಮಾಲ್ಡೀವ್ಸ್ ನಲ್ಲಿ ಡ್ರಗ್ ಪೆಡ್ಲರ್ ನ ಆಲ್ಬಂ ಸಾಂಗ್ ಫುಲ್ ಫೇಮಸ್

ಸ್ಪೋರ್ಟ್ಸ್ ವೀಸಾದಲ್ಲಿ ಬಂದು ಡ್ರಗ್ ಪೆಡ್ಲರ್ ಆದ ಫುಟ್ಬಾಲ್ ಆಟಗಾರ
X

ಬೆಂಗಳೂರು: ಒಂದು ಕಡೆ ನಗರ ಪೊಲೀಸರು ಡ್ರಗ್ ವಿರುದ್ಧ ಸಮರ ಸಾರ್ತಿದ್ರೆ, ಮತ್ತೊಂದೆಡೆ ನಮಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಡ್ರಗ್ ಪಾರ್ಟಿಗಳು ಮುಂದುವರೆದಿದ್ದು, ಅಂತಹ ಮತ್ತೊಂದಷ್ಟು ನಟೋರಿಯಸ್ ಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದೆ.

ಔರಿಕ್ ಬೌಂಟಿಕ್ ಎಂಬ ಪ್ರತಿಷ್ಟಿತ ಹೊಟೇಲ್ ಅದು. ವಿಲಾಸಿಗಳಿಗೆ ಹೇಳಿ ಮಾಡಿಸಿದ ಈ ಹೋಟೆಲ್​ ಇದು. ಈ ಹೋಟೆಲ್​ಗೆ ರೇಡು ಮಾಡಿದ್ದ ಜೆಪಿ ನಗರ ಪೊಲೀಸರು ಐವರನ್ನ ಕೆಡವಿಕೊಂಡು ಬಾಯಿ ಬಿಡಿಸಿದಾಗ ಡ್ರಗ್ ಕೇಸುಗಳು ಬಯಲಿಗೆ ಬಂದಿದೆ. ಇದರಲ್ಲಿ ರವಿ ಎಂಬಾತ ಬಿಡಿಎ ಬ್ರೋಕರ್ ಆಗಿದ್ರೆ ಮತ್ತೊಬ್ಬ ಶೋಕಿಲಾಲ್ ಮುಜಾಮಿಲ್ ಕೂಡ ಸಿಕ್ಕಿಬಿದ್ದಿದ್ದಾನೆ.

ಈ ಆಲ್ಬಂನಲ್ಲಿ ಜೀನೇಕಿ ವಝಾ ಎಂದು ಹಾಡುತ್ತಿರುವವನೆ ಜೆಪಿ ನಗರದಲ್ಲಿ ಸಿಕ್ಕಿಬಿದ್ದ ಡ್ರಗ್ ಪೆಡ್ಲರ್ ಮುಜಾಹಿಲ್. ನಾಲ್ಕು ವರ್ಷದಿಂದ ಶ್ರೀಲಂಕಾದ ಟೂರಿಸ್ಟ್ ಏಜೆನ್ಸಿಯಲ್ಲಿ ವರ್ಕ್ ಮಾಡುತ್ತಿದ್ದ ಈತನಿಗೆ ಶ್ರೀಲಂಕಾದ ಕೆಸಿನೊಗಳ ಲಿಂಕಿದೆ. ಅಲ್ಲಿಂದಲೇ ಡ್ರಗ್ ಜಾಲದ ಬಗ್ಗೆ ಆಸಕ್ತಿ ಬೆಳೆಸಿಕೊಂಡವನು ಕೋವಿಡ್ ಬಳಿಕ ನೇರವಾಗಿ ಬೆಂಗಳೂರಿಗೆ ಬಂದಿದ್ದ. ಆಗ ಪರಿಚಯವಾದನೇ ಬಿಡಿಎ ರವಿ, ಬ್ರೋಕರ್ ಆಗಿರುವ ರವಿ ಆಗಾಗ ಕೊಲೊಂಬೋಗೂ ಹೋಗಿ ಡ್ರಗ್ ಪಾರ್ಟಿ ಮಾಡುತ್ತಿದ್ದ ಎನ್ನಲಾಗಿದೆ.

ಇನ್ನು ಮತ್ತೊಬ್ಬ ಆರೋಪಿ ಫುಟ್​ಬಾಲ್ ಆಟಗಾರ ಡೊಸ್ಸೋ ಖಲೀಫಾ 2015ರಲ್ಲಿ ಸ್ಪೋರ್ಟ್ಸ್ ವೀಸಾದಲ್ಲಿ ಬಂದವನು ವೀಸಾ ಅವಧಿ ಮುಗಿದರೂ ದೇಶದಲ್ಲಿಯೇ ಠಿಕಾಣಿ ಹೂಡಿದ್ದ. 2018ರಲ್ಲಿ ನಗರಕ್ಕೆ ಬಂದವನು ಡ್ರಗ್ ಪೆಡ್ಲಿಂಗ್​ನಲ್ಲಿ ಸಕ್ರೀಯನಾಗಿದ್ದ. ಇವರೆಲ್ಲರೂ ಡ್ರಗ್ ದಂಧೆಯಲ್ಲೇ ಒಬ್ಬರಿಗೊಬ್ಬರು ಪರಿಚಯವಾದವರು ಗಣ್ಯರಿಗೆ ಡ್ರಗ್ ಸಪ್ಲೈ ಮಾಡುವ ಮುಖಾಂತರ ನಂಟು ಇಟ್ಟುಕೊಂಡಿದ್ದರು.

ಇನ್ನು ಶುಕ್ರವಾರದಂದು ಗೌಪ್ಯವಾಗಿ ಸ್ಟಾರ್ ಹೋಟೆಲ್​ಗಳಲ್ಲಿ ನಡೆಯುವ ಈ ಪಾರ್ಟಿಗಳ ಮೇಲೆ ಯಾರ ಕಣ್ಣಿಗೂ ಬೀಳುತ್ತಿರಲಿಲ್ಲ ಇನ್ನು ಫುಡ್ ಸಪ್ಲೈ ಮಾಡುವ ರೀತಿಯಲ್ಲಿ ಡ್ರಗ್ ಸಪ್ಲೈ ಮಾಡೋ ಈ ಖದೀಮರ ಜಾಲವನ್ನ ಭೇದಿಸಿದ ಪೊಲೀಸರು ಆರೋಪಿಗಳಿಂದ ಮತ್ತಷ್ಟು ಸತ್ಯವನ್ನ ಹೊರಗೆಳೆಯುತ್ತಿದ್ದಾರೆ.

ಹೀಗೆ ಜೆಪಿ ನಗರ, ಕುಮಾರಸ್ವಾಮಿ ಲೇಔಟ್​ಗಳಲ್ಲಿ ವಾಸವಾಗಿದ್ದ ಒಟ್ಟು ಐವರು ಆರೋಪಿಗಳನ್ನ ಬಂಧಿಸಲಾಗಿದೆ. ಈ ಪ್ರಕರಣ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Next Story

RELATED STORIES