Top

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನನ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನನ
X

ನವದೆಹಲಿ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಸೋಮವಾರ (ಜನವರಿ 11) ಹೆರಿಗೆ ನೋವು ಕಾಣಿಸಿಕೊಂಡಿದ ಹಿನ್ನೆಲೆ ಅನುಷ್ಕಾ ಆಸ್ಪತ್ರಗೆ ದಾಖಲಾಗಿದ್ದರು. ತಾನು ಹೆಣ್ಣು ಮಗುವಿಗೆ ತಂದೆಯಾಗುತ್ತಿರುವ ಸಂತಸವನ್ನು ಕೊಹ್ಲಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

'ನಮಗೆ ಹೆಣ್ಣುಮಗುವಾಗಿ ಎಂಬ ಸಂಗತಿ ತಿಳಿಸಲು ನಾವಿಬ್ಬರೂ ರೋಮಾಂಚಿತರಾಗಿದ್ದೇವೆ. ನಿಮ್ಮೆಲ್ಲಾ ಪ್ರೀತಿ, ಹಾರೈಕೆ, ಪ್ರಾರ್ಥನೆಗೆ ನಮ್ಮ ಧನ್ಯವಾದಗಳು. ಅನುಷ್ಕ ಶರ್ಮಾ ಮತ್ತು ಮಗು ಆರೋಗ್ಯವಾಗಿದ್ದಾರೆ. ದೇವರ ಆಶೀರ್ವಾದದೊಂದಿಗೆ ನಾವು ಬದುಕಿನ ಈ ಹೊಸ ಅಧ್ಯಾಯ ಆರಂಭಿಸಲು ಬಯಸಿದ್ದೇವೆ,' ಎಂದು ಕೊಹ್ಲಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಸೋಲಿನಿಂದ ತಪ್ಪಿಸಿಕೊಂಡು ಖುಷಿಯ ಬೆನ್ನಲ್ಲೇ ಮತ್ತೊಂದು ಕೊಹ್ಲಿ ಮತ್ತೊಂದು ಖುಷಿಯ ಸಂಗತಿ ಹೇಳಿದ್ದಾರೆ. 2017ರ ಡಿಸೆಂಬರ್‌ನಂದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತ್ತು. ಗರ್ಭಿಣಿಯಾಗಿದ್ದ ಅನುಷ್ಕಾ ಶರ್ಮಾ ಜನವರಿಯಲ್ಲಿ ಮಗುವಿಗೆ ಜನ್ಮ ನೀಡಲಿರುವುದಾಗಿ ಅವರ ವೈದ್ಯರು ತಿಳಿಸಿದ್ದರು.

ಮೊದಲ ಮಗುವಿಗೆ ಅಪ್ಪನಾಗುವ ಖುಷಿಯಲ್ಲಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್ ಆಗಿದ್ದರು. ಆಸ್ಟ್ರೇಲಿಯಾ-ಭಾರತ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾಗವಹಿಸಿದ ಬಳಿಕ ಕೊಹ್ಲಿ ಪಿತೃತ್ವ ರಜೆ ಪಡೆದುಕೊಂಡಿದ್ದರು.

Next Story

RELATED STORIES