Top

ಈ ಬಾರಿಯ ಆರ್​ಸಿಬಿ ತಂಡದ ಬಗ್ಗೆ ಸ್ಟಾರ್​ ಬ್ಯಾಟ್ಸ್​ಮನ್​ ಎಬಿ ಡಿವಿಲಿಯರ್ಸ್ ಮಾತು

ಆರ್​ಸಿಬಿ ತಂಡ ನಾಯಕ ವಿರಾಟ್​ ಕೊಹ್ಲಿ ಬಗ್ಗೆ ಎಬಿ ಡಿವಿಲಿಯರ್ಸ್ ಪ್ರಶಂಸೆ

ಈ ಬಾರಿಯ ಆರ್​ಸಿಬಿ ತಂಡದ ಬಗ್ಗೆ ಸ್ಟಾರ್​ ಬ್ಯಾಟ್ಸ್​ಮನ್​ ಎಬಿ ಡಿವಿಲಿಯರ್ಸ್ ಮಾತು
X

ದುಬೈ: ರಾಯಲ್​ ಚಾಲೆಂಜರ್ಸ್​​ ಬೆಂಗಳೂರು (ಆರ್‌ಸಿಬಿ) ತಂಡದ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್ ಈ ಬಾರಿ ತಂಡದೊಳಗಿರುವ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದು, ಆರ್‌ಸಿಬಿ ತಂಡ ಈ ವರೆಗಿನ ಶ್ರೇಷ್ಠ ತಂಡ ಎಂದು ಎಬಿಡಿ ವಿಲಿಯರ್ಸ್ ಹೇಳಿಕೊಳ್ಳಲು ಇಷ್ಟಪಡಲಿಲ್ಲ. ಆದರೆ, ಈ ಬಾರಿಯ ತಂಡದಲ್ಲಿ ವಿವರಿಸಲಾಗದ ಹೊಸತನವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಸಿಬಿ ತಂಡದ ಆರ್‌ಸಿಬಿ ಬೋಲ್ಡ್ ಡೇರೀಸ್​ನ ಇತ್ತೀಚಿನ ವಿಡಿಯೋದಲ್ಲಿ ಎಬಿಡಿ ವಿಲಿಯರ್ಸ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು, ಹಿಂದಿನ ಎಲ್ಲಾ ಆವೃತ್ತಿಗಳಿಗಿಂತ ಈ ಆವೃತ್ತಿಯಲ್ಲಿ ತಂಡದಲ್ಲಿ ಭಿನ್ನವಾದದ್ದೇನೋ ಇದೆ ಎಂದು ಹೇಳಿದ್ದಾರೆ.

ಸದ್ಯ ತಂಡದಲ್ಲಿ ಕಠಿಣ ಪರಿಶ್ರಮದ ವಾತಾವರಣವಿದೆ. ಅದಕ್ಕಾಗಿ ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಲೇಬೇಕು. ಅವರು ಉದಾಹರಣೆಯಾಗಿ ಮುಂದಿರುತ್ತಾರೆ. ವಿರಾಟ್ ರೀತಿಯ ನಾಯಕ ಮುಂದೆ ಇದ್ದಾಗ ಆತನನ್ನು ಅನುಸರಿಸುವುದು ತುಂಬಾ ಸುಲಭ ಎಂದು ಕೊಹ್ಲಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ನಿಸ್ಸಂಶಯವಾಗಿ ಕಾಂಬಿನೇಶನ್ ಆಯ್ಕೆ ಮಾಡಿಕೊಳ್ಳುವಾಗ ಅದಕ್ಕೆ ಪೂರಕವಾಗಿ ಬೇಕಾಗುವಂತಹ ಪೂರ್ವ ತಯಾರಿ ಮಾಡಿಕೊಳ್ಳುವಷ್ಟು ಆಯ್ಕೆಗಳು ತಂಡದಲ್ಲಿದೆ. ಹೀಗಾಗಿ ಕೋಚ್ ಹಾಗೂ ವಿರಾಟ್ ತಂಡದಲ್ಲಿ ಅತ್ಯುತ್ತಮ ಆಡುವ ಬಳಗವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಗಳು ಇದೆ ಎಂದಿದ್ದಾರೆ.

ಇದು ಕೇವಲ ಪ್ರತಿ ಪಂದ್ಯದಲ್ಲೂ ಎಬಿಡಿ ಬ್ಯಾಟಿಂಗ್‌ಗೆ ಇಳಿಯುತ್ತಾನೆ, ಪಾರ್ಥೀವ್ ಅಥವಾ ಡೇಲ್ ಸ್ಟೇನ್ ಪ್ರತಿ ಪಂದ್ಯದಲ್ಲೂ ಆಡುತ್ತಾರೆ ಎಂಬುದು ವಿಚಾರವಲ್ಲ. ಪ್ರತಿ ವಿಭಾಗದಲ್ಲೂ ಇಲ್ಲಿ ಆಯ್ಕೆಗಳಿವೆ. ಬ್ಯಾಟಿಂಗ್, ಬೌಲಿಂಗ್ ಫೀಲ್ಡಿಂಗ್. ನೀವು ಅದನ್ನು ಹೆಸರಿಸಬಹುದು. ಹಾಗಾಗಿ ರೋಮಾಂಚನಕಾರಿಯಾಗಿದೆ ಎಂದು ತಿಳಿಸಿದರು.

Next Story

RELATED STORIES