Top

ಸಣ್ಣಸಣ್ಣ ಮೀನುಗಳನ್ನ ಹಿಡಿದರು ಇನ್ನೂ ದೊಡ್ಡ ತಿಮಿಂಗಿಲಗಳಿದೆ - ಇಂದ್ರಜಿತ್​ ಲಂಕೇಶ್

ಸಾಕಷ್ಟು ಹೆಸರು ಹೊರ ಬಂದಿದೆ ರಾಜಕಾರಣಿಯದು-ವಿದೇಶಿಗರು ಇರುವ ಸಾಧ್ಯತೆ ಇದೆ

ಸಣ್ಣಸಣ್ಣ ಮೀನುಗಳನ್ನ ಹಿಡಿದರು ಇನ್ನೂ ದೊಡ್ಡ ತಿಮಿಂಗಿಲಗಳಿದೆ - ಇಂದ್ರಜಿತ್​ ಲಂಕೇಶ್
X

ಬೆಂಗಳೂರು: ಡಿಸಿಪಿ ಬಸವರಾಜ್ ಅಂಗಡಿವರು ಕರೆದರು, ಕಳೆದ ಆರು ತಿಂಗಳಿನಿಂದ ಸಹಕಾರವನ್ನ ನೀಡಿದ್ದೇನೆ ಆದರೆ ಇಂದು ಸೆಷನ್​ನಲ್ಲಿ ಬ್ಯುಸಿ ಎಂದು ಹೇಳಿದರು ಎಂದು ಪತ್ರಕರ್ತ, ಚಲನಚಿತ್ರ ನಿರ್ದೇಶಕ ಇಂದ್ರಜಿತ್​​ ಲಂಕೇಶ್ ಅವರು ಹೇಳಿದ್ದಾರೆ.

ಇಂದು ಕಮೀಷನರ್ ಕಚೇರಿಗೆ ಭೇಟಿ ನೀಡಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ತನಿಖೆಯಲ್ಲಿ ಕೋಟ್ಯಾಂತರ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. ಸಣ್ಣಸಣ್ಣ ಮೀನುಗಳನ್ನ ಹಿಡಿದರು ಇನ್ನೂ ದೊಡ್ಡ ತಿಮಿಂಗಿಲಗಳಿದೆ. ಸೆಷನ್​ನಲ್ಲಿ ಪ್ರಸ್ತಾಪ ಮಾಡಿ ಅಂತ ಮನವಿ ಮಾಡಿಕೊಳ್ಳುತ್ತೀನಿ ಎಂದರು.

ಇನ್ನು ಇದೊಂದು ಸಮಾಜಕ್ಕೆ ಮಾರಕ, ಇದರ ಅಂತ್ಯ ಆಗಬೇಕು ಎಂದಿದ್ದಾರೆ. ಇದರಿಂದ ಸಮಾಜಕ್ಕೆ ತೊಂದರೆಯಾಗಿದೆ. ಯುವಕರಿಗೆ ಆ ಮಾದಕ ವಸ್ತು ಸಿಕ್ಕಿದ್ರೆ ಏನಾಗುತ್ತಿತ್ತು ಅಂತ ಊಹೆ ಮಾಡೋಕಾಗಲ್ಲ, ನಾನು ಪೊಲೀಸ್ ತನಿಖೆಗೆ ಸಹಾಕರ ನೀಡಿದ್ದೇನೆ. ನಾನು ಒಬ್ಬ ನಿರ್ದೇಶಕನಾಗಿ ಸಾಮಾನ್ಯ ವ್ಯಕ್ತಿಯಾಗಿ ಬೇಡಿಕೊಳ್ಳುತ್ತೀನಿ. ಸಾಕಷ್ಟು ಹೆಸರು ಹೊರ ಬಂದಿದೆ ರಾಜಕಾರಣಿದು ವಿದೇಶಿಗರು ಇರುವ ಸಾಧ್ಯತೆ ಇದೆ ಎಂದು ಇಂದ್ರಜಿತ್​ ಲಂಕೇಶ್ ಅವರು ಹೇಳಿದ್ದಾರೆ.

Next Story

RELATED STORIES