ಗಾಬಾ ಮೈದಾನದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ದಾಖಲೆ
ಈ ಮೈದಾನದಲ್ಲಿ ಟೀಂ ಇಂಡಿಯಾ ಗೆದ್ದ ಪ್ರಥಮ ಪಂದ್ಯವಾಗಿದೆ

X
Admin 220 Jan 2021 6:23 AM GMT
ಬ್ರಿಸ್ಬೇನ್: ಅಜಿಂಕ್ಯ ರಹಾನೆ ನೇತೃತ್ವದ ಭಾರತ ಯುವಪಡೆಯು ಆತಿಥೇಯ ಆಸೀಸ್ ತಂಡವನ್ನು ಟೆಸ್ಟ್ ಸರಣಿಯಲ್ಲಿ ಸೋಲಿಸುವ ಮೂಲಕ ಬಾರ್ಡರ್ ಗಾವಸ್ಕರ್ ಟ್ರೋಫಿ ಜಯಿಸಿತು.
ಗಾಬಾ ಕ್ರೀಡಾಂಗಣದಲ್ಲಿ ನಿನ್ನೆ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ 328 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡವು 3 ವಿಕೆಟ್ಗಳ ಅಂತರದಿಂದ ಗೆಲುವಿನ ನಗೆ ಬೀರಿತು. ಒಟ್ಟು 4 ಪಂದ್ಯಗಳ ಸರಣಿಯನ್ನು ಭಾರತ 2-1ರಿಂದ ಗೆದ್ದಿತು.
ಸತತ ಎರಡನೇ ಸಲ ಆಸೀಸ್ ತಂಡವನ್ನು ತಮ್ಮ ತವರು ನೆಲದಲ್ಲಿಯೇ ಸೋಲಿಸಿದೆ. 2018-19ರ ಸಾಲಿನಲ್ಲಿ ಭಾರತ ಇಲ್ಲಿ ಮೊದಲ ಬಾರಿ ಸರಣಿ ವಶಪಡಿಸಿಕೊಂಡು ದಾಖಲೆ ನಿರ್ಮಿಸಿತ್ತು. ಅಲ್ಲದೆ, ಆಸ್ಟ್ರೇಲಿಯಾ ತಂಡವು ಕಳೆದ 32 ವರ್ಷಗಳಿಂದ ಗಾಬಾ ಕ್ರೀಡಾಂಗಣದಲ್ಲಿ ಸೋಲವನ್ನೇ ಕಂಡಿರಲಿಲ್ಲ. ಆದರೆ, ಈಗ ಭಾರತದ ಎದುರು ಮುಖಭಂಗ ಅನುಭವಿಸಿತು. ಈ ಮೈದಾನದಲ್ಲಿ ಟೀಂ ಇಂಡಿಯಾ ಗೆದ್ದ ಪ್ರಥಮ ಪಂದ್ಯವಾಗಿದೆ.
Next Story