Top

ಅಜಿಂಕ್ಯ ರಹಾನೆ ಫಾರ್ಮ್​ ಬಗ್ಗೆ ಪ್ರಶ್ನೆ ಮಾಡಿದ ಸಂಜಯ್ ಮಂಜ್ರೇಕರ್

ಇಂಗ್ಲೆಂಡ್​ ವಿರುದ್ಧ ಭಾರತ ಸೋಲು ಕಂಡ ಬೆನ್ನಲ್ಲೆ ಉಪನಾಯಕ ಅಜಿಂಕ್ಯ ರಹಾನೆ ಅವರ ಫಾರ್ಮ್ ಬಗ್ಗೆ ಪ್ರಶ್ಬೆ ಮಾಡಿದ್ದಾರೆ.

ಅಜಿಂಕ್ಯ ರಹಾನೆ ಫಾರ್ಮ್​ ಬಗ್ಗೆ ಪ್ರಶ್ನೆ ಮಾಡಿದ ಸಂಜಯ್ ಮಂಜ್ರೇಕರ್
X

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 227 ರನ್‌ಗಳ ಅಂತರದಿಂದ ಹೀನಾಯ ಸೋಲು ಕಂಡ ಬೆನ್ನಲ್ಲೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು, ಉಪನಾಯಕ ಅಜಿಂಕ್ಯ ರಹಾನೆ ಅವರ ಫಾರ್ಮ್ ಬಗ್ಗೆ ಧ್ವನಿ ಎತ್ತಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಅಂಜಿಕ್ಯ ರಹಾನೆ ಅವರು ನಿನ್ನೆ ಅಂತ್ಯಗೊಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಡಿಮೆ ಮೊತ್ತಕ್ಕೆ ನಿರ್ಗಮಿಸಿದ್ದು ಸೇರಿ ಅವರ ಕಳಪೆ ಪ್ರದರ್ಶನಗಳ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

'ನಾಯಕ ಹಾಗೂ ಒಬ್ಬ ಬ್ಯಾಟ್ಸ್‌ಮನ್ ಆಗಿ ರಹಾನೆ ಹೇಗೆ ಎಂಬುದು ನನ್ನ ಪ್ರಶ್ನೆ ಆಗಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ 112 ರನ್ ಗಳಿಸಿದಾಗಿನಿಂದ, ಭಾರತದ ಉಪನಾಯಕ ರಹಾನೆ ಅವರು, ಚೆನ್ನೈ ಟೆಸ್ಟ್ ಪಂದ್ಯ ಸೇರಿದಂತೆ ಬಳಿಕ ನಡೆದಿರುವ ಪಂದ್ಯಗಳಲ್ಲಿ ಕ್ರಮವಾಗಿ 27*, 22, 4, 37, 24, 1 ಹಾಗೂ 0 ರನ್ ಗಳಿಸಿದ್ದಾರೆ. ಕ್ಲಾಸ್ ಆಟಗಾರರು ತಮ್ಮ ಫಾರ್ಮ್ ಅನ್ನು ಮುಂದುವರಿಸುತ್ತಾರೆ ಮತ್ತು ಇತರ ಫಾರ್ಮ್ ಕಳೆದುಕೊಂಡ ಆಟಗಾರರ ಜವಾಬ್ದಾರಿಯನ್ನು ಹೊರುತ್ತಾರೆ' ಎಂದು ಟ್ವಿಟ್​​ ಮಾಡಿದ್ದಾರೆ.

Next Story

RELATED STORIES