Top

ಖ್ಯಾತ ಟೆನಿಸ್ ತರಬೇತುದಾರ ಬಾಬ್ ಬ್ರೆಟ್ ವಿಧಿವಶ

ಮೋಸ್ಟ್​​ ಚಾಂಪಿಯನ್ ಆಟಗಾರರ ಕೋಚ್ ಎಂದೇ ಪ್ರಖ್ಯಾತಿ ಪಡೆದುಕೊಂಡಿದ್ದರು

ಖ್ಯಾತ ಟೆನಿಸ್ ತರಬೇತುದಾರ ಬಾಬ್ ಬ್ರೆಟ್ ವಿಧಿವಶ
X

ಮೆಲ್ಬರ್ನ್: ಮೋಸ್ಟ್​​ ಚಾಂಪಿಯನ್ ಆಟಗಾರರ ಕೋಚ್ ಎಂದೇ ಪ್ರಖ್ಯಾತಿ ಪಡೆದುಕೊಂಡಿದ್ದ ಟೆನಿಸ್ ಲೋಕದ ತರಬೇತುದಾರ ಬಾಬ್ ಬ್ರೆಟ್ (67) ಬುಧವಾರ ವಿಧಿವಶರಾಗಿದ್ದಾರೆ.

ಬಾಬ್​ ಬ್ರೆಟ್​ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇವರಿಗೆ ಕರೋಲಿನಾ ಮತ್ತು ಕ್ಯಾಥರಿನಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಇವರ ಮಾರ್ಗದರ್ಶದಲ್ಲಿ ಗ್ರ್ಯಾನ್‌ಸ್ಲಾಂ ಚಾಂಪಿಯನ್ನರಾದ ಬೋರಿಸ್ ಬೆಕರ್, ಗೊರಾನ್ ಇವಾನಿಸೆವಿಚ್ ಮತ್ತು ಮರಿನ್ ಸಿಲಿಕ್​ಯವರು ತರಬೇತಿ ಪಡೆದ ಪ್ರಮುಖರು.

1987ರ ನವೆಂಬರ್‌ನಿಂದ 1991ರ ಫೆಬ್ರುವರಿ ವರೆಗೆ ಬೆಕರ್ ಅವರಿಗೆ ಬಾಬ್ ತರಬೇತಿ ನೀಡಿದ್ದರು. ಬೆಕರ್ ಗಳಿಸಿದ ಪ್ರಮುಖ ಆರು ಪ್ರಶಸ್ತಿಗಳಲ್ಲಿ ಮೂರು ಈ ಸಮಯದಲ್ಲಿ ಒಲಿದಿದ್ದವು. ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೆ ಜಿಗಿದದ್ದೂ ಇದೇ ಸಂದರ್ಭದಲ್ಲಿ. ಬ್ರಿಟನ್, ಜಪಾನ್ ಮತ್ತು ಕೆನಡಾಗಳಲ್ಲಿ ರಾಷ್ಟ್ರೀಯ ಟೆನಿಸ್ ಸಂಸ್ಥೆಗಳ ಕೋಚ್ ಆಗಿಯೂ ಕಾರ್ಯನಿರ್ವಹಿಸಿರುವ ಬಾಬ್, ಇಟಲಿಯ ಸ್ಯಾನ್ ರೆಮೊದಲ್ಲಿ ಸ್ವಂತ ಅಕಾಡೆಮಿಯನ್ನೂ ಸ್ಥಾಪಿಸಿದ್ದರು.

ಕೋಚ್‌ಗಳಿಗೆ ಎಟಿಪಿ ನೀಡುವ ಜೀವಮಾನ ಸಾಧನೆಯ ಟಿಮ್ ಗುಲಿಕ್ಸನ್ ಪ್ರಶಸ್ತಿಗೆ ನವೆಂಬರ್‌ನಲ್ಲಿ ಅವರನ್ನು ಆಯ್ಕೆ ಮಾಡಲಾಗಿತ್ತು.

Next Story

RELATED STORIES