ಏಕದಿನ ಸರಣಿ: ಮೊದಲ ಪಂದ್ಯದಲ್ಲೆ ಇಂಗ್ಲೆಂಡ್ ಮಣಿಸಿದ ಭಾರತ
ಆತಿಥೇಯ ಬಳಗವು 50 ಓವರ್ಗಳಲ್ಲಿ 5 ವಿಕೆಟ್ಗಳಿಗೆ 317 ರನ್ಗಳನ್ನು ಟಾರ್ಗೆಟ್ ನೀಡಿತು
X
Admin 224 March 2021 5:52 AM GMT
ಪುಣೆ: ಏಕದಿನ ಮೊದಲ ಪಂದ್ಯದಲ್ಲಿ ಬೌಲಿಂಗ ವಿಭಾಗದಲ್ಲಿ ಮಿಂಚಿದ ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತು ಕೃಣಾಲ್ ಪಾಂಡ್ಯ ಅವರ ಅಮೋಘ ಆಟದ ನೆರವಿನಿಂದ ಟೀಂ ಇಂಡಿಯಾವು ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಯ ದಾಖಲಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಡೆಯೂ 66 ರನ್ ಅಂತರದಿಂದ ಎದುರಾಳಿ ತಂಡವನ್ನು ಮಣಿಸಿತು. ಮೊದಲು ಟಾಸ್ ಗೆದ್ದು ಇಂಗ್ಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ಬಳಗವು 50 ಓವರ್ಗಳಲ್ಲಿ 5 ವಿಕೆಟ್ಗಳಿಗೆ 317 ರನ್ಗಳನ್ನು ಟಾರ್ಗೆಟ್ ನೀಡಿತು.
ಈ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಜೇಸನ್ ರಾಯ್ ಮತ್ತು ಜಾನಿ ಬೆಸ್ಟೊ ಅಮೋಘ ಆರಂಭ ನೀಡಿದರು. ಆದರೆ ಮಧ್ಯಮವೇಗಿ ಪ್ರಸಿದ್ಧಕೃಷ್ಣ (54/4) ಅಮೋಘ ಬೌಲಿಂಗ್ ಮುಂದೆ ಇಂಗ್ಲೆಂಡ್ ತಂಡವು 42.1 ಓವರ್ಗಳಲ್ಲಿ 251 ರನ್ ಗಳಿಸಲು ಮಾತ್ರ ಶಕ್ತವಾಯಿತು. ವಿರಾಟ್ ಕೊಹ್ಲಿ ಬಳಗವು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
Next Story