Top

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ 50 ವರ್ಷ

ಅಂದೇ ಎಂಸಿಜಿಯಲ್ಲಿ ಸುಮಾರು 45 ಸಾವಿರ ಕ್ರಿಕೆಟ್​ ಪ್ರೇಮಿಗಳು ಪಂದ್ಯ ವೀಕ್ಷಿಸಿದ್ದು ಇಂದು ಇತಿಹಾಸ.

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ 50 ವರ್ಷ
X

ಸಾಮಾನ್ಯವಾಗಿ ಮಳೆಯ ಕಾರಣದಿಂದಾಗಿ ಸಾಕಷ್ಟು ಕ್ರಿಕೆಟ್​ ಪಂದ್ಯಗಳು ರದ್ದಾಗಿರುವ ಬಗ್ಗೆ ಹಲವು ನಿದರ್ಶನಗಳಿವೆ ಆದರೆ ಈ ಮಳೆಯಿಂದಲೇ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ ಜನಿಸಿದ ಪರಿಕಲ್ಪನೆಗೆ ಈಗ 50 ವರ್ಷ ಪೂರೈಸಿದೆ.

ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ 1970ರ ಡಿಸೆಂಬರ್ 31ರಿಂದ 1971ರ ಜನವರಿ 4ರವರೆಗೆ ಆಸೀಸ್​ ಟೆಸ್ಟ್ ಸರಣಿಯ ಮೂರನೇ ಪಂದ್ಯ ನಿಗದಿಯಾಗಿತ್ತು ಆದರೆ ಈ ಪಂದ್ಯವು ಮಳೆಯ ಕಾರಣದಿಂದಾಗಿ ರದ್ದಾಯಿತು.

ಈ ವೇಳೆ ಪ್ರೇಕ್ಷಕರ ಮನರಂಜಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಜನವರಿ 5ರಂದು 40 ಓವರ್‌ಗಳ ಏಕದಿನ ಪಂದ್ಯವನ್ನು ಆಯೋಜಿಸಿತು. ಇದೇ ನೋಡಿ ಮೊಟ್ಟಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿ ಗಮನ ಸೆಳೆಯಿತು. ಅಂದೇ ಎಂಸಿಜಿಯಲ್ಲಿ ಸುಮಾರು 45 ಸಾವಿರ ಕ್ರಿಕೆಟ್​ ಪ್ರೇಮಿಗಳು ಪಂದ್ಯ ವೀಕ್ಷಿಸಿದ್ದು ಇಂದು ಇತಿಹಾಸ.

ಮೊಟ್ಟಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್ ತಂಡವು 39.4 ಓವರ್‌ಗಳಲ್ಲಿ 190 ರನ್ ಗಳಿಸಿತು. ಆಸ್ಟ್ರೇಲಿಯಾ 35 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 191 ರನ್ ಗಳಿಸಿ ಜಯದಾಖಲಿಸಿತು. 119 ಎಸೆತಗಳನ್ನು ಎದುರಿಸಿ 82 ರನ್‌ ಗಳಿಸಿದ್ದ ಇಂಗ್ಲೆಂಡ್‌ನ ಜಾನ್ ಎಡ್ರಿಕ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಈ ಪಂದ್ಯದ ಜನಪ್ರಿಯತೆಯನ್ನು ಅರ್ಥ ಮಾಡಿಕೊಂಡು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 1972ರ ಆಗಸ್ಟ್​ನಲ್ಲಿ ಎರಡನೇ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಿಕೊಂಡಿತು. ಇದರಲ್ಲಿ ಇಂಗ್ಲೆಂಡ್ ಗೆದ್ದಿತು. ಬಳಿಕ ಇಂಗ್ಲೆಂಡ್​ 1975ರಲ್ಲಿ ಮೊಟ್ಟಮೊದಲ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನೂ ಆಯೋಜಿಸಿತು. ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್​ ಆಯಿತು.

Next Story

RELATED STORIES