ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾಗೆ ನೋಟಿಸ್ ಜಾರಿ
ಡಿ. 24, 2020ರಂದು ನಡೆದಿದ್ದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು

X
Admin 215 Jan 2021 6:26 AM GMT
ಮುಂಬಯಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷರಾಗಿ ನೂತನವಾಗಿ ಆಯ್ಕೆ ಆಗಿರುವ ರಾಜೀವ್ ಶುಕ್ಲಾ ಅವರಿಗೆ ಹಿತಾಸಕ್ತಿ ಸಂಘರ್ಷದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಮಂಡಳಿ ನೈತಿಕ ಸಮಿತಿ ಅಧಿಕಾರಿ ಡಿ ಕೆ ಜೈನ್, ನಿನ್ನೆ (ಗುರುವಾರ) ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ಗೆ ಉತ್ತರಿಸಲು ಎರಡು ವಾರಗಳ ಗಡುವು ನೀಡಲಾಗಿದೆ.
ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನಿರ್ದೇಶಕರೂ ಆಗಿರುವ ರಾಜೀವ್ ಶುಕ್ಲಾ ಅವರು, ಅದೇ ಸಮಯದಲ್ಲಿ ಬಿಸಿಸಿಐ ಉಪಾಧ್ಯಕ್ಷರಾಗಿರುವುದನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು. ಜ.8ರಂದು ಮಧ್ಯ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ನ ಮಾಜಿ ಸದಸ್ಯ ಸಂಜೀವ್ ಗುಪ್ತಾ ಎಂಬವರು ರಾಜೀವ್ ಶುಕ್ಲಾ ವಿರುದ್ಧ ಹಿತಾಸಕ್ತಿ ಸಂಘರ್ಷದ ಬಗ್ಗೆ ದೂರು ನೀಡಿದ್ದರು.
ಐಪಿಎಲ್ ಮಾಜಿ ಚೇರ್ಮನ್ ಕೂಡಾ ಆಗಿರುವ ಶುಕ್ಲಾ, ಡಿ. 24, 2020ರಂದು ನಡೆದಿದ್ದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
Next Story