Top

ಐಪಿಎಲ್​ ಹರಾಜು 2021: 14.25 ಕೋಟಿ ರೂ.ಗೆ ಆರ್​ಸಿಬಿಗೆ ಸೇಲ್​, ಗ್ಲೆನ್​ ಮ್ಯಾಕ್ಸ್​​ವೆಲ್ ಸಂತಸ

ಈ ಬಾರಿಯ ಹರಾಜಿನಲ್ಲಿ ಪಂಜಾಬ್​ ತಂಡಕ್ಕಿಂತಲೂ ದೊಡ್ಡ ಮೊತ್ತವನ್ನು ಮ್ಯಾಕ್ಸ್‌ವೆಲ್ ಪಡೆದುಕೊಂಡಿದ್ದಾರೆ.

ಐಪಿಎಲ್​ ಹರಾಜು 2021: 14.25 ಕೋಟಿ ರೂ.ಗೆ ಆರ್​ಸಿಬಿಗೆ ಸೇಲ್​, ಗ್ಲೆನ್​ ಮ್ಯಾಕ್ಸ್​​ವೆಲ್ ಸಂತಸ
X

ಇಂದು ಚೆನ್ನೈನಲ್ಲಿ ನಡೆದ ಇಂಡಿಯನ್​ ಪ್ರಿಮಿಯರ್​ ಲೀಗ್​ (ಐಪಿಎಲ್​) 2021 ಸಾಲಿನ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು 14.25 ಕೋಟಿ ರೂ. ಮೊತ್ತಕ್ಕೆ ಬೆಂಗಳೂರು ರಾಯಲ್​ ಚಾಲೆಂಜರ್ಸ್​(ಆರ್​ಸಿಬಿ)ಗೆ ಶೋಲ್ಡ್​​ ಔಟ್​ ಆಗಿದ್ದಾರೆ.

ಈ ವಿಷಯದ ಬಗ್ಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, 'ಈ ಸಲ ಟೂರ್ನಿಗಾಗಿ ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲು ಉತ್ಸುಕನಾಗಿದ್ದೇನೆ. ಪ್ರಶಸ್ತಿಯನ್ನು ಗೆಲ್ಲಲು ನನ್ನ ಎಲ್ಲ ಪ್ರಯತ್ನವನ್ನು ಮಾಡುವುದಕ್ಕೆ ನಾನು ಕಾತುರನಾಗಿದ್ದೇನೆ' ಎಂದು ಟ್ವಿಟ್​​ ಮೂಲಕ ತಿಳಿಸಿದ್ದಾರೆ.

ಈ ಮೊದಲು ಆಸ್ಟ್ರೇಲಿಯಾ ಕ್ರಿಕೆಟಿಗ ಆ್ಯಡಂ ಜಂಪಾ ಮ್ಯಾಕ್ಸ್‌ವೆಲ್‌ಗೆ ಆರ್‌ಸಿಬಿ ಟ್ರೋಫಿಯನ್ನು ನೀಡಿ ಸ್ವಾಗತಿಸಿದ ಫೋಟೋವನ್ನು ಶೇರ್​ ಮಾಡಿಕೊಂಡಿದ್ದರು. ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಆಡಂ ಜಂಪಾ ಈ ಸಲ ಆರ್‌ಸಿಬಿ ತಂಡದಲ್ಲೇ ಮುಂದುವರಿಯಲಿದ್ದಾರೆ.

ಈ ಹಿಂದೆ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ, ಆ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಮ್ಯಾಕ್ಸ್‌ವೆಲ್ ಅವರನ್ನು ಪಂಜಾಬ್ ತಂಡ ಕೈಬಿಟ್ಟಿದೆ. ಆದರೂ ಸಹ ಈ ಬಾರಿಯ ಹರಾಜಿನಲ್ಲಿ ಪಂಜಾಬ್​ ತಂಡಕ್ಕಿಂತಲೂ ದೊಡ್ಡ ಮೊತ್ತವನ್ನು ಮ್ಯಾಕ್ಸ್‌ವೆಲ್ ಪಡೆದುಕೊಂಡಿದ್ದಾರೆ.

Next Story

RELATED STORIES