Top

IPL 2020: ಗೆಲುವಿನ ಲಯಕ್ಕೆ ಮರಳಲು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸಜ್ಜು

ಇಂದು ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಸನ್​ರೈಸರ್ಸ್​​ ಹೈದರಾಬಾದ್​ ತಂಡಗಳ ನಡುವೆ ಕದನ

IPL 2020: ಗೆಲುವಿನ ಲಯಕ್ಕೆ ಮರಳಲು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸಜ್ಜು
X

ದುಬೈ: 13 ಆವೃಯತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​)ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ತಂಡ ಸತತ ಸೋಲಿನಿಂದ ಕಂಗೆಟ್ಟಿದ್ದರೆ, ಇನ್ನೂ ಕೂಡ ಸ್ಥಿರ ಪ್ರದರ್ಶನ ತೋರಲು ಸಾಧ್ಯವಾಗದ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಮುಖಾಮುಖಿ ಆಗಲಿವೆ.

ಸದ್ಯ ಎರಡೂ ತಂಡಗಳು ಇಲ್ಲಿಯತನಕ 7 ಪಂದ್ಯಗಳನ್ನು ಆಡಿದ್ದು, ಚೆನ್ನೈ ಸೂಪರ್​ ಕಿಂಗ್ಸ್​​ ತಂಡ ಕೇವಲ 2 ಪಂದ್ಯಗಳನ್ನು ಜಯಿಸಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್​ ತಂಡ ಐದನೇ ಸ್ಥಾನದಲ್ಲಿದ್ದು, ಏಳು ಪಂದ್ಯಗಳಲ್ಲಿ 4 ಜಯ ದಾಖಲಿಸಿದೆ.

ಮೂರು ಬಾರಿಯ ಚಾಂಪಿಯನ್ ಮತ್ತು ಕಳೆದ ಬಾರಿಯ ರನ್ನರ್ ಅಪ್ ಆಗಿದ್ದ ಸಿಎಸ್​ಕೆ ತಂಡ ಬ್ಯಾಟಿಂಗ್‌ ವಿಭಾಗದಲ್ಲಿ ಸತತ ವೈಫಲ್ಯ ಕಾಣುತ್ತಿದೆ. ಈ ಬಾರಿ ತನ್ನ ಅಸ್ಥಿತ್ವ ಭದ್ರಪಡಿಸಿಕೊಳ್ಳಬೇಕಾದ್ರೆ ಮುಂದೆ ಎದುರಿಸುವ ಎಲ್ಲಾ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದ್ದು ಒತ್ತಡದಲ್ಲಿಯೇ ಪರಿಸ್ಥಿತಿ ಎದುರಿಸಬೇಕಾದ ಸ್ಥಿತಿಯಲ್ಲಿದೆ.

ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಂದಲೇ ಸರಿಯಾದ ಕಾಣಿಕೆ ಸಿಗುತ್ತಿಲ್ಲ. ಫಾಫ್ ಡು ಪ್ಲೆಸಿ ಮತ್ತು ಶೇನ್ ವಾಟ್ಸನ್ ಉತ್ತಮ ಆರಂಭ ಒದಗಿಸುತ್ತಿದ್ದರೂ ಮಿಡಲ್ ಆರ್ಡರ್​​ ಬ್ಯಾಟಿಂಗ್​ನಲ್ಲಿ​ ಕಳಪೆ ಪ್ರದರ್ಶನ ನೀಡುತ್ತಿದೆ.

ಕೇದಾರ್ ಜಾಧವ್ ಅವರನ್ನು ಕಳೆದ ಪಂದ್ಯದಲ್ಲಿ ಹೊರಗಿಟ್ಟು, ಅವರ ಸ್ಥಾನಕ್ಕೆ ನಾರಾಯಣ್ ಜಗದೀಶನ್ ಅವರನ್ನು ಕಣಕ್ಕೆ ಇಳಿಸಿತ್ತು. ಅಂಬಟಿ ರಾಯುಡು ಜೊತೆ ನಾರಾಯಣ್ ಉತ್ತಮ ಜೊತೆಯಾಟವಾಡಿದರು. ಆದರೆ, ತಂಡ ಮಾತ್ರ ಲಾಭ ಪಡೆದುಕೊಳ್ಳುವಲ್ಲಿ ವಿಫಲವಾಗಿತ್ತು. ಅಲ್ಲದೇ, ಸ್ಯಾಮ್ ಕರನ್, ರವೀಂದ್ರ ಜಡೇಜ ಮತ್ತು ಡ್ವೇನ್ ಬ್ರಾವೊ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.

ಇನ್ನು ಬೌಲಿಂಗ್​ ವಿಭಾಗದಲ್ಲಿ ದೀಪಕ್ ಚಾಹರ್ ಮತ್ತು ಜಡೇಜ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕರನ್, ಶಾರ್ದೂಲ್ ಠಾಕೂರ್ ಮತ್ತು ಕರ್ಣ ಶರ್ಮಾ ಅವರಿಗೆ ಫಾರ್ಮ್​ಗೆ ಮರಳಲು ಆಗಲಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಉತ್ತಮ ಪರಿಹಾರ ಸಿದ್ಧಪಡಿಸಿಕೊಂಡಿಸಿಕೊಂಡು ಕಣಕ್ಕೆ ಇಳಿಯುವ ತಯಾರಿಯಲ್ಲಿರುವ ಸಿಎಸ್​ಕೆ ತಂಡ ಕಳೆದ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ತಕ್ಕ ಪ್ರದರ್ಶನ ನೀಡುವ ಆತುರದಲ್ಲಿದೆ.

Next Story

RELATED STORIES