Top

ಭಾರತ-ಇಂಗ್ಲೆಂಡ್​ ತಂಡಗಳ ನೆಟ್​ ಪ್ರಾಕ್ಟೀಸ್ ಇಂದಿನಿಂದ ಆರಂಭ

ಉಭಯ ತಂಡಗಳ ಆಟಗಾರರು ಮೂರು ಬಾರಿ ಕೋವಿಡ್‌ 19 ಪರೀಕ್ಷೆಗೆ ಒಳಗಾಗಿದ್ದು, ಸದ್ಯ ಎಲ್ಲರ ವರದಿ ನೆಗೆಟಿವ್ ಬಂದಿದೆ.

ಭಾರತ-ಇಂಗ್ಲೆಂಡ್​ ತಂಡಗಳ ನೆಟ್​ ಪ್ರಾಕ್ಟೀಸ್ ಇಂದಿನಿಂದ ಆರಂಭ
X

ಪೋಟೋ ಕೃಪೆ: ಬಿಸಿಸಿಐ ಟ್ವಿಟರ್​

ಚೆನ್ನೈ: ಟೀಂ ಇಂಡಿಯಾ ಆಟಗಾರರು 6 ದಿನಗಳ ಕ್ವಾರಂಟೈನ್ ಮುಗಿಸಿ ಸೋಮವಾರ ಮೊದಲ ಬಾರಿ ಮೈದಾನಕ್ಕೆ ಇಳಿದರು. ತಂಡ ಮೊದಲ ಟೆಸ್ಟ್‌ಗೆ ಸಿದ್ಧತೆ ನಡೆಸುತ್ತಿದ್ದು ಕೆಲಕಾಲ ಕಸರತ್ತು ನಡೆಸಿತು. ಮಂಗಳವಾರ ಬೆಳಿಗ್ಗೆ ಉಭಯ ತಂಡಗಳ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸ ಮಾಡಲಿದ್ದಾರೆ.

ಉಭಯ ತಂಡಗಳ ಆಟಗಾರರು ಮೂರು ಬಾರಿ ಕೋವಿಡ್‌ 19 ಪರೀಕ್ಷೆಗೆ ಒಳಗಾಗಿದ್ದು, ಸದ್ಯ ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಲಾಗಿದೆ.

ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿ ಮುಗಿಸಿ ವಾಪಾಸ್​ ಬಂದ ಬಳಿಕ ಭಾರತ ತಂಡದ ಆಟಗಾರರು ಕಳೆದ ಬುಧವಾರ ಹೋಟೆಲ್ ಒಂದರಲ್ಲಿ ಜೀವಸುರಕ್ಷಾ ವಲಯವನ್ನು ಪ್ರವೇಶಿಸಿದ್ದರು. ಇಂಗ್ಲೆಂಡ್ ತಂಡ ಶ್ರೀಲಂಕಾದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಮುಗಿಸಿ ಇಲ್ಲಿಗೆ ಬಂದಿತ್ತು. ತಂಡದ ನೆಟ್ಸ್ ಅಭ್ಯಾಸ ಇಂದು ಮಧ್ಯಾಹ್ನದ ನಂತರ ನಡೆಯಲಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ವಕ್ತಾರರು ತಿಳಿಸಿದ್ದಾರೆ.

ಬೆನ್‌ ಸ್ಟೋಕ್ಸ್‌, ಜೊಫ್ರಾ ಆರ್ಚರ್ ಹಾಗೂ ರೋರಿ ಬರ್ನ್ಸ್‌ ಶ್ರೀಲಂಕಾ ಸರಣಿಯಲ್ಲಿ ಇರಲಿಲ್ಲ. ಹೀಗಾಗಿ ಈ ಮೂರು ಆಟಗಾರರು ಮೊದಲೇ ಇಲ್ಲಿಗೆ ಬಂದು ಕ್ವಾರಂಟೈನ್ ಮುಗಿಸಿದ್ದಾರೆ. ಹೀಗಾಗಿ ಈಗಾಗಲೇ ತರಬೇತಿ ಆರಂಭಿಸಿದ್ದಾರೆ.

Next Story

RELATED STORIES