IND vs AUS, 2nd Test : ಆಸೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್ಗಳ ರೋಚಕ ಗೆಲುವು, ಸರಣಿ ಸಮಬಲ
4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಅಂತರದೊಂದಿಗೆ ಎರಡು ತಂಡಗಳು ಸಮಬಲ ಸಾಧಿಸಿದೆ.

ಪೋಟೋ ಕೃಪೆ: ಗೆಟ್ಟಿ ಇಮೇಜ್ಸ್ ಆಸ್ಟ್ರೇಲಿಯಾ (Getty Images Australia)
ಮೆಲ್ಬರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್ ಅಂತರದಿಂದ ರೋಚಕ ಜಯ ದಾಖಲಿಸಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಅಂತರದೊಂದಿಗೆ ಸಮಬಲ ಸಾಧಿಸಿದೆ.
ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೇ ಕೇವಲ 36 ರನ್ನಿಗೆ ಆಲೌಟಾಗಿದ್ದ ಟೀಮ್ ಇಂಡಿಯಾ ಭಾರಿ ಮುಖಭಂಗಕ್ಕೊಳಾಗಿತ್ತು. ಆದರೆ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪುಟಿದೆದ್ದಿದೆ. ಅದರಲ್ಲೂ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕ ಸ್ಥಾನ ವಹಿಸಿಕೊಂಡು ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಿದ ರೀತಿಯು ನಿಜಕ್ಕೂ ಶ್ಲಾಘನೀಯವಾಗಿದೆ.
4ನೇ ದಿನದಾಟದಲ್ಲಿ ಅಂತಿಮ ಇನ್ನಿಂಗ್ಸ್ನಲ್ಲಿ 70 ರನ್ ಗೆಲುವಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಮಯಾಂಕ್ ಅಗರವಾಲ್ (5) ಹಾಗೂ ಚೇತೇಶ್ವರ ಪೂಜಾರ (3) ವಿಕೆಟ್ ಕಳೆದುಕೊಂಡು ಅಪಾಯ ಎದುರಾಗಿತ್ತು. ಅಲ್ಲದೆ 19 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಪತನವಾಗಿತ್ತು.
Just how good has this pair been in the run-chase 💥😍#TeamIndia just 1️⃣3️⃣ runs away from victory 💪🏻#AUSvIND
— BCCI (@BCCI) December 29, 2020
📸📸: Getty Images Australia pic.twitter.com/8Sgj6z3OZM
ಬಳಿಕ ತಂಡಕ್ಕೆ ಹೆಚ್ಚಿನ ಅಪಾಯ ಎದುರಾಗದಂತೆ ನೋಡಿಕೊಂಡ ಡೆಬ್ಯು ಬ್ಯಾಟ್ಸ್ಮನ್ ಶುಭಮನ್ ಗಿಲ್ ಔಟಾಗದೇ 35 ಹಾಗೂ ನಾಯಕ ಅಜಿಂಕ್ಯ ರಹಾನೆ ಔಟಾಗದೇ 27, ಎರಡನೇ ವಿಕೆಟ್ಗೆ 51 ರನ್ ಜೊತೆ ಆಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಒಟ್ಟು 15.5 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಭಾರತ ಜಯ ದಾಖಲಿಸಿತು.
ಈ ಮೊದಲು ಭಾರತದ ಗೆಲುವನ್ನು ವಿಳಂಬಗೊಳಿಸಿದ ಆಸೀಸ್, ದ್ವಿತೀಯ ಇನ್ನಿಂಗ್ಸ್ನಲ್ಲಿ 200 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ಮೂಲಕ ಭಾರತದ ಗೆಲುವಿಗೆ 70 ರನ್ಗಳ ಸುಲಭ ಗುರಿ ನೀಡಿತ್ತು.
ಕ್ಯಾಮರೂನ್ ಗ್ರೀನ್ ಹಾಗೂ ಪ್ಯಾಟ್ ಕಮಿನ್ಸ್ 7ನೇ ವಿಕೆಟ್ಗೆ 57 ರನ್ಗಳ ಜೊತೆ ಆಟದಲ್ಲಿ ಭಾಗಿಯಾದರು. ಕೊನೆಗೂ ಈ ಜೋಡಿಯನ್ನು ಜಸ್ಪ್ರೀತ್ ಬೂಮ್ರಾ ಬೇರ್ಪಡಿಸಿದರು. 103 ಎಸೆತಗಳನ್ನು ಎದುರಿಸಿದ ಕಮಿನ್ಸ್ 1 ಬೌಂಡರಿ ನೆರವಿನಿಂದ 22 ರನ್ ಗಳಿಸಿದರು.
ನಥನ್ ಲಿಯನ್ (3), ಜೋಶ್ ಹ್ಯಾಜಲ್ವುಡ್ (10) ಮತ್ತು ಮಿಚೆಲ್ ಸ್ಟಾರ್ಕ್ ಔಟಾಗದೇ 14 ತಮ್ಮಿಂದಾಗುವ ಕೊಡುಗೆಯನ್ನಿತ್ತರು. ಇದರೊಂದಿಗೆ 103.1 ಓವರ್ಗಳಲ್ಲಿ 200 ರನ್ಗಳಿಗೆ ಆಲೌಟ್ ಆಯ್ತು.
ಭಾರತ ಪರ ಪ್ರಭಾವಿ ಎನಿಸಿಕೊಂಡಿರುವ ಮೊಹಮ್ಮದ್ ಸಿರಾಜ್ ಮೂರು ಮತ್ತು ಜಸ್ಪ್ರೀತ್ ಬೂಮ್ರಾ, ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು.
It's Lunch on Day 4 of the 2nd #AUSvIND Test!
— BCCI (@BCCI) December 29, 2020
Australia all out for 2⃣0⃣0⃣.
3⃣ wickets for Mohammed Siraj
2⃣ wickets each for @imjadeja, @ashwinravi99 & @Jaspritbumrah93
1⃣ wicket for @y_umesh#TeamIndia need 7⃣0⃣ runs to win.
Scorecard 👉 https://t.co/lyjpjyeMX5 pic.twitter.com/j2WdblcliL