ಹಾರ್ದಿಕ್ ಪಾಂಡ್ಯ ಪುತ್ರನೊಟ್ಟಿಗೆ ಮೊದಲ ಬಾರಿಗೆ ವಿಮಾನಯಾನ: ಪೋಟೋ ವೈರಲ್
ಹಾರ್ದಿಕ್ ಪಾಂಡ್ಯ ತಮ್ಮ ಮಗ ಅಗಸ್ತ್ಯ ಪಾಂಡ್ಯ ಅವರೊಟ್ಟಿಗೆ ಚೊಚ್ಚಲ ಬಾರಿಗೆ ವಿಮಾನಯಾನ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು ತಮ್ಮ ಮಗ ಅಗಸ್ತ್ಯ ಪಾಂಡ್ಯ ಅವರೊಟ್ಟಿಗೆ ಚೊಚ್ಚಲ ಬಾರಿಗೆ ವಿಮಾನಯಾನ ಮಾಡಿದ್ದಾರೆ. ಚಿತ್ರ: ಟ್ವಿಟರ್
ಮಹಾರಾಷ್ಟ್ರ: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಮಗ ಅಗಸ್ತ್ಯ ಪಾಂಡ್ಯ ಅವರೊಟ್ಟಿಗೆ ಚೊಚ್ಚಲ ಬಾರಿಗೆ ವಿಮಾನಯಾನ ಮಾಡಿದ್ದು, ಈ ವಿಷಯವನ್ನು ಸೀನಿಯರ್ ಪಾಂಡ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ಅವರು, 'ನನ್ನ ಹುಡುಗನ ಚೊಚ್ಚಲ ವಿಮಾನಯಾನ' ಎಂದು ಬರೆದುಕೊಂಡಿದ್ದಾರೆ. ಭಾರತ ವಸರ್ಸ್ ಇಂಗ್ಲೆಂಡ್ ನಡುವೆ ನಡೆಯಲಿರುವ ಪ್ರಥಮ ಟೆಸ್ಟ್ ಪಂದ್ಯಕ್ಕಾಗಿ ಚೆನ್ನೈ ನತ್ತ ಪಾಂಡ್ಯ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದೆ.
My boy's first flight ❤️ pic.twitter.com/RMX9dMIyoe
— hardik pandya (@hardikpandya7) January 28, 2021
ಫೆ. 5ರಿಂದ ಆರಂಭಗೊಳ್ಳಲಿರುವ ಮೊದಲನೇ ಟೆಸ್ಟ್ಗೂ ಮುನ್ನ ಭಾರತದ ಆಟಗಾರರು ಆರು ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಲಿದ್ದಾರೆ. ಕ್ರಿಕೆಟಿಗರ ಜೊತೆ ಅವರ ಕುಟುಂಬಸ್ಥರೂ ಪ್ರಯಾಣಿಸಲು ಅವಕಾಶವಿರುವುದರಿಂದ ಪಾಂಡ್ಯ ಕುಟುಂಬವೂ ಜೊತೆಯಲ್ಲಿ ಚೆನ್ನೈಗೆ ಪ್ರಯಣ ಬೆಳೆಸಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶಾ ಸ್ಟ್ಯಾಂಕೋವಿಕ್ ಅವರು ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದರು.