Top

ಕರ್ನಾಟಕ ಕ್ರೀಡಾಪಟುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ ಸುನೀಲ್​ ಗಾವಸ್ಕರ್

ಕರ್ನಾಟಕದ ಕ್ರೀಡಾಪಟುಗಳನ್ನು ಶ್ಲಾಘಿಸಿದರು

ಕರ್ನಾಟಕ ಕ್ರೀಡಾಪಟುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ ಸುನೀಲ್​ ಗಾವಸ್ಕರ್
X

ಬೆಂಗಳೂರು: ಕರ್ನಾಟಕದ ಕ್ರೀಡಾಪಟುಗಳು ತುಂಬಾ ಸಭ್ಯರು, ಆಟದಲ್ಲಿ ಅಂತೂ ಅವರೆಲ್ಲರೂ ಉತ್ತಮರು, ವ್ಯಕ್ತಿತ್ವದಲ್ಲಿಯೂ ಶ್ರೇಷ್ಠರು. ಬೇರೆಯವರಿಗೆ ಮಾದರಿ ಆಗುವಂತವರು ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್ ಅವರು ಕನ್ನಡಿಗರ ಬಗ್ಗೆ ಶ್ಲಾಘಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯದ ಕುರಿತು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯಲ್ಲಿ ವಿಶ್ಷೇಷಣೆ ವಿವರಣೆ ಮಾಡುವ ಸಮಯದಲ್ಲಿ ಗಾವಸ್ಕರ್​ ಅವರು ಈ ಮಾತುಗಳನ್ನು ಹೇಳಿದ್ದಾರೆ.

1999ರ ಫೆಬ್ರುವರಿ 7ರಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನ ಎದುರಿನ ಟೆಸ್ಟ್​ನ ಒಂದೇ ಇನಿಂಗ್ಸ್‌ನಲ್ಲಿ ಕರ್ನಾಟಕದವರಾದ ಅನಿಲ್ ಕುಂಬ್ಳೆ ಅವರು 10 ವಿಕೆಟ್‌ಗಳನ್ನು ಉರುಳಿಸಿ ದಾಖಲೆ ಬರೆದಿದ್ದರು.

ಈ ಅದ್ಭುತ ಸಾಧನೆಯನ್ನು ಸ್ಮರಿಸಿದ ಅವರು, ಕರ್ನಾಟಕದ ಕ್ರೀಡಾಪಟುಗಳನ್ನು ಶ್ಲಾಘಿಸಿದರು. ಅವರ ಈ ಸಂಭಾಷಣೆಯ ವೀಡಿಯೊ ತುಣಕುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದ್ದು, ಅಪಾರ ಮೆಚ್ಚುಗೆಯೂ ಸಹ ವ್ಯಕ್ತವಾಗುತ್ತಿದೆ.

Next Story

RELATED STORIES