Top

England VS India 2nd Test: ಸ್ವಿನ್ನರ್​ ರವಿಚಂದ್ರನ್​ ಅಶ್ವಿನ್​ ವಿಶೇಷ ದಾಖಲೆ

ಸ್ಟುವರ್ಟ್ ಬ್ರಾಡ್ ಅವರ ವಿಕೆಟ್ ಉರುಳುತ್ತಿದ್ದಂತೆ, ಟೆಸ್ಟ್ ಕ್ರಿಕೆಟ್​ನಲ್ಲಿ 200 ಎಡಗೈ ಬ್ಯಾಟ್ಸ್ ಮನ್ ವಿಕೆಟ್ ಪಡೆದ ಸಾಧನೆ ಸಹ ಮಾಡಿದರು

England VS India 2nd Test: ಸ್ವಿನ್ನರ್​ ರವಿಚಂದ್ರನ್​ ಅಶ್ವಿನ್​ ವಿಶೇಷ ದಾಖಲೆ
X

ಪೋಟೋ ಕೃಪೆ: ಪಿಟಿಐ​

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ನೂತನ ದಾಖಲೆ ಬರೆದಿದ್ದು, ಭಾರತದ ಮೊದಲ ಇನ್ನಿಂಗ್ಸ್ ಮೊತ್ತ 329ಕ್ಕೆ ಪ್ರತಿ ಆಗಿ ಆಂಗ್ಲರು ಪ್ರಥಮ ಇನ್ನಿಂಗ್ಸ್​ನಲ್ಲಿ 134 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿತು.

ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಬಾಥಮ್ ಅವರ 383 ವಿಕೆಟ್ ದಾಟಿ ಅಶ್ವಿನ್ ಅವರು ಮುಂದಕ್ಕೆ ಸಾಗಿದ್ದರು. ಎರಡನೇ ಟೆಸ್ಟ್ ಪಂದ್ಯದಲ್ಲಿ ಹರ್ಭಜನ್ ಸಿಂಗ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ತವರಿನಲ್ಲಿ 265 ವಿಕೆಟ್ ಕಬಳಿಸಿದ್ದ ಹರ್ಭಜನ್ ಸಿಂಗ್ ಸಾಧನೆಯನ್ನು ಅಶ್ವಿನ್ ಬ್ರೇಕ್​ ಮಾಡಿದ್ದಾರೆ.

ಜೊತೆಗೆ, ಸ್ಟುವರ್ಟ್ ಬ್ರಾಡ್ ಅವರ ವಿಕೆಟ್ ಉರುಳುತ್ತಿದ್ದಂತೆ, ಟೆಸ್ಟ್ ಕ್ರಿಕೆಟ್​ನಲ್ಲಿ 200 ಎಡಗೈ ಬ್ಯಾಟ್ಸ್ ಮನ್ ವಿಕೆಟ್ ಪಡೆದ ಸಾಧನೆ ಸಹ ಮಾಡಿದರು. ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ರವಿಚಂದ್ರನ್​ ಅಶ್ವಿನ್​ ಸಾಧನೆ

ಅಶ್ವಿನ್ ಅವರು ಒಟ್ಟು 74 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 386 ವಿಕೆಟ್ ಗಳಿಸಿದ್ದು, 28 ಬಾರಿ 5 ವಿಕೆಟ್ ಗಳಿಸಿದ್ದಾರೆ. 7 ಬಾರಿ 10 ವಿಕೆಟ್ ಪಡೆದಿದ್ದಾರೆ. 7/59 ಶ್ರೇಷ್ಠ ಪ್ರದರ್ಶನ. ಬ್ಯಾಟಿಂಗ್​ನಲ್ಲೂ ಕಮಾಲ್​ ಮಾಡಿ 4 ಟೆಸ್ಟ್ ಶತಕ, 11 ಅರ್ಧಶತಕ ಗಳಿಸಿದ್ದಾರೆ.

Next Story

RELATED STORIES