Top

England VS India 2nd Test: ಆರಂಭದಲ್ಲಿಯೇ ಎಡವಿದ ಭಾರತ 3 ವಿಕೆಟ್​ ನಷ್ಟಕ್ಕೆ 100 ರನ್​

ಈ ಪಂದ್ಯದಲ್ಲಿ ಸ್ಥಾನ ಪಡೆದಿರುವ ಸ್ಪಿನ್​ ಬೌಲರ್​ ಅಕ್ಷರ್‌ ಪಟೇಲ್‌ ಅವರ ಮೇಲೆ ಹೆಚ್ಚು ನಿರೀಕ್ಷೆ ಇಡಲಾಗಿದೆ

England VS India 2nd Test: ಆರಂಭದಲ್ಲಿಯೇ ಎಡವಿದ ಭಾರತ 3 ವಿಕೆಟ್​ ನಷ್ಟಕ್ಕೆ 100 ರನ್​
X

ಚಿತ್ರ ಕೃಪೆ: ಬಿಸಿಸಿಐ ಟ್ವಿಟರ್​

ಚೆನ್ನೈ: ಎಂ.ಎ.ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಭಾರತ 25 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 100 ರನ್‌ ಗಳಿಸಿ ಆಟ ಮುಂದುವರೆದಿದ್ದು, ಶುಭಮನ್‌ ಗಿಲ್‌ (0), ವಿರಾಟ್​ ಕೊಹ್ಲಿ(0), ಚೇತೇಶ್ವರ್​ ಪೂಜಾರ್(21) ಔಟ್​ ಆಗಿದ್ದಾರೆ.

ಇನ್ನು ಕ್ರೀಸ್​ನಲ್ಲಿ ಅಂಜಿಕ್ಯ ರಹಾನೆ (4*) ರೋಹಿತ್​ ಶರ್ಮಾ (75*) ಆಟ ಮುಂದುವರೆಸಿದ್ದಾರೆ.

3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಚೊಚ್ಚಲ ಪಂದ್ಯದಲ್ಲಿಯೇ 227 ರನ್‌ ಅಂತರದಿಂದ ಭಾರತ ತಂಡ ಸೋತಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪ್ರವೇಶಿಸಬೇಕಾದರೆ ಭಾರತ ಕ್ರಿಕೆಟ್ ತಂಡವು ಕಠಿಣ ಹಾದಿಯಲ್ಲಿ ಸಾಗುವ ಒತ್ತಡದಲ್ಲಿದೆ.

ಎರಡನೇ ಟೆಸ್ಟ್​ ಪಂದ್ಯದಲ್ಲಿ ಸ್ಥಾನ ಪಡೆದಿರುವ ಸ್ಪಿನ್​ ಬೌಲರ್​ ಅಕ್ಷರ್‌ ಪಟೇಲ್‌ ಅವರ ಮೇಲೆ ಹೆಚ್ಚು ನಿರೀಕ್ಷೆ ಇಡಲಾಗಿದೆ.

Next Story

RELATED STORIES