ENG VS IND 2nd Test: ಬ್ಯಾಟಿಂಗ್, ಬೌಲಿಂಗ್ನಲ್ಲಿ ಆರ್ ಅಶ್ವಿನ್ ಕಮಾಲ್
ಅಶ್ವಿನ್ ಅವರು ಈ ಪಂದ್ಯದಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದು ಶತಕ ಬಾರಿಸಿ ವಿಶೇಷ ದಾಖಲೆಗೆ ಬರೆದಿದ್ದಾರೆ.

ಚೆನ್ನೈನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವರು ಶತಕ ದಾಖಲಿಸಿ ಸಂಭ್ರಮಿಸಿದ ಕ್ಷಣ. ಪೋಟೋ ಕೃಪೆ: ಬಿಸಿಸಿಐ ಟ್ವಿಟರ್
ಚೆನ್ನೈ: ಪ್ರಸ್ತುತ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಉತ್ತಮ ಗುಣಮಟ್ಟದ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗದಲ್ಲಿ ಮಿಂಚಿ, ಹಲವಾರು ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ.
ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ದ್ವಿತೀಯ ಇನ್ನಿಂಗ್ಸ್ನಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಆರ್ ಅಶ್ವಿನ್ ಶತಕ ಬಾರಿಸಿದ್ದರು. ಅಶ್ವಿನ್ ಈ ಸಾಧನೆಯೊಂದಿಗೆ ದಾಖಲೆ ನಿರ್ಮಿಸಿದ್ದಾರೆ.
ಆಲ್ರೌಂಡರ್ ಆಗಿರುವ ಅಶ್ವಿನ್ ಅವರು, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದಿದ್ದರು. ಅಲ್ಲದೆ, ಭಾರತದ ದ್ವಿತೀಯ ಇನ್ನಿಂಗ್ಸ್ನಲ್ಲಿ 148 ಎಸೆತಗಳನ್ನು ಎದುರಿಸಿ 106 ರನ್ ಕಲೆಹಾಕಿದರು. ಅಶ್ವಿನ್ ಶತಕದ ನೆರವಿನಿಂದ ಭಾರತ ದ್ವಿತೀಯ ಇನ್ನಿಂಗ್ಸ್ನಲ್ಲಿ 286 ರನ್ ಬಾರಿಸಲು ಸಾಧ್ಯವಾಗಿತ್ತು.
ಸದ್ಯ ಅಶ್ವಿನ್ ಅವರು ಈ ಪಂದ್ಯದಲ್ಲಿ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದು ಶತಕ ಬಾರಿಸಿ ವಿಶೇಷ ದಾಖಲೆಗೆ ಬರೆದಿದ್ದಾರೆ.