ಐಪಿಎಲ್ ಹರಾಜು: ಎಂಟು ಮಂದಿ ವಿದೇಶಿ ಮತ್ತು ಇಬ್ಬರು ಭಾರತೀಯ ಆಟಗಾರರಿಗೆ ಮೂಲಬೆಲೆ ನಿಗದಿ
ಐಪಿಎಲ್ ವಾರ್ಷಿಕ ಟೂರ್ನಿಯೂ ಈ ವರ್ಷ ಏಪ್ರಿಲ್ ಮೇ ತಿಂಗಳಲ್ಲಿ ನಡೆಯಲಿದೆ.

ನವದೆಹಲಿ: ಐಪಿಎಲ್ ಹರಾಜಿನ ದರ ಪಟ್ಟಿಯಲ್ಲಿ 8 ಮಂದಿ ವಿದೇಶಿ ಮತ್ತು ಇಬ್ಬರು ಭಾರತೀಯ ಆಟಗಾರರಿಗೆ 2 ಕೋಟಿ ರೂ. ಮೂಲಬೆಲೆ ನಿಗದಿಪಡಿಸಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ.
ಆಸ್ಟ್ರೇಲಿಯಾದ ಆಟಗಾರ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಇಂಗ್ಲೆಂಡ್ ಆಟಗಾರ ಮೊಯೀನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಪ್ಲಂಕೆಟ್, ಜೇಸನ್ ರಾಯ್, ಮಾರ್ಕ್ ವೂಡ್, ಬಾಂಗ್ಲಾದೇಶದ ಆಲ್ರೌಂಡರ್ ಆಟಗಾರ ಶಕೀಬ್ ಅಲ್ ಹಸನ್, ಭಾರತದ ಖ್ಯಾತ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಹಾಗೂ ಕೇದಾರ ಜಾಧವ್ ಅವರು ಗರಿಷ್ಠ ಮೂಲಬೆಲೆ ನಿಗದಿ ಆಗಿರುವ ಪಟ್ಟಿಯಲ್ಲಿದ್ದಾರೆ.
ಫೆಬ್ರುವರಿ 18ರಂದು ಚೆನ್ನೈಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, 164 ಭಾರತೀಯ ಆಟಗಾರರು, 125 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 292 ಮಂದಿಯನ್ನು ಹರಾಜಿನಲ್ಲಿದ್ದಾರೆ.
ಈ ಬಾರಿ ಒಟ್ಟು 1,114 ಆಟಗಾರರು ನೋಂದಣಿ ಮಾಡಿಕೊಂಡಿದ್ದರು. 8 ತಂಡಗಳು ಸಂಭಾವ್ಯ ಆಟಗಾರರ ಪಟ್ಟಿಯನ್ನು ನೀಡಿದ ನಂತರ ಆಟಗಾರರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.
ಐಪಿಎಲ್ ವಾರ್ಷಿಕ ಟೂರ್ನಿಯೂ ಈ ವರ್ಷ ಏಪ್ರಿಲ್ ಮೇ ತಿಂಗಳಲ್ಲಿ ನಡೆಯಲಿದೆ.