Top

T20 Cricket: ಬಟ್ಲರ್-ಮಲಾನ್‌ ಭರ್ಜರಿ ಬ್ಯಾಟಿಂಗ್​; ಆಸ್ಪ್ರೇಲಿಯಾ ವಿರುದ್ಧ ಸರಣಿ ಗೆದ್ದ ಆಂಗ್ಲರು

  • ಇಂಗ್ಲೆಂಡ್​ ತಂಡ ಅಂತಿಮವಾಗಿ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 158 ರನ್ ಗುರಿ ತಲುಪಿತು.
  • ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿತು.
  • ಜಾಸ್‌ ಬಟ್ಲರ್‌ ಹಾಗೂ ಡೇವಿಡ್‌ ಮಲಾನ್‌ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ.

T20 Cricket: ಬಟ್ಲರ್-ಮಲಾನ್‌ ಭರ್ಜರಿ ಬ್ಯಾಟಿಂಗ್​; ಆಸ್ಪ್ರೇಲಿಯಾ ವಿರುದ್ಧ ಸರಣಿ  ಗೆದ್ದ ಆಂಗ್ಲರು
X

Buttler and Malan once again dazzled with the bat for England

ಇಂಗ್ಲೆಂಡ್​, ಸೌತಾಂಪ್ಟನ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲೂ ಇಂಗ್ಲೆಂಡ್​ ತಂಡ ಜಯ ಸಾಧಿಸಿ ಟಿ20 ಮೂರು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಲು ಮುಂದಾಯಿತು. ಇಂಗ್ಲೆಂಡ್​​ ತಂಡದ ವೇಗಿ ಜೋಫ್ರಾ ಆರ್ಚರ್‌ ಎಸೆದ ಮೊದಲ ಓವರ್‌ನಲ್ಲಿಯೇ ಓಪನರ್​ ಡೇವಿಡ್ ವಾರ್ನರ್ (0) ವಿಕೆಟ್‌ ಪತನವಾಗಿ ಆಸೀಸ್​ಗೆ ಆಘಾತ ನೀಡಿದರು. ಅಲೆಕ್ಸ್‌ ಕಾರಿ (2), ಸ್ಟೀವ್‌ ಸ್ಮಿತ್‌ (10) ಈ ಜೋಡಿಗಳು ಸಹ ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ. ಈ ನಡುವೆ ನಾಯಕ ಆ್ಯರನ್‌ ಫಿಂಚ್ (40)‌ ತಮ್ಮ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕವನ್ನು ದೂರ ಮಾಡಿದರು. ಫಿಂಚ್​ ಮಾರ್ಕಸ್ ಸ್ಟೊಯಿನಿಸ್‌, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆ್ಯಶ್ಟನ್ ಅಗರ್ ಜೊತೆಗೂಡಿ ಉತ್ತಮ ಆಟವಾಡಿದರು.

ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿತು.

ಈ ಮೊತ್ತವನ್ನು ಬೆನ್ನತ್ತಿದ ಆಂಗ್ಲರು ಲೀಲಾಜಾಲವಾಗಿ ಬ್ಯಾಟ್‌ ಬೀಸಿ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಕೇಕೆ ಹಾಕಿತು. ಮೊದಲ ಪಂದ್ಯದಲ್ಲಿಯೂ ಮಿಂಚಿದ್ದ ಜಾಸ್‌ ಬಟ್ಲರ್‌ ಹಾಗೂ ಡೇವಿಡ್‌ ಮಲಾನ್‌ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ತಂಡದ ಗೆಲುವಿಗೆ ಕಾರಣರಾದರು. 54 ಎಸೆಗಳನ್ನು ಎದುರಿಸಿ ಔಟಾಗದೆ ಉಳಿದ ಬಟ್ಲರ್‌ 8 ಬೌಂಡರಿ, 2 ಸಿಕ್ಸರ್‌ ಸಹಿತ 77 ರನ್‌ ದಾಖಲಿಸಿದರು, ಮಲಾನ್‌ 32 ಎಸೆತಗಳನ್ನು ಎದುರಿಸಿ 42 ರನ್‌ ಗಳಿಸಿದರು. ಇಂಗ್ಲೆಂಡ್​ ತಂಡ ಅಂತಿಮವಾಗಿ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 158 ರನ್ ಗುರಿ ತಲುಪಿತು.

ಸ್ಕೋರ್‌ ಬೋರ್ಡ್​

ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 7 ವಿಕೆಟ್​​ ನಷ್ಟಕ್ಕೆ 157 (ಆ್ಯರನ್ ಫಿಂಚ್ 40, ಮಾರ್ಕಸ್ ಸ್ಟೊಯಿನಿಸ್ 35, ಗ್ಲೆನ್ ಮ್ಯಾಕ್ಸ್‌ವೆಲ್ 26, ಆ್ಯಶ್ಟನ್ ಅಗರ್ 23; ಜೊಫ್ರಾ ಆರ್ಚರ್‌ 32ಕ್ಕೆ1, ಮಾರ್ಕ್ ವುಡ್ 25ಕ್ಕೆ1, ಆದಿಲ್ ರಶೀದ್ 25ಕ್ಕೆ1, ಕ್ರಿಸ್ ಜೋರ್ಡನ್ 40ಕ್ಕೆ2).

ಇಂಗ್ಲೆಂಡ್‌: 18.5 ಓವರ್‌ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 158 (ಜಾಸ್‌ ಬಟ್ಲರ್‌ 77, ಡೇವಿಡ್‌ ಮಲಾನ್ 42, ಆ್ಯಶ್ಟನ್ ಅಗರ್ 27ಕ್ಕೆ2, ಮಿಚೇಲ್‌ ಸ್ಟಾರ್ಕ್‌ 25ಕ್ಕೆ 1, ಆ್ಯಡಂ ಜಂಪಾ 42ಕ್ಕೆ 1)


Next Story

RELATED STORIES