Top

ತಮ್ಮ 100ನೇ ಟೆಸ್ಟ್​ ಪಂದ್ಯದಲ್ಲಿ ಶತಕ ದಾಖಲಿಸಿದ ಜೋ ರೂಟ್​

ಲಂಕಾ ವಿರುದ್ಧ 10 ಪಂದ್ಯಗಳಿಂದ 4, ಆಸ್ಟ್ರೇಲಿಯಾ ವಿರುದ್ಧ 24 ಪಂದ್ಯಗಳಿಂದ 3, ವೆಸ್ಟ್ ಇಂಡೀಸ್ ವಿರುದ್ಧ 11 ಪಂದ್ಯಗಳಿಂದ 3 ಶತಕ ಗಳಿಸಿದ್ದಾರೆ

ತಮ್ಮ 100ನೇ ಟೆಸ್ಟ್​ ಪಂದ್ಯದಲ್ಲಿ ಶತಕ ದಾಖಲಿಸಿದ ಜೋ ರೂಟ್​
X

ಚೆನ್ನೈ: ಟೆಸ್ಟ್​ ಕ್ರಿಕೆಟ್​ನ ವೃತ್ತಿ ಬದುಕಿನಲ್ಲಿ 100ನೇ ಪಂದ್ಯವಾಡುತ್ತಿರುವ ಇಂಗ್ಲೆಂಡ್ ತಂಡ ನಾಯಕ ಜೋ ರೂಟ್ ಅವರು ಟೀಂ ಇಂಡಿಯಾ ವಿರುದ್ಧ ಚೆನ್ನೈನ ಎಂ.ಚಿದಂಬರಂ ಮೈದಾನದಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 100 ರನ್ ಗಡಿ ದಾಟಿ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಜೋ ರೂಟ್(30) ಅವರು 100ನೇ ಪಂದ್ಯವಾಡುತ್ತಿರುವ 15ನೇ ಇಂಗ್ಲೆಂಡ್ ಆಟಗಾರ ಎನಿಸಿಕೊಂಡಿದ್ದು, 100ನೇ ಪಂದ್ಯದಲ್ಲಿ 100ರನ್ ಗಳಿಸಿದ ಜಗತ್ತಿನ 9ನೇ ಆಟಗಾರರಾಗಿದ್ದಾರೆ. ಇಂಗ್ಲೆಂಡ್ ಪರ ಅತ್ಯಧಿಕ ರನ್ ಗಳಿಸಿರುವ ಆಟಗಾರರ ಪೈಕಿ ಸರ್ ಅಲೆಸ್ಟರ್ ಕುಕ್, ಗ್ರಹಾಂ ಗೂಚ್ ಹಾಗೂ ಅಲೆಕ್ ಸ್ಟುವರ್ಟ್ ಆನಂತರದ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಪಂದ್ಯದಲ್ಲಿ 100ರನ್ ಗಳಿಸಿ ತಮ್ಮ ವೃತ್ತಿ ಬದುಕಿನ 20ನೇ ಶತಕ ಪೂರೈಸಿದರು. 164ಎಸೆತಗಳಲ್ಲಿ 100ರನ್ ಗಳಿಸಿದ್ದಾಗ ಇಂಗ್ಲೆಂಡ್ ಮೊತ್ತ 227/2 ಆಗಿತ್ತು. ಮತ್ತೊಂದು ಕಡೆ ಸಿಬ್ಲಿ 83 ರನ್ ಗಳಿಸಿದ್ದರು. 2021ರಲ್ಲಿ ಉತ್ತಮ ಲಯದಲ್ಲಿರುವ ಜೋ ರೂಟ್ ಅವರು ಶ್ರೀಲಂಕಾ ವಿರುದ್ಧ ಎರಡು ಹಾಗೂ ಈ ಪಂದ್ಯದಲ್ಲಿ ಶತಕ ಬಾರಿಸಿ ಸತತ 3 ಟೆಸ್ಟ್ ಗಳಲ್ಲಿ 3 ಶತಕ ಗಳಿಸಿದ್ದಾರೆ.

ಜೋ ರೂಟ್ ಭಾರತ ವಿರುದ್ಧ 17 ಪಂದ್ಯಗಳನ್ನಾಡಿದ್ದು, 5 ಶತಕ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧ 10 ಪಂದ್ಯಗಳಿಂದ 4, ಆಸ್ಟ್ರೇಲಿಯಾ ವಿರುದ್ಧ 24 ಪಂದ್ಯಗಳಿಂದ 3, ವೆಸ್ಟ್ ಇಂಡೀಸ್ ವಿರುದ್ಧ 11 ಪಂದ್ಯಗಳಿಂದ 3 ಶತಕ ಗಳಿಸಿದ್ದಾರೆ.

Next Story

RELATED STORIES