Top

ಶಿಬಿರದಲ್ಲಿ ಭಾಗವಹಿಸಿದ ಆರ್​ಸಿಬಿ ತಂಡ

ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ಭಾಗವಹಿಸಿದ ಆರ್​ಸಿಬಿ ತಂಡ
X

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಆವೃತ್ತಿಯ ಪ್ರಶಸ್ತಿ ಗೆಲ್ಲುವ ಮತ್ತೊಂದು ಆಸೆಯೊಂದಿಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು(ಆರ್​ಸಿಬಿ) ತಂಡವು ಮಂಗಳವಾರ ತಾಲೀಮು ಆರಂಭಿಸಿದ್ದು, ಒಂಬತ್ತು ದಿನಗಳ ಶಿಬಿರದಲ್ಲಿ ಆರ್‌ಸಿಬಿ ತಂಡ 11 ಆಟಗಾರರ ಕಂಡಿಷನಿಂಗ್ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಭಾರತ ತಂಡದ ಆಟಗಾರರಾದ ಸ್ಪಿನ್ನರ್ ಯಜುವೇಂದ್ರ ಚಾಹಲ್, ಮಧ್ಯಮವೇಗಿಗಳಾದ ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಶಾಬಾಜ್ ಅಹಮದ್, ಪವನ್ ದೇಶಪಾಂಡೆ, ಮೊಹಮ್ಮದ್ ಅಜರುದ್ದೀನ್, ಸಚಿನ್ ಬೇಬಿ, ಸುಯಶ್ ಪ್ರಭುದೇಸಾಯಿ, ಕೆ.ಎಸ್. ಭರತ್, ರಜತ್ ಪಾಟೀದಾರ್ ತಾಲೀಮಿನಲ್ಲಿ ಭಾಗವಹಿಸುವರು.

ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ನೇತೃತ್ವದಲ್ಲಿ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದೆ.

Next Story

RELATED STORIES