Top

ಅಖಂಡ ಶ್ರೀನಿವಾಸ್​ ಮೂರ್ತಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ - ಡಿ.ಕೆ ಶಿವಕುಮಾರ್ ಭರವಸೆ

ಪಕ್ಷದಿಂದ ಉಚ್ಛಾಟಿಸುವಂತೆ ಪತ್ರ ಕೊಟ್ಟಿದ್ದಾರೆ. ಆದರೆ, ಏಕಾಏಕಿ ನಿರ್ಧಾರ ತೆಗೆದುಕೊಳ್ಳೋದು ಕಷ್ಟ.

ಅಖಂಡ ಶ್ರೀನಿವಾಸ್​ ಮೂರ್ತಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ - ಡಿ.ಕೆ ಶಿವಕುಮಾರ್ ಭರವಸೆ
X

ಬೆಂಗಳೂರು: ಅಖಂಡ ಶ್ರೀನಿವಾಸ್ ಮೂರ್ತಿ ಇವತ್ತು ಮನವಿ ಮಾಡಿದ್ದಾರೆ ಅವರ ಮನವಿಯನ್ನ ಆಲಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಅಖಂಡ ಶ್ರೀನಿವಾಸ್ ಮೂರ್ತಿ ಅವರಿಗೆ ಅನ್ಯಾಯ ಆಗಿರೋದು ಗೊತ್ತಿದೆ. ನನಗೂ ತುಂಬಾ ನೋವಾಗಿದೆ. ಸಂಪತ್ ರಾಜ್ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದರು.

ಇನ್ನು ಪಕ್ಷದಿಂದ ಉಚ್ಛಾಟಿಸುವಂತೆ ಪತ್ರ ಕೊಟ್ಟಿದ್ದಾರೆ. ಆದರೆ, ಏಕಾಏಕಿ ನಿರ್ಧಾರ ತೆಗೆದುಕೊಳ್ಳೋದು ಕಷ್ಟ. ನಮ್ಮಲ್ಲಿ ಶಿಸ್ತು ಸಮಿತಿ ಇದೆ. ಶಿಸ್ತು ಸಮಿತಿಯ ಮುಂದೆ ತಂದು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಸದ್ಯ ಚಾರ್ಜ್​ಶೀಟ್​ನಲ್ಲಿ ಕೆಲವರ ಹೆಸರು ಹಾಕಿದ್ದಾರೆ. ಒತ್ತಡದಿಂದಾಗಿ ಪೊಲೀಸರು ಚಾರ್ಜ್​ಶೀಟ್ ಹಾಕಿರಬಹುದು. ಅವರ ಮೇಲೆ ಪೊಲೀಸರು, ಬಿಜೆಪಿಯವರ ಒತ್ತಡವಿದೆ. ಹೀಗಾಗಿ ಏಕಾಏಕಿ ಏನೂ ಮಾಡೋಕೆ ಆಗಲ್ಲ. ನೀವುಗಳೇ ಇದನ್ನ ಇಷ್ಟು ದೊಡ್ಡದು ಮಾಡುತ್ತಿರೋದು. ಅಖಂಡಗೆ ನ್ಯಾಯ ದೊರಕಿಸಿ ಕೊಡುತ್ತೇವೆ ಎಂದು ಡಿಕೆಶಿ ಅವರು ತಿಳಿಸಿದರು.

Next Story

RELATED STORIES