Top

ಪೊಲೀಸರ ನಡವಳಿಕೆ ಖಂಡನೀಯ; ನಾವು ಆಯೋಗಕ್ಕೆ ದೂರು ನೀಡುತ್ತೇವೆ - ಸಿದ್ದರಾಮಯ್ಯ

ನಾಮಪತ್ರ ಸಲ್ಲಿಕೆಗೆ ಹೋಗುತ್ತಿದ್ದಾಗ ಬಲವಂತವಾಗಿ ಅಲ್ಲಿದ್ದ ಪೊಲೀಸರು ತಡೆಯುವ ಪ್ರಯತ್ನ ಮಾಡಿದ್ದಾರೆ.

ಪೊಲೀಸರ ನಡವಳಿಕೆ ಖಂಡನೀಯ; ನಾವು ಆಯೋಗಕ್ಕೆ ದೂರು ನೀಡುತ್ತೇವೆ - ಸಿದ್ದರಾಮಯ್ಯ
X

ಬೆಂಗಳೂರು: ನಮ್ಮ ಚಾಲಕರು, ಅಭ್ಯರ್ಥಿ ಮೇಲೆ ಕೇಸ್ ಹಾಕಿದ್ದಾರೆ. ನಾಮಪತ್ರ ಸಲ್ಲಿಕೆಗೆ ಹೋಗುತ್ತಿದ್ದಾಗ ಬಲವಂತವಾಗಿ ಅಲ್ಲಿದ್ದ ಪೊಲೀಸರು ತಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.

ಪ್ರತಿಕಾ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, ನಾಮಪತ್ರ ಸಲ್ಲಿಕೆಗೆ ಅಡ್ಡಿ ಮಾಡಿದ್ದಾರೆ. ಕುಸುಮಾ, ನಮ್ಮ ಚಾಲಕರ ಮೇಲೆ ಕೇಸ್ ಹಾಕಿದ್ದು ಸರಿಯಲ್ಲ. ಇದು ಬಿಜೆಪಿಯ ಸರ್ವಾಧಿಕಾರಿ ಧೋರಣೆ ತೋರುತ್ತದೆ. ಇದರಲ್ಲಿ ಸರ್ಕಾರದ ಕೈವಾಡ ಎದ್ದು ಕಾಣುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಚುನಾವಣೆಗಳು ಆಯೋಗದ ಕಣ್ಗಾವಲಲ್ಲಿ ನಡೆಯಬೇಕು. ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಬಿಜೆಪಿ ನಾಯಕರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಆದರೆ, ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಪೊಲೀಸರ ನಡವಳಿಕೆ ಖಂಡನೀಯವಾದುದು ಇದರ ಬಗ್ಗೆ ನಾವು ಆಯೋಗಕ್ಕೆ ದೂರು ನೀಡುತ್ತೇವೆ ಎಂದಿದ್ದಾರೆ.

ಸದ್ಯ ರಾಜಕೀಯವಾಗಿ ಎದುರಿಸಲು ಬಿಜೆಪಿಗೆ ಶಕ್ತಿಯಿಲ್ಲ. ಈ ರೀತಿ ನಮ್ಮನ್ನ ನಿಯಂತ್ರಿಸೋಕೆ ನೋಡುತ್ತಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

Next Story

RELATED STORIES